ಪಾಕೆಟ್ ಮನಿಗಾಗಿ ನಟನೆ ಮಾಡಲು ಮುಂದಾದ ನಟಿ ಈಗ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟಿ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗಕ್ಕೆ ಹಲವಾರು ಪ್ರತಿಭಾನ್ವಿತ ಯುವಕ ಹಾಗೂ ಯುವತಿಯರು ಹಲವಾರು ಕನಸಿಟ್ಟುಕೊಂಡು ಬರುತ್ತಾರೆ. ಆದರೆ ಅದರಲ್ಲಿ ಯಶಸ್ವಿಯಾಗುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪರಿಶ್ರಮ ಹಾಗೂ ಕಷ್ಟದ ಜೊತೆಗೆ ಅದೃಷ್ಟ ಕೂಡ ಇರಲೇಬೇಕು ಎಂಬುದು ನೀವೆಲ್ಲಾ ಈಗಾಗಲೇ ಅರಿತುಕೊಂಡಿದ್ದೀರಿ.

ಸ್ನೇಹಿತರೆ ನಿಮಗೆಲ್ಲ ರಾಕುಲ್ ಪ್ರೀತ್ ಸಿಂಗ್ ರವರ ಬಗ್ಗೆ ಗೊತ್ತೇ ಇದೆ. ಹತ್ತು ವರ್ಷಗಳ ಹಿಂದೆ ನವರಸನಾಯಕ ಜಗ್ಗೇಶ್ ಅವರ ಪುತ್ರ ಗುರು ನಟನೆಯ ಗಿಲ್ಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಕನ್ನಡ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿರುವ ನಟಿ ಇಂದು ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ರಾಕುಲ್ ಪ್ರೀತ್ ಸಿಂಗ್ ರವರು ಈಗಾಗಲೇ ಕನ್ನಡ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ.

ಇನ್ನು ಸ್ನೇಹಿತರೆ ರಾಕುಲ್ ಪ್ರೀತ್ ಸಿಂಗ್ ಅವರು ಮೊದಲಿಗೆ ಪಾದಾರ್ಪಣೆ ಮಾಡಿದ್ದು ಕೇವಲ ಪಾಕೆಟ್ ಮನಿಗಾಗಿ ಮಾತ್ರವಂತೆ. ಆದರೆ ಇಂದು ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಪ್ರತಿಯೊಂದು ಚಿತ್ರಕ್ಕೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದು ಕನ್ನಡ ಚಿತ್ರರಂಗದಲ್ಲಿ ಯುವ ನಟಿಯಾಗಿ ಕಾಣಿಸಿಕೊಂಡಿದ್ದ ರಾಕುಲ್ ಪ್ರೀತ್ ಸಿಂಗ್ ರವರು ಇಂದು ಹತ್ತು ವರ್ಷದ ನಂತರ ಭಾರತೀಯ ಚಿತ್ರರಂಗದಲ್ಲಿ ಯಾರು ಕೂಡ ಊಹಿಸಲಾಗದಂತಹ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಇನ್ನು ಕಳೆದ ಹತ್ತು ವರ್ಷಗಳಿಂದ ರಾಕುಲ್ ಪ್ರೀತ್ ಸಿಂಗ್ ರವರು ಬಹುಭಾಷೆಗಳಲ್ಲಿ 31ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇಂದಿಗೂ ಕೂಡ ತಮ್ಮ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವ ನಟಿಯರಲ್ಲಿ ರಾಕುಲ್ ಪ್ರೀತಿ ರವರು ಕೂಡ ಒಬ್ಬರು. ರಾಕುಲ್ ಪ್ರೀತ್ ಸಿಂಗ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.