ರಾಮು ರವರು ತಮ್ಮ ಕುಟುಂಬ ವಾಸ ಮಾಡಲು ಕಟ್ಟಿಸಿದ್ದ ಅರಮನೆಯಂತಹ ಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಯಿಂದಾಗಿ ನಾವು ಕನ್ನಡ ಚಿತ್ರರಂಗದ ಅದೆಷ್ಟೋ ನಟ ನಿರ್ಮಾಪಕ ನಿರ್ದೇಶಕರನ್ನು ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಂಗದ ಅದೆಷ್ಟೋ ಪ್ರತಿಭೆಗಳು ಮಾತ್ರವಲ್ಲದೆ ದೇಶಾದ್ಯಂತ ಹಲವಾರು ನಟರು ನಮ್ಮನ್ನು ಅಗಲಿದ್ದಾರೆ. ಇನ್ನು ನಾವು ಹೇಳೋಕೆ ಹೊರಟಿರುವುದು ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕರು ಎಂದು ಖ್ಯಾತರಾಗಿರುವ ಕೋಟಿ ರಾಮು ರವರ ಬಗ್ಗೆ.

ಕೋಟಿ ರಾಮು ರವರು ಮೊದಲು ವಿತರಕರಾಗಿ ನಂತರ ದಿನಗಳಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ನಿರ್ಮಾಪಕರಾಗಿ ನಂತರ ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಬಂಡವಾಳವನ್ನು ಹೂಡಿ ಸಾಕ್ಷಾತ್ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರಿಂದಲೇ ಕೋಟಿ ನಿರ್ಮಾಪಕರು ಎಂದು ಕರೆಸಿಕೊಂಡ ನಿರ್ಮಾಪಕರು ನಮ್ಮ ನೆಚ್ಚಿನ ಕೋಟಿ ರಾಮು ರವರು. ಅವರು ಚಿತ್ರರಂಗದಲ್ಲಿ ಒಮ್ಮೆಲೆ ಮೇಲೆ ಬಂದವರಲ್ಲ. ಹಂತಹಂತವಾಗಿ ತಮ್ಮ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಾಧನೆಯನ್ನು ಸಾಬೀತು ಪಡಿಸಿ ಕೋಟಿ ನಿರ್ಮಾಪಕ ರಾಮು ಅವರು.

ಇನ್ನು ಅವರ ಪತ್ನಿ ಮಾಲಾಶ್ರೀಯ ರವರ ಬಗ್ಗೆ ಹೇಳುವುದಾದರೆ ಅಂದಿನ ಕಾಲದಲ್ಲಿ ನಟಿ ಮಾಲಾಶ್ರೀ ರವರು ಚಂದನವನ್ನಕೆ ಕಾಲಿಟ್ಟ ಸಮಯದಲ್ಲಿ ಸೂಪರ್ ಸ್ಟಾರ್ ನಟರೊಂದಿಗೆ ನಟಿಸಿ ಸೂಪರ್ ಸ್ಟಾರ್ ನಟಿ ಎಂದು ಖ್ಯಾತಿಯನ್ನು ಪಡೆದಿದ್ದಾರೆ. ಮಾಲಾಶ್ರೀ ಅವರ ನಟನೆಯನ್ನು ನೋಡಲೆಂದೇ ಪ್ರೇಕ್ಷಕರು ಸಿನಿಮಾ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದರು. ನಟಿ ಮಾಲಾಶ್ರೀ ಅವರ ಸಿನಿಮಾ ಎಂದರೆ ಚಿತ್ರ ಮಂದಿರಗಳ ಹೊರಗೆ ಹೌಸ್ ಫುಲ್ ಬೋರ್ಡ್ ಸದಾ ಕಾಣುತ್ತಿತ್ತು.

ನಂತರದ ದಿನಗಳಲ್ಲಿ ಮಾಲಾಶ್ರೀ ರವರು ಕನ್ನಡ ಪ್ರೇಕ್ಷಕರಿಂದ ಕನಸಿನ ರಾಣಿ ಎಂದು ಕರೆಯಲ್ಪಡುತ್ತಾರೆ. ನಂತರ ಕೋಟಿ ರಾಮು ಅವರನ್ನು ವಿವಾಹವಾದ ಮೇಲೆ ನಟಿ ಮಾಲಾಶ್ರೀ ಚಿತ್ರರಂಗದಿಂದ ಕೊಂಚ ಕೊಂಚವಾಗಿ ದೂರ ಸರಿಯುತ್ತಾರೆ. ಆದರೂ ಪ್ರತಿ ಕೋಟಿ ರಾಮುರವರ ಇಚ್ಛೆಯಂತೆ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬಂದು ಲೇಡೀಸ್ ಸೂಪರ್ಸ್ಟಾರ್ ತರಹದ ಚಿತ್ರಗಳ ನಟಿಸಿ ಕನ್ನಡ ಚಿತ್ರರಂಗದಿಂದ ಮತ್ತೊಮ್ಮೆ ಚಪ್ಪಾಳೆ ಗಿಟ್ಟಿಸಿಕೊಂಡರು. ಇಂದಿಗೂ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ಎಂದು ಖ್ಯಾತರಾಗಿದ್ದಾರೆ. ನಟಿ ಮಾಲಾಶ್ರೀ ಅವರು ಯಾವ ಹೀರೋಗಳಿಗೂ ಕಮ್ಮಿ ಇಲ್ಲದಂತೆ ಲೇಡಿ ಸೂಪರ್ಸ್ಟಾರ್ ಮಾದರಿಯ ಚಿತ್ರಗಳಲ್ಲಿ ನಟಿಸಿದ್ದರು.

ಹಾಗಾಗಿ ಇಂದಿಗೂ ಈ ಮಾದರಿಯ ಚಿತ್ರಗಳಲ್ಲಿ ಕನ್ನಡದ ಯಾವ ನಟಿಯರು ಮಾಲಾಶ್ರೀಯವರ ಸಮಕ್ಕೆ ಇಂದಿಗೂ ಬಂದಿಲ್ಲ. ಕನಸಿನ ರಾಣಿಯಿಂದ ಲೇಡೀಸ್ ಸೂಪರ್ಸ್ಟಾರ್ ಆಗುವವರೆಗೆ ಮಾಲಾಶ್ರೀ ಅವರಿಗೆ ಅವರ ಪತಿ ನಿರ್ಮಾಪಕ ಕೋಟಿ ರಾಮು ರವರ ಸಂಪೂರ್ಣ ಬೆಂಬಲವಿತ್ತು. ಇದೀಗ ಕೋಟಿ ರಾಮುಲು ಅವರನ್ನು ಕಳೆದುಕೊಂಡ ಮಾಲಾಶ್ರೀ ಹಾಗೂ ಕುಟುಂಬ ದುಃಖತಪ್ತರಾಗಿದ್ದಾರೆ. ಕೋಟಿ ರಾಮು ರವರು ತಮ್ಮ ಕುಟುಂಬಕ್ಕೆ ಬಿಟ್ಟುಹೋದ ಆಸ್ತಿ ಎಷ್ಟು ಗೊತ್ತಾ.

ಹೌದು ತಮ್ಮ ಕೊನೆಯ ದಿನಗಳವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಿರ್ಮಾಪಕ ಕೋಟಿ ರಾಮು ಸರಿ ಸುಮಾರು 30ರಿಂದ 40 ಕೋಟಿಯಷ್ಟು ಆಸ್ತಿ ಪ್ರಶಸ್ತಿಯನ್ನು ತಮ್ಮ ಹೆಂಡತಿ ಹಾಗೂ ಮಕ್ಕಳಿಗೆ ಬಿಟ್ಟು ಹೋಗಿದ್ದಾರೆ. ಜಯನಗರದಲ್ಲಿ ತಮ್ಮ ಕುಟುಂಬಕ್ಕೂ ಮೂರಂತಸ್ತಿನ ಐಷಾರಾಮಿ ಮನೆಯನ್ನು ಸಹ ಮಾಡಿದ್ದಾರೆ. ತಮ್ಮ ಮಗಳನ್ನು ನಾಯಕಿ ನಟಿಯಾಗಿ ಸಿನಿಮಾದಲ್ಲಿ ಲಾಂಚ್ ಮಾಡುವುದಾಗಿ ಕನಸು ಕಂಡಿದ್ದ ನಿರ್ಮಾಪಕ ಕೋಟಿ ರಾಮು ಆ ಕನಸನ್ನು ನನಸು ಮಾಡುವ ಮೊದಲೇ ಇಹಲೋಕ ತ್ಯಜಿಸಿರುವುದು ಬಹಳ ದುಃಖದ ಸಂಗತಿ. ನಿರ್ಮಾಪಕ ರಾಮು ಹಾಗೂ ಮಾಲಾಶ್ರೀ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ತಿಳಿಸಿ.