ಕಳೆದು ಹೋಗಿರುವ ಜನಪ್ರಿಯತೆ ಪಡೆಯಲು ಹೊಸ ದಾರಿ ಹಿಡಿಯಲು ಮುಂದಾದ ರಿಯಾ ಚಕ್ರವರ್ತಿ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ಸುಶಾಂತ್ ರಜಪೂತ್ ಸಿಂಗ್ ನಮ್ಮನ್ನಗಲಿದ್ದು ಬಾಲಿವುಡ್ ಗೆ ಮಾತ್ರವಲ್ಲ ಇಡೀ ಭಾರತದ ಸಿನಿಕ್ಷೇತ್ರದಲ್ಲಿಯೇ ತುಂಬಲಾರದ ನಷ್ಟ. ಒಂದು ಅದ್ಭುತ ಪ್ರತಿಭೆ, ಉತ್ತಮ ವ್ಯಕ್ತಿತ್ವ ಹೊಂದಿದ್ದ ಸಾತ್ವಿಕ ಮನಸ್ಸಿನ ಸುಶಾಂತ್ ನಮ್ಮನ್ನು ಅಗಲಿ ವರ್ಷಗಳೇ ಕಳೆದು ಹೋಯ್ತು. ಇದರಿಂದ ಇವರ ಪ್ರೇಮಿ ರಿಯಾ ಚಕ್ರವರ್ತಿ ಕೂಡ ಸಾಕಷ್ಟು ನೊಂದಿದ್ರು.

ಸುಶಾಂತ್ ಹೋದನಂತರ ಅವರ ಸುತ್ತ ಸುಮಾರು ಕಥೆಗಳು ಹುಟ್ಟಿಕೊಂಡವು, ಅದರಲ್ಲಿ ರಿಯಾ ಮುಖ್ಯ ಪಾತ್ರಧಾರಿಯಾಗಿ ಕೂಡ ಕಾಣಿಸಿಕೊಂಡ್ರು. ವಿವಿಧ ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾ ಸೆರೆಮನೆ ವಾಸವನ್ನೂ ಅನುಭವಿಸಿದ್ರು. ಇದೀಗ ಜಾಮೀನಿನ ಮೇಲೆ ಹೊರಗಡೆ ಬಂದಿರುವ ರಿಯಾ ಚಕ್ರವರ್ತಿ ಬಗ್ಗೆ ಇನ್ನೊಂದು ಹೊಸ ಸುದ್ದಿ ಹರಿದಾಡ್ತಾ ಇದೆ.

ಹೌದು ಹಿಂದಿ ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ 15 ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಫೈನಲ್ ಸಿದ್ಧತೆ ಭರದಿಂದ ಸಾಗಿದೆ. ಇದರ ನಡುವೆ ಬಿಗ್ ಬಾಸ್ 15ರ ಸ್ಪರ್ಧಿಗಳು ಯಾರು ಎಂಬ ಊಹೆಗಳೂ ಶುರುವಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹೋಸ್ಟಿಂಗ್ ಮಾಡೋ ಬಿಗ್ ಬಾಸ್ 15 ರಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಕೂಡ ಒಬ್ಬ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸುಶಾಂತ್ ಅವರ ಮಾಜಿ ಪ್ರೇಮಿ ಅಂಕಿತಾ ಲೋಖಂಡೆ ಕೂಡ ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಗಾಸಿಪ್ ಇತ್ತು ಆದರೆ ಇದನ್ನು ಅಂಕಿತಾ ತಳ್ಳಿಹಾಕಿದ್ದಾರೆ. ಇನ್ನು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ರಿಯಾ ಬಂದ್ರೆ ಅವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತೆ ಇದು ಈವರೆಗಿನ ಸ್ಪರ್ಧಿಗಳಲ್ಲಿಯೇ ಹೆಚ್ಚಿನ ಮೊತ್ತ ಎಂದೂ ಹೇಳಲಾಗುತ್ತಿದೆ. ವಾರವೊಂದಕ್ಕೆ 35 ಲಕ್ಷ ಸಂಭಾವನೆ ಪಡೆಯಲಿದ್ದಾರಂತೆ ರಿಯಾ. ಆದರೆ ಈ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನೂ ಹೊರಬಂದಿಲ್ಲವಾದರೂ ಬಿಗ್ ಬಾಸ್ ಪ್ರೀಮಿಯರ್ ಚಿತ್ರೀಕರಣದ ವೇಳೆ ರಿಯಾ ಕಾಣಿಸಿಕೊಂಡಿದ್ದು ಈ ಸುದ್ಧಿಗೆ ಇನ್ನಷ್ಟು ಪುಷ್ಠಿ ನೀಡಿದೆ.