ಐಟಂ ಸಾಂಗ್ ನಲ್ಲಿ ಮಿಂಚಿರುವ ಸಮಂತಾ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಕರುನಾಡಿನ ಕ್ರಶ್ ರಶ್ಮಿಕಾ ಮಂದಣ್ಣ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಿಂದ ತನ್ನ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ಈಗ ಭಾರತ ಚಿತ್ರರಂಗದ ಅತ್ಯಂತ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ನವರು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ಬಿಡುಗಡೆಯಾಗಿ ಭಾರತ ಚಿತ್ರರಂಗದಾದ್ಯಂತ ಬಾಕ್ಸಾಫೀಸ್ ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಹೊಂದಿದಂತಹ ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿತು.

ಐಟಂ ಸಾಂಗ್ ನಲ್ಲಿ ಮಿಂಚಿರುವ ಸಮಂತಾ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಕರುನಾಡಿನ ಕ್ರಶ್ ರಶ್ಮಿಕಾ ಮಂದಣ್ಣ. ಏನು ಗೊತ್ತೇ?? 2

ಇಷ್ಟು ಮಾತ್ರವಲ್ಲದೆ ಕೇವಲ ಒಳ್ಳೆಯ ಕೆಲಸಗಳಿಗಾಗಿ ಮಾತ್ರವಲ್ಲದೆ ಕೆಲವೊಂದು ಇಷ್ಟವಾಗದ ಕೆಲಸಗಳಿಗೂ ಕೂಡ ರಶ್ಮಿಕ ಮಂದಣ್ಣ ನವರು ಸುದ್ದಿಯಾಗಿದ್ದಾರೆ. ಅದೇನೆಂದರೆ ಕನ್ನಡದ ಕುರಿತಂತೆ ಅಸಡ್ಡೆ ತೋರಿಸುವುದು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸದೆ ಇರುವುದು ಹೀಗೆ ಹಲವಾರು ವಿಚಾರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುತ್ತಾರೆ. ಕೆಲವೊಮ್ಮೆ ವಿಜಯ್ ದೇವರಕೊಂಡ ರವರ ಜೊತೆಗೆ ಡಿನ್ನರ್ ಗೆ ಹೋಗಿರುವುದಕ್ಕೆ ಕೂಡ ಸುದ್ದಿಯಾಗಿದ್ದರು.

ಆದರೆ ಇಂದು ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕ ಮಂದಣ್ಣ ನವರು ಸುದ್ದಿ ಆಗುವುದಕ್ಕೆ ಬೇರೆನೇ ಕಾರಣವಿದೆ. ಹೌದು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಮಂತ ರವರ ಕುರಿತಂತೆ ಒಂದು ಸ್ಟೇಟ್ಮೆಂಟ್ ನೀಡಿದ್ದಾರೆ. ಅದೇನು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೆ ರಶ್ಮಿಕಾ ಮಂದಣ್ಣ ನವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಮಗೆ ಗೊತ್ತಿರುವ ಸ್ಟ್ರಾಂಗೆಸ್ಟ್ ಮಹಿಳೆಯರನ್ನು ಟ್ಯಾಗ್ ಮಾಡಿ ಎಂಬುದಾಗಿ ಹೇಳಿ ತಮ್ಮ ಜೀವನದಲ್ಲಿ ಕಂಡಿರುವ ಸ್ಟ್ರಾಂಗೆಸ್ಟ್ ಮಹಿಳೆಯರ ಹೆಸರುಗಳನ್ನು ಅಂದರೆ ತಮ್ಮ ತಾಯಿ ಸುಮನ್ ಮಂದಣ್ಣ ಮತ್ತಿಬ್ಬರು ಗೆಳತಿಯರು ಹಾಗೂ ಸಮಂತ ರವರನ್ನು ಟ್ಯಾಗ್ ಮಾಡಿದ್ದಾರೆ. ಇತ್ತೀಚಿಗಷ್ಟೇ ವಿವಾಹ ವಿಚ್ಛೇದನದ ನಂತರವೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸಂಬಂಧ ಅವರ ಮನೋಬಲದ ವಿಚಾರದಲ್ಲಿ ರಶ್ಮಿಕ ಮಂದಣ್ಣ ನವರು ಅವರನ್ನು ಸ್ಟ್ರಾಂಗೆಸ್ಟ್ ಮಹಿಳೆ ಎಂದು ಕರೆದಿರಬಹುದು.