ರಾಮಾಚಾರಿಯಲ್ಲಿ ಸೈಲೆಂಟ್ ಸುಂದರಿ, ಆದರೆ ಈಗ ಹೊಸ ಅದ್ಯಾಯ ಆರಂಭಿಸಲು ಸಿದ್ದವಾದ ನಟಿ ಸಿರಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಕೆಲವು ನಟಿಯರು ಮಾತ್ರ ಸಾಕಷ್ಟು ವರ್ಷಗಳಿಂದ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿಕೊಂಡು ಬಂದಿದ್ದರೂ ಕೂಡ ಈಗಲೋ ಅದೇ ಚಾರ್ಮ್, ಅದೇ ಲುಕ್ ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲಿ ನಟಿ ಸಿರಿಗೆ ಮೊದಲನೇ ಸ್ಥಾನ ನೀಡಬಹುದು. ಬಹಳ ವರ್ಷಗಳ ಹಿಂದೆ ರಂಗೋಲಿ ಧಾರಾವಾಹಿಯಲ್ಲಿ ಅಭಿ ಪಾತ್ರ ನಿಭಾಯಿಸಿದ್ದ ನಟಿ ಸಿರಿ ಅಂದು ಹೇಗೆ ಕಾಣಿಸುತ್ತಿದ್ದರೋ ಇಂದೂ ಹಾಗೆಯೇ ಕಾಣಿಸುತ್ತಾರೆ ಎನ್ನೋದೆ ವಿಶೇಷ.

ಹೌದು, ನಟಿ ಸಿರಿ ರಂಗೋಲಿ ಧಾರಾವಾಹಿಯ ಮೂಲಕ ಮನೆಮಾತಾದವರು. ಇದೂವರೆಗೆ ಬಹಳ ವಿನಯ, ಸೌಮ್ಯ ಪಾತ್ರಗಳನ್ನೇ ನಿಭಾಯಿಸಿಕೊಂಡು ಬಂದ ಸಿರಿ ಇತ್ತೀಚಿಗೆ ಕಲರ್ಸ್ ಕನ್ನಡ ಪ್ರಸಾರ ಶುರುಮಾಡಿದ, ರಾಮಾಚಾರಿ ಚಿತ್ರದಲ್ಲಿಯೂ ಒಳ್ಳೆಯವಳಾಗಿ, ಸೈಲೆಂಟ್ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸಿರಿ ಜನರಿಗೆ ಹತ್ತಿರವಾಗಿದ್ದೇ ಈ ತರ ಭಾವನಾತ್ಮಕ ಪಾತ್ರಗಳ ಮೂಲಕ. ಆದರೆ ಇದೀಗ ಸಿರಿ ಹೊಸ ಚಾಲೆಂಜ್ ಒಂದನ್ನು ಒಪ್ಪುಕೊಂಡಿದ್ದಾರೆ. ಅದೇನು ಅಂತಿರಾ?

ರಾಮಾಚಾರಿಯಲ್ಲಿ ಸೈಲೆಂಟ್ ಸುಂದರಿ, ಆದರೆ ಈಗ ಹೊಸ ಅದ್ಯಾಯ ಆರಂಭಿಸಲು ಸಿದ್ದವಾದ ನಟಿ ಸಿರಿ. ಏನು ಗೊತ್ತೇ?? 2

ಇಷ್ಟು ದಿನ ಪಾಪದ ಪಾತ್ರವನ್ನೇ ನಿಭಾಯಿಸುತ್ತಿದ್ದ ನಟಿ ಸಿರಿ ಇದೀಗ ಖಡಕ್ ಅತ್ತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೌದು ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮದುಮಗಳು ಧಾರಾವಾಹಿಯಲ್ಲಿ ಪಾಪದ ಸೊಸೆಗೆ ಟಾಂಗ್ ಕೊಡುವ ರಗಡ್ ಅತ್ತೆ ಮಾತ್ರವನ್ನು ನಿಭಾಯಿಸಲಿದ್ದಾರೆ ಸಿರಿ. ಮದುಮಗಳು ಧಾರಾವಾಹಿ ತೆಲುಗಿನ ಅತು ಅತ್ತಮ್ಮ ಕೂತುರು ಧಾರಾವಾಹಿಯ ರಿಮೇಕ್ ಆಗಿದ್ದು ಕನ್ನಡದಲ್ಲಿ ಈ ಧಾರಾವಾಹಿ ನಿರ್ಮಾಣವನ್ನು ಕೈಗೆತ್ತಿಕೊಂಡಿರುವುದು ಕಾವ್ಯಾಂಜಲಿ ತಂಡ.

ಮದುಮಗಳು ಪಾತ್ರದಲ್ಲಿ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದ ರಕ್ಷಿತಾ ಪಿ ನಟಿಸುತ್ತಿದ್ದರೆ, ಮದುಮಗನಾಗಿ ಕನ್ನಡತಿಯಲ್ಲಿ ವಿಕ್ರಾಂತ್ ಪಾತ್ರ ನಿಭಾಯಿಸುತ್ತಿರುವ ಭವಿಷ್ ಕಾಣಿಸಿಕೊಳ್ಳಲಿದ್ದಾರೆ. ಈ ಮಗನಿಗೆ ಪವರ್ ಫುಲ್ ಅಮ್ಮನಾಗಿ ನಟಿ ಸಿರಿ ರೋಲ್ ಕೈಗೆತ್ತಿಕೊಂಡಿದ್ದಾರೆ. ಪಾತ್ರ ಯಾವುದೇ ಆಗಿರಲಿ, ಸಿರಿಯವರನ್ನು ಇನ್ನಷ್ಟು ವರ್ಷ ತೆರೆಯ ಮೇಲೆ ನೋಡುವಂತಾಗಲಿ ಎನ್ನುವುದೇ ವೀಕ್ಷಕರ ವಿಶಸ್!