ಅಂದು ಮಿಲ್ಕಿ ಬ್ಯೂಟಿಗೆ ಸಿಕ್ಕಿದ್ದ ಲಕ್ ಇಂದು ಕನ್ನಡತಿ ಶ್ರೀ ಲೀಲಾ, ರಶ್ಮಿಕಾಗೆ ಸೆಡ್ಡು, ಭರ್ಜರಿ ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುವ ಹಾಗೂ ಉದಯೋನ್ಮುಖ ನಟಿಯರು ಆಗಮಿಸುತ್ತಿದ್ದಾರೆ. ಕೆಲವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ ನಂತರ ಬೇರೆ ಬೇರೆ ಭಾಷೆಗಳಲ್ಲಿ ಕೂಡ ನಟಿಸಿ ಯಶಸ್ಸನ್ನು ಕಾಣುತ್ತಿದ್ದಾರೆ. ಅವರ ಸಾಲಿಗೆ ನಟಿ ರಶ್ಮಿಕಾ ಮಂದಣ್ಣ ನವರು ಕೂಡ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ನವರನ್ನು ಕೂಡ ಮೀರಿಸಬಲ್ಲಂತಹ ಅವಕಾಶಗಳನ್ನು ಕನ್ನಡ ಚಿತ್ರರಂಗ ಮೂಲದ ನಟಿಯೊಬ್ಬರು ತೆಲುಗು ಚಿತ್ರರಂಗದಲ್ಲಿ ಪಡೆದುಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಅವರು ಮತ್ತಿನ್ಯಾರು ಅಲ್ಲ ನಮ್ಮ ಕನ್ನಡದ ಹುಡುಗಿ ಆಗಿರುವ ಶ್ರೀಲೀಲಾ ರವರು. ಎಪಿ ಅರ್ಜುನ್ ನಿರ್ದೇಶನದ ವಿರಾಟ್ ನಟನೆಯ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಇವರು ನಂತರ ರೊಲಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಹಾಗೂ ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈಗ ಧನ್ವೀರ ನಟನೆಯ ಬೈ ಟು ಲವ್ ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ತೆಲುಗು ಚಿತ್ರರಂಗಕ್ಕೂ ಕೂಡ ಕಾಲಿಟ್ಟಿರುವ ಶ್ರೀಲೀಲ ರವರು ಪೆಳ್ಳಿ ಸಂದಡಿ ಚಿತ್ರದಲ್ಲಿ ಈಗಾಗಲೇ ಕಾಣಿಸಿಕೊಂಡು ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿರುವುದು ನಿಮಗೆ ಗೊತ್ತಿದೆ. ಆದರೆ ಈ ಚಿತ್ರದ ಯಶಸ್ಸಿನಿಂದ ಈಗ ಶ್ರೀಲೀಲಾ ಅವರ ಬೇಡಿಕೆಯನ್ನುವುದು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಪಸರಿಸಿದೆ ಎಂದರೆ ತಪ್ಪಾಗಲಾರದು.

ಅಂದು ಮಿಲ್ಕಿ ಬ್ಯೂಟಿಗೆ ಸಿಕ್ಕಿದ್ದ ಲಕ್ ಇಂದು ಕನ್ನಡತಿ ಶ್ರೀ ಲೀಲಾ, ರಶ್ಮಿಕಾಗೆ ಸೆಡ್ಡು, ಭರ್ಜರಿ ಸಿಹಿ ಸುದ್ದಿ ಏನು ಗೊತ್ತೇ?? 2

ಹೌದು ಅಲ್ಲು ಅರ್ಜುನ್ ರವರ ತಂದೆಯಾಗಿರುವ ಅಲ್ಲು ಅರವಿಂದ್ ರವರ ಗೀತಾ ಆರ್ಟ್ಸ್ ಸಂಸ್ಥೆ ಶ್ರೀಲೀಲಾ ಅವರನ್ನು ಮೂರು ಸಿನಿಮಾ ಗಳಿಗಾಗಿ ಅಡ್ವಾನ್ಸ್ ಆಗಿ ಬುಕಿಂಗ್ ಮಾಡಿಕೊಂಡಿದೆ. ಮುಂದಿನ ಮೂರು ಚಿತ್ರಗಳಲ್ಲಿ ಶ್ರೀಲೀಲಾ ರವರು ತೆಲುಗು ಚಿತ್ರರಂಗದ ಸ್ಟಾರ್ ನಟರಾಗಿರುವಂತಹ ರವಿತೇಜ ನಿತಿನ್ ಹಾಗೂ ರಾಮ್ ಪೋತಿನೇನಿ ಅವರೊಂದಿಗೆ ನಟಿಸುವ ಅವಕಾಶವನ್ನು ಪಡೆದು ಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ, ಅಧಿಕೃತ ಆದೇಶ ಒಂದೇ ಬಾಕಿ ಇದೆ. ಇಂದ ಗೀತಾ ಆರ್ಟ್ಸ್ ಮಿಲ್ಕಿ ಬ್ಯೂಟಿ ಆಗಿರುವ ತಮನ್ನಾ ರವರಿಗೆ ಹೀಗೆ ಚಾನ್ಸ್ ಕೊಟ್ಟು ನಂತರ ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯಾಗಿ ಮಿಂಚಿದ್ದರು. ಶ್ರೀಲೀಲಾ ರವರು ಕೂಡ ಇದೇ ಹಾದಿಯಲ್ಲಿ ಕಾಲು ಇಟ್ಟಿರುವುದರಿಂದ ಅವರಿಗೂ ಕೂಡ ಇಂತಹ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂಬುದಾಗಿ ಎಲ್ಲರ ಲೆಕ್ಕಾಚಾರವಾಗಿದೆ.