T20 World Cup: ನಂಬರ್ ಒನ್ ಆಗಿ ಸೆಮಿನಿಫೈನಲ್ ತಲುಪಿರುವ ಭಾರತಕ್ಕೆ ಸಿಕ್ತು ಸಿಹಿ ಸುದ್ದಿ. ಇನ್ನು ಮುಂದೆ ಭಾರತದ್ದೇ ಕಪ್. ಏನಾಗಿದೆ ಗೊತ್ತೇ??

ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ತಂಡವು ಜಿಂಬಾಂಬೆಯನ್ನು ಸೋಲಿಸಿ ಈಗಾಗಲೇ ವಿಜಯದ ನಗೆ ಬೀರಿದೆ. ಈ ಮೂಲಕ ಟೀಮ್ ಇಂಡಿಯಾ ಗುಂಪು ಎರಡರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟೀಮ್ ಇಂಡಿಯಾ ಜಿಂಬಾಂಬೆ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಸುಲಭವಾಗಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರರು ಒಬ್ಬರು ತಮ್ಮ ಫಾರ್ಮ್ ಗೆ ಮರಳಲು ಯಶಸ್ವಿಯಾದರು. ಈ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯರ್ಸ್ ಜಿಂಬಾಂಬೆಯ ಇನ್ನಿಂಗ್ಸ್ ಅನ್ನು 115 ರನ್ಗಳಿಗೆ ಪೇರಿಸಲು ಯಶಸ್ವಿಯಾದರು. ಈ ಅಮೋಘ ಪ್ರದರ್ಶನಕ್ಕೆ ಒಬ್ಬರು ಮೂಲ ರೂವಾರಿ ಎಂದರೆ ಅದು ಹಿರಿಯ ಸ್ಪಿನ್ನರಾದ ರವಿಚಂದ್ರನ್ ಅಶ್ವಿನ್.

ಹಿಂದಿನ ಪಂದ್ಯಗಳಲ್ಲಿ ಅಶ್ವಿನ್ ತಮ್ಮ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದರು. ಆದರೆ ಈ ಪಂದ್ಯದಲ್ಲಿ ಅವರು ಮತ್ತೆ ಫಾರ್ಮ್ ಗೆ ಮರಳಿದರು. ಜೊತೆಗೆ ಅದ್ಬುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಟಿ ಟ್ವೆಂಟಿ ವಿಶ್ವಕಪ್ ನ ಕಳೆದ ಪಂದ್ಯಗಳಲ್ಲಿ ಅವರು ಅಂತಹ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ತೋರಿರಲಿಲ್ಲ. ಈ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಅವರು ಕೇವಲ ಮೂರು ವಿಕೆಟ್ಗಳನ್ನು ಕಬಳಿಸಲು ಮಾತ್ರವೇ ಶಕ್ತರಾಗಿದ್ದರು. ಆದರೆ ಈ ಬಾರಿಯ ಜಿಂಬಾಂಬೆ ವಿರುದ್ಧದ ಟೀಮ್ ಇಂಡಿಯಾ ಪಂದ್ಯದಲ್ಲಿ ಅವರು ಭರ್ಜರಿ ಪ್ರದರ್ಶನ ತೋರಿದರು. ನಾಲ್ಕು ಓವರ್ ಗಳ ಬೌಲಿಂಗ್ ಮಾಡಿದ ಅಶ್ವಿನ್ 5.50 ಆರ್ಥಿಕತೆಯಲ್ಲಿ 22 ರನ್ ಮಾತ್ರ ಬಿಟ್ಟುಕೊಟ್ಟರು. ಇದಲ್ಲದೆ ಭರ್ಜರಿ ಮೂರು ವಿಕೆಟ್ಗಳ ಬೇಟೆಯಾಡಿದರು.

T20 World Cup: ನಂಬರ್ ಒನ್ ಆಗಿ ಸೆಮಿನಿಫೈನಲ್ ತಲುಪಿರುವ ಭಾರತಕ್ಕೆ ಸಿಕ್ತು ಸಿಹಿ ಸುದ್ದಿ. ಇನ್ನು ಮುಂದೆ ಭಾರತದ್ದೇ ಕಪ್. ಏನಾಗಿದೆ ಗೊತ್ತೇ?? 2

ರಯಾನ್ ಬರ್ಲೆ, ವೆಲ್ಲಿಂಗ್ಟನ್ ಮಸಕಡ್ಜಾ ಮತ್ತು ರಿಚರ್ಡ್ ನಗರ್ವಾ ಅವರ ವಿಕೆಟ್ ಉರುಳಿಸಿದರು. ಕಳೆದ ಜುಲೈ ತಿಂಗಳಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದ ವೇಳೆ ಟಿ ಟ್ವೆಂಟಿ ವಿಶ್ವಕಪ್ ಪಂದ್ಯಾವಳಿಗೆ ಅಶ್ವಿನ್ ಮತ್ತೆ ಪುನರಾಗಮನ ಮಾಡಿದ್ದರು. ಅವರು 2022ರ ಏಷ್ಯಾಕಪ್ ನಲ್ಲಿಯೂ ಕೂಡ ಆಡಿದ್ದರೂ, ಇದೀಗ ಅವರು 2022 ರ ಟಿ – 20 ವಿಶ್ವಕಪ್ ನಲ್ಲೂ ಕೂಡ ಆಡುತ್ತಿದ್ದು ಭಾರತದ ತಂಡದ ಗೆಲುವಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರು ಇದುವರೆಗಿನ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿದ್ದು ಅದರಲ್ಲಿ 72 ವಿಕೆಟ್ಗಳನ್ನು ಪಡೆದಿದ್ದಾರೆ.