ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ವಿಜಯ್, ಅಭಿಮಾನಿಗಳು ಫುಲ್ ಕುಶ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ತೆಲಗು ಚಿತ್ರರಂಗದಲ್ಲಿ ವಿಜಯ ದೇವರಕೊಂಡ ಉತ್ತಮ ಹೆಸರು ಗಳಿಸಿರುವ ನಟ. ಅವರ ನಟನೆಯ ಎಲ್ಲಾ ಚಿತ್ರಗಳು ಹಿಟ್ ಆಗಿದ್ದು, ಅಭಿಮಾನಿಗಳ ಫೇವರೇಟ್ ನಟ ಕೂಡ! ನಟ ವಿಜಯ್ ಇತ್ತೀಚಿಗೆ ತಮ್ಮ ನಟನೆ ಜೊತೆಗೆ ಉದ್ಯಮವನ್ನೂ ಮಾಡುತ್ತಿದ್ದು ಮಲ್ಟಿಫ್ಲೆಕ್ಸ್ ಒಂದರ ಮಾಲೀಕರಾಗಿದ್ದಾರೆ. ಜೊತೆಗೆ ಸಿನಿಮಾಗಳನ್ನು ನಿರ್ಮಿಸುವತ್ತವೂ ಚಿತ್ತ ಹರಿಸಿರುವ ನಟ ವಿಜಯ್, ‘ಕಿಂಗ್ ಆಫ್ ಡಿ ಹಿಲ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ತೊಡಗಿದ್ದಾರೆ. ಇನ್ನು ನಟ ವಿಜಯ ದೇವರಕೊಂಡ ಅವರ ತಮ್ಮನ ನಟನೆಗೂ ಬೆಂಬಲ ನೀಡುತ್ತಿದ್ದು ವಿಜಯ್ ಅರ್ಪಣೆಯ ಆನಂದ್ ವಿಜಯಕೊಂಡ ನಟನೆಯ ‘ ಪುಷ್ಪಕ ವಿಮಾನಂ’ ಚಿತ್ರ ಇದೆ ನವೆಂಬರ್ 12ರಂದು ಬಿಡುಗಡೆಯಾಗಲಿದೆ.

ಈಗಾಗಲೇ ಕೆಲವು ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದ ವಿಜಯ ದೇವರಕೊಂಡ ಇನ್ನೊಂದು ಇಂಟರೆಸ್ಟಿಂಗ್ ವಿಷಯವನ್ನು ಹೊರಹಾಕಿದ್ದಾರೆ. ಏನು ಗೊತ್ತಾ !? ಹೌದು ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಕೇಳಿದಾಗ ವಿಜಯ್ ಇನ್ನೊಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಪುಷ್ಪಕ ವಿಮಾನಂ ಚಿತ್ರದ ನಿರ್ದೇಶಕ ದಾಮೋದರ ಅವರು ವಿಜಯ್ ಅವರಿಗೆ ಕಥೆಯೊಂದನ್ನು ಹೇಳಿದ್ದಾರೆ. ಅದು ವಿಜಯ್ ಗೆ ಇಷ್ಟವಾಗಿದೆ. ಹಾಗಾಗಿ ಈ ಕಥೆಯನ್ನು ವೀಕ್ಷಕರ ಎದುರು ತರುವ ವಿಚಾರವನ್ನು ಮಾಡಿರುವ ವಿಜಯ್ ತಮ್ಮ ಬ್ಯಾನರ್ ನಲ್ಲಿ ವೆಬ್ ಸಿರೀಸ್ ಒಂದನ್ನು ನಿರ್ಮಿಸಲು ಮುಂದಾಗಿದ್ದಾರೆ!

ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ವಿಜಯ್, ಅಭಿಮಾನಿಗಳು ಫುಲ್ ಕುಶ್ ಏನು ಗೊತ್ತೇ?? 2

ಇನ್ನು ವಿಜಯ ದೇವರಕೊಂಡ ಅವರ ಮದುವೆ ಬಗ್ಗೆ ಸಿನಿಮಾ ಪ್ರೊಮೋದಲ್ಲಿ ಮಾತನಾಡಿದ ಅವರು ತನಗಿಂತ ತಮ್ಮನೆ ಬೇಗ ಮದುವೆಯಾಗುತ್ತಾನೆ ಅನ್ನುವ ಅರ್ಥದಲ್ಲಿ ಮಾತನಾಡಿದ್ದರು. ಅದರೆ ಆನಂದ್ ಇದನ್ನು ಅಲ್ಲಗಳೆದಿದ್ದರು. ಅಂದಹಾಗೆ ವಿಜಯ ದೇವರಕೊಂಡ ಅವರ, ಪುರಿ ಜಗನ್ನಾಥ ನಿರ್ದೇಶನದ ‘ಲೈಗರ್’ ಚಿತ್ರ ಮುಕ್ತಾಯದ ಹಂತದಲ್ಲಿದೆ. ಇದರಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಹೈಲೈಟ್. ಈಗಾಗಲೇ ಬಾಕ್ಸರ್ ಲುಕ್ಕನ್ನು ಲೈಕ್ ಮಾಡಿರುವ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.