ಕೊನೆಗೂ ಫೈಟರ್ ವಿವೇಕ್ ಕುಟುಂಬದ ಸಿಕ್ಕ ನಿರ್ಮಾಪಕ ಗುರು ದೇಶಪಾಂಡೆ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಿನಿಮಾ ನಿರ್ಮಾಣದ ನಡುವೆ ಕೆಲವೊಮ್ಮೆ ಗೊತ್ತಿದ್ದೊ, ಗೊತ್ತಿಲ್ಲದೆನೋ ಅವಗಡಗಳು ಸಂಭವಿಸಿ ಬಿಡುತ್ತವೆ. ಆದರೆ ಇಂಥ ಯಾವುದೇ ಕಹಿ ಘಟನೆಗಳು ಸಂಭವಿಸದಂತೆ ಎಚ್ಚರವಹಿಸುವುದು ಅತ್ಯಗತ್ಯ. ಹೀಗೆ ಎಚ್ಚರ ತಪ್ಪಿ ವಿದ್ಯುತ್ ಕಂಬಕ್ಕೆ ತಗುಲಿ ಇತ್ತೀಚಿಗೆ ಫೈಟರ್ ವಿವೇಕ್ ಕೊನೆಯುಸಿರೆಳೆದಿದ್ದು ನಿಮಗೆ ಗೊತ್ತೇ ಇದೆ.

ಫೈಟರ್ ವಿವೇಕ್ ಅವರು ’ಲವ್ ಯು ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ಸ್ಟಂಟ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಇಹಲೋಕ ತ್ಯಜಿಸಿದರು. ಚಿತ್ರೀಕರಣದ ಸಮಯದಲ್ಲಿ ಸರಿಯಾಗಿ ಮುಂಜಾಗ್ರತೆ ವಹಿಸಿಕೊಳ್ಳದೇ ಇರುವುದೇ ಇದಕ್ಕೆ ಕಾರಣವಾಗಿತ್ತು. ಇನ್ನು ಈ ಪ್ರಕರಣ ಬಿಡದಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿ ಚಿತ್ರದ ಕ್ಯಾಮರಾ ಮ್ಯಾನ್, ನಿರ್ಮಾಪಕ, ನಿರ್ದೇಶಕ ಎಲ್ಲರ ಮೇಲೂ ಕೇ’ಸ್ ದಾಖಲಾಗಿತ್ತು.

ಈ ಘಟನೆ ನಡೆದ ಕೂಡಲೇ ನಿರ್ಮಾಪಕ ಗುರು ದೇಶಪಾಂಡೆ ವಿವೇಕ್ ಕುಟುಂಬಕ್ಕೆ ಪರಿಹಾರ ಧನ ನೀಡುವುದಾಗಿ ಹೇಳಿದ್ದರು. ಅದರಂತೆ ಈಗಾಗಲೇ ವಿವೇಕ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಇನ್ನು ಚಿತ್ರ ಬಿಡುಗಡೆಯಾದ ಕೂಡಲೇ ಉಳಿದ 5ಲಕ್ಷ ನೀಡುವುದಾಗಿ ವಿವೇಕ್ ಅವರ ಕ್ತಾಯಿಗೆ ತಿಳಿಸಿದ್ದಾರೆ ಗುರು ದೇಶಪಾಂಡೆ. ಇದರ ಜೊತೆಗೆ ವಿವೇಕ್ ಅವರ ಸಹೋದರನ ವಿದ್ಯಾಭ್ಯಾಸಕ್ಕೂ ತಾನು ನೆರವು ನೀಡುವುದಾಗಿ ಹೇಳಿದ್ದಾರೆ.

ಇನ್ನು ಪ್ರಕರಣ ನಡೆದ 24 ದಿನಗಳ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಗುರು ದೇಶಪಾಂಡೆ ತಾನು ಧನ ಸಹಾಯ ಮಾಡುವುದರ ಬಗ್ಗೆ ಹೇಳಿದ್ದಾರೆ. ಜೊತೆಗೆ ಘಟನೆ ನಡೆದಾಗ ತಾನು ಆ ಸ್ಥಳದಲ್ಲಿ ಇರಲಿಲ್ಲ. ಅಚಾನಕ್ ಆಗಿ ಈ ಘಟನೆ ನಡೆದಿದೆ. ಯಾರು ಏನೇ ಹೇಳಿದರು ವಿವೇಕ್ ಕುಟುಂಬಕ್ಕೆ ವಿವೇಕ್ ಅವರನ್ನು ವಾಪಾಸ್ ಕೊಡಲು ಸಾಧ್ಯವಿಲ್ಲ. ನಾನು ಅವರ ಕುಟುಂಬ ಜೊತೆಗಿರುತ್ತೇನೆ, ಅವರಿಗೆ ಸಾಂತ್ವಾನ ಹೇಳಿದ್ದೇನೆ’ ಎಂದು ತಿಳಿಸಿದ್ದಾರೆ.