ಹೆಚ್ಚೇನೂ ಬೇಡ ಕೇವಲ 2 ಸಾವಿರಕ್ಕೆ ವಾಷಿಂಗ್ ಮಷಿನ್, ಈ ಚಿಕ್ಕ ಮಷೀನ್ ಎಷ್ಟೆಲ್ಲ ಕೆಲಸ ಮಾಡುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಈಗ ಬಟ್ಟೆ ಒಗೆಯುವುದಕ್ಕೆ ವಾಷಿಂಗ್ ಮಷಿನ್ ಇದ್ದೆ ಇರುತ್ತೆ. ಕೇವಲ ಶ್ರೀಮಂತರ ಮನೆಗಳಲ್ಲಿ ಮಾತ್ರವಲ್ಲ, ಸಾಮಾನ್ಯರ ಮನೆಗಳಲ್ಲಿಯೂ ವಾಷಿಂಗ್ ಮಿಷನ್ ಬಳಕೆ ಸಾಮಾನ್ಯ. ಯಾಕಂದ್ರೆ ಇವತ್ತಿನ ಜನರ ಜೀವನ ಶೈಲಿಯೇ ಹಾಗಿದೆ. ತಮ್ಮ ತಮ್ಮ ಕೆಲಸ ಮಾಡಿಕೊಳ್ಳುವುದಕ್ಕೆ ಸಮಯವಿರುವುದಿಲ್ಲ.

ಹಾಗಾಗಿ ಬಟ್ಟೆ ಓಗೆಯುವುದಕ್ಕೆ ವಾಷಿಂಗ್ ಮಶೀನ್ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕವೂ ಆಗಿದೆ. ಜಾಸ್ತಿ ಜನ ಇದ್ದಾಗ ದೊಡ್ಡ ವಾಷಿಂಗ್ ಮಶೀನ್ ಬೇಕು. ಅದೇ ಒಬ್ಬರೋ ಇಬ್ಬರೂ ಇರೋ ಮನೆಯಲ್ಲಿ ವಾಷಿಂಗ್ ಮಶೀನ್ ದೊಡ್ಡದಾಗಿ ಬಿಡತ್ತೆ ಅಲ್ವಾ ? ಹಾಗಾಗಿ ಇಂಥವರಿಗಾಗಿಯೆ ಇಲ್ಲೊಂದು ಚಿಕ್ಕ ವಾಷಿಂಗ್ ಮಷಿನ್ ಅನ್ನು ಆವಿಷ್ಕರಿಸಿದ್ದಾರೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಣ.

ಇದೊಂದು ಅರೆ ಸ್ವಯಂ ಚಾಲಿತ ಅಂದ್ರೆ ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮಶೀನ್. ಇದರ ಗಾತ್ರ ಎಷ್ಟಿದೆ ಗೊತ್ತಾ? ಕೇವಲ ಒಂದು ಬಕೆಟ್ ನಷ್ಟು. ಅಂದ್ರೆ ಒಂದು ಬಕೆಟ್ ನಲ್ಲಿ ತೊಳೆಯುವಷ್ಟೇ 5-6 ಬಟ್ಟೆಗಳನ್ನ ಇದರಲ್ಲಿ ವಾಶ್ ಮಾಡಬಹುದು. ಈ ಹಿಲ್ಟನ್ ಮಷಿನ್ 3 ಕೆಜಿ ಸಾಮರ್ಥ್ಯವನ್ನ ಹೊಂದಿದೆ.

ಹೆಚ್ಚೇನೂ ಬೇಡ ಕೇವಲ 2 ಸಾವಿರಕ್ಕೆ ವಾಷಿಂಗ್ ಮಷಿನ್, ಈ ಚಿಕ್ಕ ಮಷೀನ್ ಎಷ್ಟೆಲ್ಲ ಕೆಲಸ ಮಾಡುತ್ತದೆ ಗೊತ್ತೇ?? 2

ಇದರಲ್ಲಿ ಸ್ವಯಂ ಚಾಲಿತ ಪವರ್ ಆಫ್ ಆಗುತ್ತದೆ. ಹಾಗಾಗಿ ವಿದ್ಯುತ್ ಕೂಡ ಉಳಿತಾಯವಾಗುತ್ತದೆ. ಅಲ್ಲದೆ ಇದರಲ್ಲಿ ಸ್ಪಿನ್ನರ್ ಯಂತ್ರವನ್ನು ಅಳವಡಿಸಲಾಗಿದ್ದು ಬಟ್ಟೆಯ ನೀರನ್ನು ಸಂಪೂರ್ಣ ತೆಗೆಯುತ್ತದೆ. ಅಲ್ಲದೆ ಸಾಕಷ್ಟು ಹಗುರವಾಗುತ್ತದೆ. ಡ್ರೈಯರ್ ಬ್ಯಾಸ್ಕೆಟ್ ಇದರಲ್ಲಿದೆ. ಇನ್ನು ಇದರ ಬೆಲೆ ರೂ.5,999. ಅಮೆಜಾನ್ ನಲ್ಲಿ ಬೇರೆ ಬೇರೆ ರಿಯಾಯಿತಿಗಳನ್ನು ಸೇರಿಸಿ ಈ ಪುಟ್ಟ ವಾಷಿಂಗ್ ಮಶೀನ್ 1,994 ರೂ. ಗೆ ಲಭ್ಯ.

ಇನ್ನು ಅಮೆಜಾನ್ ನಲ್ಲಿ ಫೋಲ್ಡಬಲ್ ವಾಷಿಂಗ್ ಮಷಿನ್ ಕೂಡ ಲಭ್ಯ. ಇದರಲ್ಲಿ ಬಟ್ಟೆ ತೊಳೆಯುವುದು ಮಾತ್ರವಲ್ಲ, ಬಟ್ಟೆಯನ್ನ ಮಡಚಿ ಇಡಬಹುದು. ಕಬೋರ್ಡ್ ನಲ್ಲಿ ಮಡಚಿ ಇಡಬಹುದಾದ ಇದನ್ನು ಮನೆಯಲ್ಲಿ ಕಡಿಮೆ ಜಾಗ ಇದ್ದವರು ಬಳಸಿಕೊಳ್ಳಬಹುದು. ಹತ್ತೇ ಹತ್ತು ನಿಮಿಷಗಳಲ್ಲಿ ಬಟ್ಟೆಯನ್ನ ಒಗೆಯಬಹುದಾದ ಈ ಮಷಿನ್ ವಿದ್ಯುತ್ ನ್ನೂ, ಸಮಯವನ್ನು ಉಳಿಸುತ್ತದೆ. ಇದರ ಬೆಲೆ 9999ರೂಪಾಯಿಯಾಗಿದ್ದು ಅಮೆಜಾನ್ ನಲ್ಲಿ ಆಫರ್ ಸೇರಿ 5,399ರೂಪಾಯಿಗಳಿಗೆ ಲಭ್ಯ. ಅಮೆಜಾನ್ ನಲ್ಲಿ ಇನ್ನು ಬೇರೆ ಬೇರೆ ಪೋರ್ಟಬಲ್ ವಾಷಿಂಗ್ ಮಷಿನ್ ಗಳು ಲಭ್ಯವಿವೆ. ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕ, ನಿಮ್ಮ ಬಜೆಟ್ ಗೆ ತಕ್ಕ ಮಷಿನ್ ನ್ನು ನೀವು ಆಯ್ದುಕೊಳ್ಳಬಹುದು.