BYD Sea Lion 07: ಟೆಸ್ಲಾ ಕಂಪನಿಯ ಕಾರುಗಳಿಗೆ ಹೊಸ ಪೈಪೋಟಿ- ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

BYD EV Car: ನಮಸ್ಕಾರ ಸ್ನೇಹಿತರೆ ಜಾಗತಿಕ ಮಟ್ಟದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ಸಾಕಷ್ಟು ಕಾರುಗಳು ಪೈಪೋಟಿಯಲ್ಲಿ ಬಿದ್ದಿವೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಚೀನಾ ಮೂಲದ ಕಂಪನಿ ಆಗಿರುವ BYD ಒಂದಾದ ಮೇಲೆ ಒಂದರಂತೆ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ಚೀನಾದಲ್ಲಿಯೇ ಲಾಂಚ್ ಮಾಡಲಾಗಿರುವಂತಹ BYD Sea Lion 07 ಎಲೆಕ್ಟ್ರಿಕ್ ಕಾರ್ನ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ.

BYD Sea Lion 07 features, price and specifications

BYD Sea Lion 07 ಕಾರು ಎಲೆಕ್ಟ್ರಿಕ್ ಕಾರುಗಳ SUV ವಿಭಾಗದಲ್ಲಿ ಕಾಣಿಸಿಕೊಳ್ಳುವಂತಹ ಕಾರ್ ಆಗಿದ್ದು ಟೆಸ್ಲಾ ಸಂಸ್ಥೆಯ ಕಾರುಗಳಿಗೂ ಕೂಡ ಮಾರುಕಟ್ಟೆಯಲ್ಲಿ ಟಫ್ ಕಾಂಪಿಟಿಷನ್ ನೀಡುವಂತಹ ಕೆಲಸವನ್ನು BYD Sea Lion 07 ಮಾಡಲಿದೆ ಎಂದು ಹೇಳಬಹುದಾಗಿದ್ದು ಅಧಿಕೃತವಾಗಿ ಜಾಗತಿಕ ಮಾರುಕಟ್ಟೆಯಲ್ಲಿ 2024ರಲ್ಲಿ ಈ ಕಾರು ಬಿಡುಗಡೆಯಾಗಬಹುದು ಎನ್ನುವುದಾಗಿ ಮೂಲಗಳು ತಿಳಿಸಿವೆ.

BYD Sea Lion 07 features, price and specifications

BYD Sea Lion 07 ಎಲೆಕ್ಟ್ರಿಕ್ ಕಾರ್ e Platform 3.0 ಅನ್ನು ಆಧರಿಸಿದೆ ಎಂಬುದಾಗಿ ತಿಳಿದುಬಂದಿದೆ. ಹೊರ ವಿನ್ಯಾಸ ನಿಜಕ್ಕೂ ಗ್ರಾಹಕರನ್ನು ಅಟ್ರಾಕ್ಟ್ ಮಾಡುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಕಾಡಿನಲ್ಲಿ ಅಟ್ರಾಕ್ಟ್ ಮಾಡುವಂತಹ ಹೆಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು LED DRL ಕೂಡ ಮತ್ತೊಂದು ಬೋನಸ್ ಆಗಿದೆ. ಅಲಾಯ್ ವಿಲ್ ಹಾಗೂ ಬಿಗ್ ಡೋರ್ಗಳನ್ನು ಕೂಡ ಈ ಕಾರಿನಲ್ಲಿ ನೀವು ಕಾಣಬಹುದಾಗಿದೆ.

ರೂಫ್ ಮೌಂಟೆಡ್ ಸ್ಪಾಯ್ಲರ್, ಕನೆಕ್ಟಿಂಗ್ ಟೈಲ್ ಲ್ಯಾಂಪ್, flush door handle, ಗಳನ್ನು ಕೂಡ ನೀವು BYD Sea Lion 07 ಕಾರಿನಲ್ಲಿ ಕಾಣಬಹುದಾಗಿದೆ. ಈ ಕಾರಿನ ಬೇರೆ ಟೆಕ್ನಿಕಲ್ ವಿಚಾರಗಳ ಬಗ್ಗೆ ಕಂಪನಿ ಯಾವುದೇ ರೀತಿ ಅಧಿಕೃತ ಮಾಹಿತಿಯನ್ನು ಬಿಚ್ಚಿಟ್ಟಿಲ್ಲ. ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೂಡ ನೀವು ಈ ಎಲೆಕ್ಟ್ರಿಕ್ ಕಾರ್ ನಲ್ಲಿ ಕಾಣಬಹುದಾಗಿದೆ. ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು BYD Sea Lion 07 ಎಲೆಕ್ಟ್ರಿಕ್ ಕಾರಿನಲ್ಲಿ ಅಳವಡಿಸಿರುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದು 23.5 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ಅಂದಾಜು ಹಾಕಲಾಗಿದೆ.

ಇದನ್ನು ಕೂಡ ಓದಿ: Instant Loan: ಹೆಚ್ಚು ಸಿಗಲ್ಲ ಆದರೆ 10 ಸಾವಿರ ರೂಪಾಯಿ ಎರಡು ನಿಮಿಷದಲ್ಲಿ ದಿಡೀರ್ ಅಂತ ಲೋನ್ ಪಡೆಯಿರಿ.

BYD ಸಂಸ್ಥೆಯ ಭಾರತದಲ್ಲಿರುವ ಕಾರುಗಳು

ಭಾರತದಲ್ಲಿ ಸದ್ಯದ ಮಟ್ಟಿಗೆ ಈ ಸಂಸ್ಥೆ ಎರಡು ಕಾರುಗಳನ್ನು ಮಾರಾಟ ಮಾಡುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಮೊದಲಿಗೆ E6 ಕಾರನ್ನು ನಾವು ಈ ಲಿಸ್ಟಿನಲ್ಲಿ ಕಾಣಬಹುದಾಗಿದ್ದು ಇದನ್ನು ಭಾರತದಲ್ಲಿ 29.15 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. 71.7kwh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವಂತಹ ಈ ಕಾರು ನಿಮಗೆ ಬರೋಬ್ಬರಿ 520 km ಗಳ ಮೈಲೇಜ್ ನೀಡುತ್ತದೆ. ಐದು ಸೀಟಿಂಗ್ ಕೆಪ್ಯಾಸಿಟಿ ಕೂಡ ಈ ಕಾರಿನಲ್ಲಿದೆ.

BYD Atto 3 ಭಾರತದಲ್ಲಿ ಚಲಾವಣೆಯಲ್ಲಿ ಇರುವಂತಹ ಕಂಪನಿಯ ಎರಡನೇ ಕಾರು. ಭಾರತದಲ್ಲಿ ಇದರ ಬೆಲೆ 33.99 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಸಿಂಗಲ್ ಚಾರ್ಜ್ ನಲ್ಲಿ ನಿಮಗೆ ಈ ಕಾರು 521 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. 60.48kwh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ನೀವು ಈ ಎಲೆಕ್ಟ್ರಿಕ್ ಕಾರ್ ನಲ್ಲಿ ಕಾಣಬಹುದಾಗಿದ್ದು ಪವರ್ಫುಲ್ ಪರ್ಫಾರ್ಮೆನ್ಸ್ ನೀಡೋದಕ್ಕೆ ಪರ್ಫೆಕ್ಟ್ ಆಯ್ಕೆಯಾಗಿದೆ.

byd sea lion 07 interiorByd sea lion indiaByd sea lion priceByd sea lion rangebyd sealByd seal performanceByd seal reviewByd song l