Toyota Hycross: ಟೊಯೋಟಾ ಕಂಪನಿಯ ಈ ಕಾರುಗಳನ್ನು ಜನರು ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ. ವಿಶೇಷತೆ, ಬೆಲೆಯ ಡೀಟೇಲ್ಸ್.

Toyota Hycross: ನಮಸ್ಕಾರ ಸ್ನೇಹಿತರೇ ಭಾರತದ ಟಾಪ್ 5 ಕಾರ್ ಕಂಪನಿಗಳಲ್ಲಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಟೊಯೋಟಾ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೋಟಾ ಸಂಸ್ಥೆ 20,542 ಯೂನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಇನ್ನು ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಟೊಯೋಟಾ 22,168 ಯೂನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಸೇಲ್ ಕಡಿಮೆ ಆಗಿದೆ ಅಂದ್ರೆ ಬೇಡಿಕೆ ಕಡಿಮೆ ಆಗಿದೆ ಎಂಬುದಾಗಿ ಅರ್ಥವಲ್ಲ ಬದಲಾಗಿ ಗ್ರಾಹಕರ ಬೇಡಿಕೆಯನ್ನು ಸರಿಯಾದ ಸಮಯದಲ್ಲಿ ಟೊಯೋಟಾ ಸಂಸ್ಥೆಗೆ ಕಾರುಗಳನ್ನು ಡೆಲಿವರಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅರ್ಥವಾಗಿದೆ. ಅಷ್ಟರ ಮಟ್ಟಿಗೆ ಟೊಯೋಟಾ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಟೊಯೋಟಾ ಸಂಸ್ಥೆಯ ಕಾರುಗಳ ವೈಟಿಂಗ್ ಪಿರಿಯಡ್ ಆವರೇಜ್ 12 ತಿಂಗಳಿಗೆ ಏರಿಕೆಯಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಅದರಲ್ಲೂ ಕೆಲವೊಂದು ಕಾರುಗಳ ವೈಟಿಂಗ್ ಪಿರಿಯಡ್ 18 ತಿಂಗಳಿಗೆ ಏರಿಕೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.

Toyota Hycross Car Specification, Features, Mileages and Waiting period details

ಇನ್ನು ಟೊಯೋಟಾ ಕಾರ್ ಗಳ ವೇಟಿಂಗ್ ಪಿರಿಯಡ್ ಬಗ್ಗೆ ಮಾತನಾಡುವುದಾದರೆ ಫಾರ್ಚುನರ್ ಕಾರುಗಳ ವೈಟಿಂಗ್ ಪಿರಿಯಡ್ ನಾಲ್ಕು ತಿಂಗಳಿಗೆ ಏರಿಕೆಯಾಗಿದೆ. Toyota Hycross ಕಾರಿನ ವೈಟಿಂಗ್ ಪಿರಿಯಡ್ 12 ತಿಂಗಳಿಗಿಂತಲೂ ಕೂಡ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಅರ್ಬನ್ ಕ್ರೂಜರ್ ಕಾರಿನ ವೇಟಿಂಗ್ ಪಿರಿಯಡ್ ಕೂಡ 12 ತಿಂಗಳು ಮೀರಿದೆ. ಇನ್ನೋವ ಕ್ರಿಸ್ಟ ಕಾರಿನ ವೈಟಿಂಗ್ ಪಿರಿಯಡ್ ಎಂಟು ತಿಂಗಳು ಆಗಿದೆ ಹಾಗೂ ಹೈಕ್ರೋಸ್ ಹೈಬ್ರಿಡ್ ಇಂಜಿನ್ ವೇರಿಯಂಟ್ 18 ತಿಂಗಳು ಆಸು ಪಾಸು ಕಾಣಿಸಿಕೊಳ್ಳುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಒಂದು ವೇಳೆ ನೀವು ಕೂಡ ಈ ಟೊಯೋಟಾ ಕಾರುಗಳನ್ನು ಖರೀದಿ ಮಾಡುವುದಕ್ಕೆ ಹೊರಟಿದ್ರೆ ಈ ಕಾಯುವಿಕೆಯ ಸಮಯವನ್ನು ನೀವು ತಿಳಿದುಕೊಂಡು ಖರೀದಿ ಮಾಡೋದಕ್ಕೆ ಹೊರಡಿ.

Toyota Hycross Car Specification, Features, Mileages and Waiting period details

Toyota Innova Hycross ಪೆಟ್ರೋಲ್ ಹಾಗೂ ಹೈಬ್ರಿಡ್ 2 ಇಂಜಿನ್ಗಳ ಆಪ್ಷನ್ ನಲ್ಲಿ ನಿಮಗೆ ಸಿಗುತ್ತದೆ. MPV ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ ಈ ಕಾರು ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸುರಕ್ಷತೆಯ ವಿಚಾರ ಬಂದರೆ ಆರು ಏರ್ ಬ್ಯಾಗ್ ಗಳು, ADAS ಸಾಕಷ್ಟು ಫೀಚರ್ಗಳನ್ನು ಅಳವಡಿಸಲಾಗಿದೆ. ಇದರ ಹೈಬ್ರಿಡ್ ವೇರಿಯಂಟ್ ಬೆಲೆ 25.30 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಟಾಪ್ ಮಾಡೆಲ್ ವೇರಿಯಂಟ್ ಬೆಲೆ 29.62 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಈ ಕಾರಿನಲ್ಲಿ ಒಟ್ಟಾರೆಯಾಗಿ 5 ವೇರಿಯಂಟ್ ನಲ್ಲಿ ಕಂಪನಿ ಕಾರುಗಳನ್ನು ಮಾರಾಟ ಮಾಡುತ್ತಿದೆ.

Toyota Innova Hycross ಕಾರಿನ ಲುಕ್ ಹಾಗೂ ಡಿಸೈನ್.

ಈ ಬಾರಿ ಟೊಯೋಟಾ ಕಂಪನಿ Toyota Innova Hycross ಕಾರಿನ ಹೊರ ವಿನ್ಯಾಸದ ಮೇಲೆ ಸಾಕಷ್ಟು ಬೋಲ್ಡ್ ಲುಕ್ ಅನ್ನು ಡಿಸೈನ್ ಮಾಡಿದೆ. ಬಂಪರ್ ಹಾಗೂ ಗ್ರಿಲ್ ಅನ್ನು ಹೊಸದಾಗಿ ವಿನ್ಯಾಸ ಮಾಡಲಾಗಿದೆ. ಸ್ಲೀಕರ್ ಹೆಡ್ ಲ್ಯಾಂಪ್ ಅನ್ನು ನೀವು ಕಾಣಬಹುದಾಗಿದೆ. 18 ಇಂಚುಗಳ ದೊಡ್ಡ ಅಲಾಯ್ ವೀಲ್ ಅನ್ನು ಜೋಡಿಸಲಾಗಿದೆ. LED ಟೈಲ್ ಲೈಟ್ ಈ ಕಾರಿನ ಲುಕ್ ಅನ್ನು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ.

ಇದನ್ನು ಕೂಡ ಓದಿ: Post Office Scheme: ಲಕ್ಷ ಲಕ್ಷ ರಿಟರ್ನ್ಸ್ ಬೇಕು ಎಂದರೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

Toyota Innova Hycross ಕಾರಿನ ಒಳ ವಿನ್ಯಾಸ

ಕಾರಿನ ಒಳಗೆ 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಯನ್ನು ಅಳವಡಿಸಲಾಗಿದೆ. ಇದರ ಜೊತೆಗೆ 10 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. ಇದು ವಯರ್ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಅನ್ನು ಕೂಡ ಸಪೋರ್ಟ್ ಮಾಡುತ್ತದೆ. ಇಲ್ಲಿ ನೀವು JBL ಸೌಂಡ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಅಡ್ಜಸ್ಟೇಬಲ್ ಕ್ಯಾಪ್ಟನ್ ಸೀಟ್, 10 Inch rear touch screen system, ADAS, ಆಂಬಿಯೆಂಟ್ ಲೈಟಿಂಗ್ ಹಾಗೂ ಸನ್ರೂಫ್ ಅನ್ನು ಅಳವಡಿಸಿರುವುದನ್ನು ಕೂಡ ಕಾಣಬಹುದಾಗಿತ್ತು ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳನ್ನು ಕೂಡ ಅಳವಡಿಸಲಾಗಿದೆ.

Toyota Innova Hycross ಕಾರಿನ ಇಂಜಿನ್

Toyota Innova Hycross ಕಾರಿನಲ್ಲಿ ಇಂಜಿನ್ ಅನ್ನು ಎರಡು ಪವರ್ ಟ್ರೈನ್ ಜೊತೆಗೆ ಪರಿಚಯಿಸಲಾಗಿದೆ. ಮೊದಲನೇದಾಗಿ 2.0 ಲೀಟರ್ ಪೆಟ್ರೋಲ್ ಇಂಜಿನ್ ಆಗಿದ್ದು ಇದು ನಿಮಗೆ 174Ps ಪವರ್ ಹಾಗೂ 205Nm ಪೀಕಾ ಟಾರ್ಕ್ ಅನ್ನು ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೇರಿಯಂಟ್ ಕಾರಿಗೆ CVT ಗೇರ್ ಬಾಕ್ಸ್ ಅನ್ನು ಕೂಡ ಅಟ್ಯಾಚ್ ಮಾಡಲಾಗಿದೆ. ಎರಡನೇ ಆಪ್ಷನ್ ರೂಪದಲ್ಲಿ ನಿಮಗೆ 2.0 ಲೀಟರ್ ಸ್ಟ್ರಾನ್ ಹೈಬ್ರಿಡ್ ಇಂಜಿನ್ ಆಗಿದೆ. eCVT ಟ್ರಾನ್ಸ್ ಮಿಷನ್ ಅನ್ನು ಈ ಕಾರಿನಲ್ಲಿ ಅಳವಡಿಸಿರುವುದನ್ನು ಕೂಡ ನೀವು ಕಾಣಬಹುದಾಗಿದೆ. ಕಂಪನಿ ಹೇಳುವ ಪ್ರಕಾರ ಈ ಕಾರು 21.1 ಕಿಲೋಮೀಟರ್ ಮೈಲೇಜ್ ನೀಡುತ್ತ

2023 toyota innova hycross2023 toyota innova hycross gx newsinnova hycross interiortoyota hycross hybridtoyota hycross mileagetoyota hycross pricetoyota innova hycross 2023 price