Bad Credit Loan: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕೂಡ ಲೋನ್ ಪಡೆದುಕೊಳ್ಳುವುದು ಹೇಗೆ? ಇದಕ್ಕಿಂತ ಸುಲಭ ಮತ್ತೊಂದಿಲ್ಲ.

Bad Credit Loan: ನಮಸ್ಕಾರ ಸ್ನೇಹಿತರೇ ಯಾವುದೇ ಲೋನ್ ಅಪ್ಲಿಕೇಶನ್ ಗಳ ಮೂಲಕ ಅಥವಾ ಬ್ಯಾಂಕುಗಳಿಂದ ನೀವು ಸಾಲ ರೂಪದಲ್ಲಿ ಹಣವನ್ನು ಪಡೆದುಕೊಳ್ಳುವುದಕ್ಕಾಗಿ ಮೊದಲಿಗೆ ನಿಮ್ಮ ಕ್ರೆಡಿಟ್ ಹಿಸ್ಟರಿ ಚೆನ್ನಾಗಿರಬೇಕು ಹಾಗೂ ಕ್ರೆಡಿಟ್ ಸ್ಕೋರ್(credit score) ಕೂಡ ಚೆನ್ನಾಗಿರಬೇಕು. ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದೆ ಹೋದಲ್ಲಿ ಸಾಲ ಸಿಗೋದು ತುಂಬಾನೇ ಕಷ್ಟವಾಗಿಬಿಡುತ್ತದೆ. ಅಂಥವರಿಗೆ ಇವತ್ತು ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದೆ ಹೋದ್ರು ಕೂಡ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಅನ್ನೋದನ್ನ ಹೇಳುವುದಕ್ಕೆ ಹೊರಟಿದ್ದೀವಿ.

ಈ ರೀತಿ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದರೆ ಆ ಸಂದರ್ಭದಲ್ಲಿ ಕೂಡ ನೀವು ಕೆಲವೊಂದು ಲೋನ್ ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ ಆದರೆ ಆ ಸಂದರ್ಭದಲ್ಲಿ ನೀವು ಹೆಚ್ಚಿನ ಬಡ್ಡಿಯನ್ನು ಕಟ್ಟಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಡಾಕ್ಯುಮೆಂಟ್ಗಳನ್ನು ಕೂಡ ಪೂರೈಸಬೇಕಾಗುತ್ತದೆ.

Below are the loans that you can get even with a bad credit score- These are best and safest way to get a loan

Bad Credit Loan ಅಂದ್ರೆ ಏನು?- what is Bad Credit Loan

ಕೆಟ್ಟದಾಗಿರುವಂತಹ ಕ್ರೆಡಿಟ್ ಸ್ಕೋರ್ ಹೊಂದಿರುವಂತಹ ವ್ಯಕ್ತಿಗಳಿಗೆ ಅಥವಾ ಯಾವುದೇ ಕ್ರೆಡಿಟ್ ಇತಿಹಾಸವನ್ನು ಹೊಂದಿಲ್ಲದೆ ಇರುವಂತಹ ವ್ಯಕ್ತಿಗಳಿಗೆ ಈ ಲೋನ್ ಅನ್ನು ಡಿಸೈನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ನೀವು ಲೋನ್ ಪಡೆದುಕೊಳ್ಳಲು ಯಾವುದಾದರೂ ವಸ್ತುವನ್ನು ಗಿರವಿ ರೂಪದಲ್ಲಿ ಇಡಬೇಕಾಗುತ್ತದೆ ಅಥವಾ ನಾಮಿನಿ ಗಳನ್ನು ಕೂಡ ನೀವು ಹೊಂದಿರಬೇಕಾಗುತ್ತದೆ. ನಿಮ್ಮ ಅತ್ಯಂತ ಎಮರ್ಜೆನ್ಸಿ ಆರ್ಥಿಕ ಅಗತ್ಯಗಳ ಸಂದರ್ಭದಲ್ಲಿ ಇಂತಹ ಲೋನ್ ಗಳು ನಿಮಗೆ ಸಹಾಯಕ್ಕೆ ಬರುತ್ತವೆ.

ಇತರ ಪ್ರಮುಖ ಸುದ್ದಿಗಳು – Personal Loan: ಲೋನ್ ಮಾರುಕಟ್ಟೆ ತಲ್ಲಣ- ಲೋನ್ ಗೆ ಎಂಟ್ರಿ ಕೊಟ್ಟ ಟಾಟಾ- 35 ಲಕ್ಷದವರೆಗೂ ಲೋನ್ ನೀಡಲು ನಿರ್ಧಾರ.

Bad Credit Loan ಗಳ ವಿಧಾನಗಳು- Bad Credit Loan Type and how to get a loan with a Bad Credit

ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಲ್ಲಿ ಆ ಸಂದರ್ಭದಲ್ಲಿ ಕೆಲವೊಂದು ಮೂಲಗಳ ಸಹಾಯದಿಂದಾಗಿ ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು ಆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಆಸ್ತಿಯ ಬದಲಾಗಿ ಸಾಲ: Loan against property

ಸಾಕಷ್ಟು ಸಂದರ್ಭದಲ್ಲಿ ನಿಮ್ಮ ಬಳಿ ಸರಿಯಾದ ಕ್ರೆಡಿಟ್ ಸ್ಕೋರ್ ಇಲ್ಲದೆ ಹೋದಲ್ಲಿ ಬ್ಯಾಂಕುಗಳು ನೀವು ಪಡೆದುಕೊಳ್ಳುವಂತಹ ಸಾಲದ ಸಮಾನವಾಗಿ ನಿಮ್ಮ ಆಸ್ತಿಯನ್ನು ಅಡ ಇಟ್ಟು ಅದಕ್ಕೆ ಸಮಾನವಾಗಿರುವಂತಹ ಮೌಲ್ಯಕ್ಕೆ ಸಾಲವನ್ನು ಪಡೆದುಕೊಳ್ಳುವ ಸಲಹೆಯನ್ನು ನೀಡುತ್ತದೆ. ನೀವು ಪಡೆದುಕೊಳ್ಳುವಂತಹ ಸಾಲದ ಮೌಲ್ಯ ಹಾಗೂ ಬಡ್ಡಿದರ ನಿಮ್ಮ ಆಸ್ತಿಯ ಮೌಲ್ಯದ ಮೇಲೆ ನಿರ್ಧಾರಿತವಾಗಿರುತ್ತದೆ.

Gold loan: Loan against Gold

ನಿಮ್ಮ ಚಿನ್ನವನ್ನು ಅಡ ಇಡುವ ಮೂಲಕವೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಬೇರೆ ಸಾಲಗಳಿಗಿಂತ ಇದು ಅತ್ಯಂತ ಸುಲಭ ವಾಗಿರುತ್ತದೆ ಹಾಗೂ ನಿಮ್ಮ ಒಟ್ಟಾರೆ ಚಿನ್ನದ ಮೌಲ್ಯವನ್ನು ಇಂದಿನ ಚಿನ್ನದ ಬೆಲೆಗೆ ಹೋಲಿಸಿ ಅದಕ್ಕೆ ಅರ್ಹ ಆಗಿರುವಂತಹ ಲೋನ್ ಅನ್ನು ನಿಮಗೆ ನೀಡಲಾಗುತ್ತದೆ.

ಸೆಕ್ಯೂರಿಟಿಗಳ ಮೇಲೆ ಲೋನ್: Loan against securities

ಒಂದು ವೇಳೆ ನೀವು ಶೇರ್ ಗಳ ಮೇಲೆ ಹೂಡಿಕೆ ಮಾಡಿದ್ರೆ, ಇಲ್ಲವೇ ಮ್ಯೂಚುವಲ್ ಫಂಡ್ ಅಥವಾ ಬಾಂಡ್ ಗಳ ಮೇಲೆ ಹೂಡಿಕೆ ಮಾಡಿದ್ರೆ ಅವುಗಳ ಸುರಕ್ಷತೆ ಆಧಾರದ ಮೇಲೆ ಕೂಡ ನೀವು ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ವಿಚಾರದಲ್ಲಿ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಅಷ್ಟೊಂದು ಗಣನೆಗೆ ಬರುವುದಿಲ್ಲ.

ಯಾವ ಅಪ್ಲಿಕೇಶನ್ ಮೂಲಕ ಬ್ಯಾಡ್ ಕ್ರೆಡಿಟ್ ಸ್ಕೋರ್ ಇದ್ರೂ ಕೂಡ ಲೋನ್ ಪಡೆದುಕೊಳ್ಳಬಹುದು ಎನ್ನುವಂತಹ ಉದಾಹರಣೆಯನ್ನು ತಿಳಿದುಕೊಳ್ಳೋಣ ಬನ್ನಿ.

Money View: How to get a loan without any guarantee

ಇದು ಕೂಡ ಒಂದು ನಾನ್ ಬ್ಯಾಂಕ್ ಫೈನಾನ್ಸಿಯಲ್ ಕಂಪನಿಯಾಗಿದೆ. ಇಲ್ಲಿ ಕೇವಲ 650 ಕ್ರೆಡಿಟ್ ಸ್ಕೋರ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿತ್ತು 5 ಲಕ್ಷ ರೂಪಾಯಿಗಳವರೆಗು ಕೂಡ ನಿಮಗೆ ಸಾಲ ಸೌಲಭ್ಯ ದೊರಕುತ್ತದೆ. ಇದು ಸಿಬಿಲ್ ಕಂಪನಿ ಗೆ ನಿಮ್ಮ ಕ್ರೆಡಿಟ್ ರಿಪೋರ್ಟ್ ನ್ನು ಕಳುಹಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಇನ್ನಷ್ಟು ಇಂಪ್ರೂವ್ ಆಗುವುದಕ್ಕೆ ಕಾರಣ ಕೂಡ ಆಗುತ್ತದೆ. 100% ಪೇಪರ್ ಲೆಸ್ ಪ್ರಕ್ರಿಯೆಗಳು ಈ ಲೋನ್ ಪಡೆಯುವ ಸಂದರ್ಭದಲ್ಲಿ ನಡೆಯುತ್ತದೆ. ಬಡ್ಡಿದರ ತಿಂಗಳಿಗೆ 1.33 ರಿಂದ ಪ್ರಾರಂಭಿಸಿ ವರ್ಷಕ್ಕೆ 16 ಪ್ರತಿಶತದವರೆಗೂ ಕೂಡ ಇದೆ. ಪ್ರೊಸೆಸಿಂಗ್ ಫೀಸ್ 2 ಪ್ರತಿಶತದವರೆಗೂ ಇದೆ. ಇನ್ನು ಲೋನ್ ಅನ್ನು 60 ತಿಂಗಳುಗಳವರೆಗೆ ಮರುಪಾವತಿಸುವಂತಹ ಸಮಯಾವಕಾಶವನ್ನು ನೀಡಲಾಗುತ್ತದೆ.

ಬ್ಯಾಡ್ ಕ್ರೆಡಿಟ್ ಲೋನ್ ಗಳನ್ನು ಪಡೆದುಕೊಳ್ಳುವ ವಿಧಾನ- How to get a loan

ಮೊದಲಿಗೆ ಈ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಖಾತೆಯನ್ನು ಬೇಕಾಗಿರುವಂತಹ ಮಾಹಿತಿಗಳನ್ನು ನೀಡುವ ಮೂಲಕ ನಿರ್ಮಾಣ ಮಾಡಬೇಕು. ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ವೆರಿಫಿಕೇಶನ್ ಅನ್ನು ಪೂರೈಸಬೇಕು. ಇದಾದ ನಂತರ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಸಂಪೂರ್ಣವಾಗಿ ನೀಡಬೇಕು ಉದಾಹರಣೆಗೆ ನಿಮ್ಮ ಆದಾಯ ನಿಮ್ಮ ಕ್ರೆಡಿಟ್ ಹಿಸ್ಟರಿ ಇತ್ಯಾದಿ. ನಿಮ್ಮ ಆದಾಯವನ್ನು ಸಾಬೀತುಪಡಿಸುವಂತಹ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ಅಥವಾ ಇನ್ಕಮ್ ಟ್ಯಾಕ್ಸ್ ರಿಟರ್ನ್ ಮಾಡಿರುವಂತಹ ದಾಖಲೆಗಳನ್ನು ಕೂಡ ನೀಡಬೇಕಾಗುತ್ತದೆ.

ಇವುಗಳನ್ನು ನೀಡಿದ ನಂತರ ನಿಮಗೆ ಬೇಕಾಗಿರುವಂತಹ ಸಾಲದ ಹಣವನ್ನು ಹಾಗೂ ಅದನ್ನು ಕಟ್ಟಲು ಬೇಕಾಗಿರುವಂತಹ ಸಮಯಾವಧಿಯನ್ನು ಆಯ್ಕೆ ಮಾಡಿದ ಮೇಲೆ ಅದಕ್ಕೆ ಕಟ್ಟಬೇಕಾಗಿರುವ ಬಡ್ಡಿ ಹಾಗೂ ಇನ್ನಿತರ ಚಾರ್ಜಸ್ ಗಳನ್ನು ಕೂಡ ನೀವು ನೋಡಬಹುದಾಗಿದೆ. ಇದೆಲ್ಲವನ್ನು ಮಾಡಿದ ಮೇಲೆ ಬ್ಯಾಂಕಿನವರು ನೀವು ಒದಗಿಸಿರುವಂತಹ ಮಾಹಿತಿಗಳ ಆಧಾರದ ಮೇಲೆ ನಿಮಗೆ ಎಷ್ಟು ಸಮಯದಲ್ಲಿ ಹಣವನ್ನು ನೀಡಬೇಕು ಎನ್ನುವಂತಹ ನಿರ್ಧಾರವನ್ನು ಮಾಡಿ ನೀವು ಒದಗಿಸಿರುವಂತಹ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳ ಆಧಾರದ ಮೇಲೆ ಆ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡುತ್ತಾರೆ.

10k loan with bad creditBad Credit Loanbad credit loans guaranteed approval in indialoanpersonal loan for bad creditpersonal loans for bad credit guaranteed approvalprivate loan for bad credit in indiaurgent loan with bad crediturgent loan with bad credit in indiaurgent loans for bad credit