ಕೇವಲ ಮೂರು ಲಕ್ಷಕ್ಕೆ ಖರೀದಿ ಮಾಡಿದರೇ ಬರೊಬ್ಬರು 35ಕಿ.ಮಿ ಮೈಲೇಜ್ ನೀಡುವ ಕಾರುಗಳು, ಅವಕಾಶ ಮಿಸ್ ಮಾಡ್ಕೋಬೇಡಿ.

ನಮಸ್ಕಾರ ಸ್ನೇಹಿತರೇ, ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಕೆಲವು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚರಿಸಿದವರಲ್ಲಿ ಮಾರುತಿ ಸುಜುಕಿ ಕಂಪನಿ ಕೂಡ ಒಂದು. ಈಗಾಗಲೇ ಸಕ್ಕತ್ ಹಿಟ್ ಆಗಿರುವ ಮಾರುತಿಯ ಸೆಲೆರಿಯೋ, ಮ್ಯಾನುವಲ್ ಹಾಗೂ ಸೆಲ್ಫ್ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಇದೀಗ ಮಾರುತಿ ಸುಜುಕಿ ತನ್ನ ಸೆಲೆರಿಯೊ ಕಾರಿನ ಎಸ್-ಸಿಎನ್ ಜಿ ಆವೃತ್ತಿಯನ್ನು ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಈ ಕಾರಿನ ಎಕ್ಸ್ ಶೋ ರೂಂ ಬೆಲೆ 6.58 ಲಕ್ಷ ರೂ.ಗಳು ಎಸ್ – ಸಿ ಎನ್ ಜಿ ತಂತ್ರಜ್ಞಾನವನ್ನು ಬಳಸಲಾಗಿದ್ದು, ಹೊಸ ಸೆಲೆರಿಯೊ ಕೆ-ಸರಣಿಯ 1.0-ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಹೊಸ ಆವೃತ್ತಿಯ ಕಾರು ಒಂದು ಕೆಜಿ ಸಿಎನ್‌ಜಿಯಲ್ಲಿ 35.60 ಕಿಮೀ ದೂರವನ್ನು ಕ್ರಮಿಸಬಲ್ಲದು. ಇನ್ನು ಮಾರುತಿ ಸುಜುಕಿ ಆಲ್ಟೊ ಕಾರು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಕಂಡಿದೆ. ಇದು ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಎ ಆರ್ ಎ ಐನಿಂದ ಪ್ರಮಾಣೀಕರಿಸಲ್ಪಟ್ಟ ಆಲ್ಟೊದ ಇಂಧನ 31.59 ಕಿಮಿ/ಕೆಜಿ. ಈ ಕಾರು 0.8 ಲೀಟರ್ ನ 3 ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಆರಂಭಿಕ ಬೆಲೆ ಸುಮಾರು 3 ಲಕ್ಷ ರೂ.ಗಳು ಮಾತ್ರ.

ಕೇವಲ ಮೂರು ಲಕ್ಷಕ್ಕೆ ಖರೀದಿ ಮಾಡಿದರೇ ಬರೊಬ್ಬರು 35ಕಿ.ಮಿ ಮೈಲೇಜ್ ನೀಡುವ ಕಾರುಗಳು, ಅವಕಾಶ ಮಿಸ್ ಮಾಡ್ಕೋಬೇಡಿ. 2

ಹಾಗೆಯೇ ಮಾರುತಿ ಸುಜುಕಿ ವ್ಯಾಗನ್ಆರ್ ಕಾರುಗಳು ಕೂಡ ಸಿಎನ್‌ಜಿ ಕಿಟ್‌ನೊಂದಿಗೆಯೇ ಬರುತ್ತವೆ. ವ್ಯಾಗನ್ಆರ್ ಸಿಎನ್‌ಜಿ ಮೈಲೇಜ್ 32.52 ಕೆಎಂಪಿಎಲ್ ನಷ್ಟು. ಇದು 1.0 ಲೀಟರ್ ಮತ್ತು 1.2 ಲೀಟರ್ ಎಂಜಿನ್, ಎರಡು ಆಯ್ಕೆಗಳನ್ನು ಒಳಗೊಂಡಿದೆ. ಇದರ ಬೆಲೆ 4.93 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದೂ ಕೂಡ ಈಗಾಗಲೇ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಗಳಿಸಿದೆ. ಮಾರುತಿಯ ಇಂಥ ಮಾದರಿಗಳು ಸಾಮಾನ್ಯ ಜನರೂ ಕೊಳ್ಳುವ ದರದಲ್ಲಿರುವುದು ವಿಶೇಷ!