Kishore: ಚೇತನ್ ಗಡಿಪಾರು ಆದೇಶಕ್ಕೆ ಆತನ ಬೆಂಬಲಕ್ಕೆ ನಿಂತ ಕಿಶೋರ್ ಗೆ ಬಿಗ್ ಶಾಕ್: ಕಾಂತಾರ ಪೊಲೀಸ್ ಗೆ ಏನಾಗಿದೆ ಗೊತ್ತೇ??

Kishore: ಸ್ಯಾಂಡಲ್ ವುಡ್ ನಲ್ಲಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುವವರು ನಟ ಚೇತನ್ ಅಹಿಂಸಾ (Chetan Ahimsa), ಇತ್ತೀಚೆಗೆ ಇವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಚೇತನ್ ಅವರ ವೀಸಾವನ್ನು ಕೇಂದ್ರ ಸರ್ಕಾರ ರಿಜೆಕ್ಟ್ ಮಾಡಿದೆ. ಅವರ ಬಳಿ ಇದ್ದ ಸಾಗರೋತ್ತರ ವೀಸಾವನ್ನು ಸರ್ಕಾರ ರಿಜೆಕ್ಟ್ ಮಾಡಿ, ಚೇತನ್ ಅವರು ಅಮೆರಿಕಾಗೆ ವಾಪಸ್ ಹೋಗಲಿ ಎಂದು ಹೇಳಿದ್ದು, ಇತ್ತೀಚೆಗೆ ಚೇತನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ತಾವು ಭಾರತ ಬಿಟ್ಟು ಹೋಗುವುದಿಲ್ಲ ಎಂದಿದ್ದರು..

Kishore: ಚೇತನ್ ಗಡಿಪಾರು ಆದೇಶಕ್ಕೆ ಆತನ ಬೆಂಬಲಕ್ಕೆ ನಿಂತ ಕಿಶೋರ್ ಗೆ ಬಿಗ್ ಶಾಕ್: ಕಾಂತಾರ ಪೊಲೀಸ್ ಗೆ ಏನಾಗಿದೆ ಗೊತ್ತೇ?? 2

ಇದೀಗ ನಟ ಕಿಶೋರ್ (Kishore) ಅವರು ಚೇತನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಚೇತನ್ ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ನಟ ಕಿಶೋರ್.. “‘ಹಿಂದುತ್ವ’ ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ. ಆದರೆ ‘ಹಿಂದುತ್ವ’ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೆ. ಇದನ್ನು ಓದಿ..Deepika Padukone: ಭೂತಾನ್ ಪ್ರವಾಸಕ್ಕೆ ಹೋಗಿರುವ ದೀಪಿಕಾ ಇರುತ್ತಿರುವ ಹೋಟೆಲ್ ನಲ್ಲಿ ದಿನದ ಖರ್ಚು ಎಷ್ಟು ಗೊತ್ತೇ? ತಿಳಿದರೆ ದೇಶಾನೇ ನಿಂತು ಹೋಗುತ್ತೆ.

ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ??ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ?
ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?
ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು??..” ಎಂದು ನಟ ಕಿಶೋರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಿಶೋರ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಪರವಾಗಿ ಮಾತನಾಡಿ ನೀವು ತಪ್ಪು ಮಾಡುತ್ತಿದ್ದೀರಾ..ನಿಮ್ಮ ಮುಂದಿನ ಸಿನಿಮಾ ಬಿಡುಗಡೆ ಸಮಯಕ್ಕೆ ನಾವು ನಿಮ್ಮ ವಿರುದ್ಧವಾಗಿ ನಿಲ್ಲುತ್ತೇವೆ..ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದು, ಇದರಿಂದ ಕಿಶೋರ್ ಅವರ ಮುಂದಿನ ಸಿನಿಮಾಗೆ ತೊಂದರೆ ಆಗುವ ಹಾಗೆ ಕಾಣುತ್ತಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?