Personal Loan: ಆಧಾರ್ ಕಾರ್ಡ್ ಬಳಸಿ ಸಾಲ ಪಡೆಯಿರಿ- Loan Interest, Eligibility Explained.

Personal Loan: ನಮಸ್ಕಾರ ಸ್ನೇಹಿತರೆ ಈಗಿನ ಪರಿಸ್ಥಿತಿಯಲ್ಲಿ ಯಾರಿಗೆ ಆಗಲಿ ಯಾವಾಗ ಬೇಕಾದರೂ ಕೂಡ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಸಾಲದ ಅವಶ್ಯಕತೆ ಬೇಕಾಗಿ ಬರಹುದು. ಆದರೆ ಇನ್ಮುಂದೆ ನೀವು ಚಿಂತೆ ಪಡಬೇಕಾದ ಅಗತ್ಯವಿಲ್ಲ ನಿಮ್ಮ ಬಳಿ ಇರುವಂತಹ ಆಧಾರ್ ಕಾರ್ಡ್ ಮೂಲಕವೇ ನೀವು ಅಗತ್ಯವಾದ ಸಂದರ್ಭದಲ್ಲಿ 50,000ಗಳವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

How to get a Personal loan easily with your Aadhar card- Loan Interest, Eligibility Explained in Kannada.

ಆಧಾರ್ ಕಾರ್ಡ್ ಲೋನ್ ಅಂದ್ರೆ ಏನು? – More details about Personal Loan

ಆಧಾರ್ ಕಾರ್ಡ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಸರ್ಕಾರ ಪ್ರಾಮಾಣಿಕೃತವಾಗಿರುವಂತಹ 12 ವಿಭಿನ್ನ ಸಂಖ್ಯೆಗಳನ್ನು ಹೊಂದಿರುವಂತಹ ಅಧಿಕೃತ ಐಡೆಂಟಿಟಿ ಪ್ರೂಫ್ ಆಗಿದೆ. ಈ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಪಡೆದುಕೊಳ್ಳುವಂತಹ ಲೋನ್ ಅನ್ನು ಆಧಾರ್ ಕಾರ್ಡ್ ಪರ್ಸನಲ್ ಲೋನ್(Aadhar Card personal) ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳಲು ಕೆಲವೊಂದು ಅರ್ಹತೆಗಳನ್ನು ಹೊಂದಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಈ ಮೂಲಕ ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳುವುದು ಇನ್ನಷ್ಟು ಸುಲಭವಾಗುತ್ತದೆ ಹಾಗೂ ವೇಗವಾಗಿ ಪಡೆದುಕೊಳ್ಳಬಹುದು.

How to get a Personal loan easily with your Aadhar card explained in Kannada – Eligibility, Loan Interest rates and features explained.

ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯೂಮೆಂಟ್ ಗಳು- Documents required to get Personal Loan

  • ಆಧಾರ್ ಕಾರ್ಡ್ – ಆಧಾರ್ ಕಾರ್ಡ್ ನಿಮ್ಮ ಪ್ರಾಥಮಿಕ ಗುರುತು ಪತ್ರದ ರೂಪದಲ್ಲಿ ಕೆಲಸ ಮಾಡುತ್ತದೆ. ಇದು 12 ಸಂಖ್ಯೆಗಳ ವಿಭಿನ್ನ ಐಡಿಯನ್ನು ಹೊಂದಿರುತ್ತದೆ.
  • PAN Card: ಸಾಲವನ್ನು ನೀಡುವುದರಿಂದ ಮುಂಚೆ ಪಾನ್ ಕಾರ್ಡ್ ಮೂಲಕವೇ ಸಾಲ ನೀಡುವ ಸಂಸ್ಥೆ ಯಾವುದು ನಿಮ್ಮ ಟ್ರಾನ್ಸಾಕ್ಷನ್ ಹಿಸ್ಟರಿಯನ್ನು ಪಡೆದುಕೊಳ್ಳುತ್ತಾರೆ.
  • ಅಡ್ರೆಸ್ ಪ್ರೂಫ್: ಅಡ್ರೆಸ್ ಪ್ರೂಫ್ ಕೂಡ ಬೇಕಾಗಿರುತ್ತದೆ ನೀವು ಇದನ್ನು ನಿಮ್ಮ ಕರೆಂಟ್ ಬಿಲ್ ವಾಟರ್ ಬಿಲ್ ಅಥವಾ ರೆಂಟಲ್ ಅಗ್ರಿಮೆಂಟ್ ಮೂಲಕ ಅಡ್ರೆಸ್ ಪ್ರೂಫ್ ದಾಖಲೆ ರೂಪದಲ್ಲಿ ಸಬ್ಮಿಟ್ ಮಾಡಬಹುದಾಗಿದೆ.
  • ಬ್ಯಾಂಕ್ ಸ್ಟೇಟ್ಮೆಂಟ್: ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಅಳೆಯುವುದಕ್ಕೆ ಸಾಲವನ್ನು ನೀಡುವ ಸಂಸ್ಥೆಯವರು ನಿಮ್ಮ ಕೆಲವು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಕೂಡ ಕೇಳುತ್ತಾರೆ.
  • ಫೋಟೋಗ್ರಾಫ್: ದಾಖಲೆ ರೂಪದಲ್ಲಿ ನಿಮ್ಮ ಕೆಲವೊಂದು ಪಾಸ್ಪೋರ್ಟ್ ಸೈಜ್ ಫೋಟೋವನ್ನು ಕೂಡ ಕೇಳಲಾಗುತ್ತದೆ.
  • ಇನ್ಕಮ್ ಪ್ರೂಫ್: ಇನ್ಕಮ್ ಪ್ರೂಫ್ ರೂಪದಲ್ಲಿ ಸ್ಯಾಲರಿ ಸ್ಲಿಪ್, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಇನ್ಕಮ್ ಟ್ಯಾಕ್ಸ್ ರಿಟರ್ನ್ ಹಾಗೂ ಸ್ಯಾಲರಿ ಪಡೆದುಕೊಳ್ಳುವ ಉದ್ಯೋಗಿಗಳಿಗೆ ಫಾರ್ಮ್ 16 ಕೂಡ ಈ ಸಂದರ್ಭದಲ್ಲಿ ಬೇಕಾಗುತ್ತದೆ.
  • ಕೊನೆಯದಾಗಿ ಲೋನಿನ ಇಎಂಐ ಗಾಗಿ ಪೋಸ್ಟ್ ಡೇಟೆಡ್ ಆಗಿರುವ ಚೆಕ್ ಅನ್ನು ಅಥವಾ ECS ಅನ್ನು ಸಬ್ಮಿಟ್ ಮಾಡಬೇಕು.

ಇದನ್ನು ಕೂಡ ಓದಿ: EV Car: ಇದು ಭಾರತದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು – ಇದು ಕೇವಲ ₹ 500 ವೆಚ್ಚದಲ್ಲಿ 6900 ಕಿಮೀ ಓಡುತ್ತದೆ

ಆಧಾರ್ ಕಾರ್ಡ್ ಲೋನಿನ ಲಾಭಗಳು- Benefits of Loan

  • ವೇಗವಾಗಿ ಲೋನ್ ಸಿಗುತ್ತೆ: ಬೇರೆ ವಿಧಾನಗಳ ಮೂಲಕ ಲೋನ್ ಪಡೆಯುವಾಗ ಸಾಕಷ್ಟು ಸಮಯಗಳು ಪ್ರೋಸೆಸಿಂಗ್ ಗಾಗಿ ಬೇಕಾಗುತ್ತದೆ ಆದರೆ ಇಲ್ಲಿ ವೇಗವಾಗಿ ನೀವು ಪಡೆದುಕೊಳ್ಳಬಹುದು.
  • ಕಡಿಮೆ ಡಾಕ್ಯೂಮೆಂಟ್ ಗಳು: ಬೇರೆ ಸಾಂಪ್ರದಾಯಿಕ ಲೋನ್ ಪ್ರಕ್ರಿಯೆಗಳಿಗೆ ಹೋಲಿಸಿದರೆ ಆಧಾರ್ ಕಾರ್ಡ್ ಮೂಲಕ ಪಡೆದುಕೊಳ್ಳುವಂತಹ ಲೋನ್ ಗಳಲ್ಲಿ ಅತ್ಯಂತ ಕಡಿಮೆ ಡಾಕ್ಯುಮೆಂಟ್ಗಳು ಬೇಕಾಗುತ್ತದೆ.
  • ಫ್ಲೆಕ್ಸಿಬಲ್ ಲೋನ್ ಅಮೌಂಟ್ ಗಳು: ಈ ಮೂಲಕ ನೀವು ಚಿಕ್ಕ ಪ್ರಮಾಣದ ಲೋನ್ ಗಳಿಂದ ಹಿಡಿದು ದೊಡ್ಡ ಪ್ರಮಾಣದ ಲೋನ್ಗಳ ವರೆಗೂ ಕೂಡ ಸುಲಭ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
  • ಯಾವುದೇ ಕೊಲಾಟರಲ್ ಅಗತ್ಯ ಇಲ್ಲ: ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಯಾವುದೇ ರೀತಿಯ ಸೆಕ್ಯೂರಿಟಿ ಅಥವಾ ಆಸ್ತಿಯನ್ನು ಅಡ ಇಡುವಂತಹ ಅಗತ್ಯ ಇಲ್ಲ. ಸುಲಭವಾಗಿ ಲೋನ್ ಪಡೆದುಕೊಳ್ಳಬಹುದು.
  • ಫ್ಲೆಕ್ಸಿಬಲ್ ಮರುಪಾವತಿ ಅವಕಾಶ ಹಾಗೂ ಪಾರದರ್ಶಕತೆ: ನಿಮ್ಮ ಬಜೆಟ್ ಗೆ ಅನುಗುಣವಾಗಿ ಸಾಲವನ್ನು ಮರುಪಾವತಿ ಮಾಡುವಂತಹ ಅವಕಾಶವನ್ನು ನಿಮಗೆ ನೀಡಲಾಗುತ್ತದೆ. ಪ್ರತಿಯೊಂದು ಪ್ರೋಸೆಸ್ ಹಾಗೂ ಅವುಗಳಲ್ಲಿ ಅಡಕವಾಗಿರುವಂತಹ ಚಾರ್ಜಸ್ ಗಳ ಬಗ್ಗೆ ಕೂಡ ಪಾರದರ್ಶಕತೆಯ ನಿಲುವನ್ನು ಪ್ರದರ್ಶಿಸಲಾಗುತ್ತದೆ.
  • ಕ್ರೆಡಿಟ್ ಸ್ಕೋರ್ ಇಂಪ್ರೂವ್ ಆಗುತ್ತದೆ: ಈ ಮೂಲಕ ನೀವು ಸರಿಯಾದ ಮರುಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಮೂಡಿಬರುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸಾಲ ಪಡೆದುಕೊಳ್ಳುವುದಕ್ಕೆ ಕೂಡ ಅನುಕೂಲವಾಗುತ್ತದೆ.
  • ಆನ್ಲೈನ್ ಮೂಲಕವೇ ಇವುಗಳನ್ನು ಪ್ರೋಸೆಸ್ ಮಾಡಲಾಗುತ್ತದೆ ಹೀಗಾಗಿ ಮನೆಯಲ್ಲಿ ಕುಳಿತುಕೊಂಡು ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು ಆಧಾರ್ ಕಾರ್ಡ್ ಎಲ್ಲಾ ಕಡೆಗಳಲ್ಲಿ ಕೂಡ ಒಪ್ಪಿಗೆ ಆಗುವ ಕಾರಣದಿಂದಾಗಿ ಆಧಾರ್ ಕಾರ್ಡ್ ಮೂಲಕ ನೀವು ಯಾವುದೇ ಕಡೆಯಲ್ಲಿ ಬೇಕಾದ್ರೂ ಲೋನ್ ಪಡೆದುಕೊಳ್ಳಬಹುದು.
  • ಎಮರ್ಜೆನ್ಸಿ ಆರ್ಥಿಕ ಸಹಾಯ: ಅನಿರೀಕ್ಷಿತ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಸುಲಭ ರೂಪದಲ್ಲಿ ವೇಗವಾಗಿ ನಿಮಗೆ ಬೇಕಾಗುವ ಸಮಯದಲ್ಲಿ ಹಣವನ್ನು ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳುವ ವಿಧಾನ- How to get Personal Loan

  • ಮೊದಲು ಅರ್ಹತೆಯನ್ನು ಪರೀಕ್ಷಿಸಿಕೊಳ್ಳಿ: ನೀವು ಮೊದಲು ಸಾಲ ಪಡೆದುಕೊಳ್ಳುವುದಕ್ಕಿಂತ ಮುಂಚೆ ನಿಮ್ಮ ವಯಸ್ಸು, ಪೌರತ್ವ, ಸೇರಿದಂತೆ ಸಾಲ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳನ್ನು ಪ್ರಮುಖವಾಗಿ ಪರೀಕ್ಷಿಸಿಕೊಳ್ಳಿ.
  • ದಾಖಲೆಗಳ ಒಟ್ಟುಗೂಡಿಸುವಿಕೆ: ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವಂತಹ ಮೂಲಭೂತ ಡಾಕ್ಯುಮೆಂಟುಗಳಾಗಿರುವಂತಹ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್, ಫೋಟೋಗ್ರಾಫ್ ಗಳಂತಹ ದಾಖಲೆಗಳನ್ನು ಒಟ್ಟುಗೂಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಸಾಲವನ್ನು ನೀಡುವವರನ್ನು ಆಯ್ಕೆ ಮಾಡುವುದು- How to choose Loan vendures?

ಇಂಟರ್ನೆಟ್ ಗೆ ಹೋಗಿ ಆಧಾರ್ ಕಾರ್ಡ್ ಮೂಲಕ ಲೋನ್ ನೀಡುವಂತಹ ಲೋನ್ ಲೆಂಡರ್ ಅನ್ನು ಆಯ್ಕೆ ಮಾಡಿ ಹಾಗೂ ಬೇರೆ ಲೋನ್ ನೀಡುವಂತಹ ವೆಬ್ಸೈಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಅಳೆದು ತೂಗಿ ಯಾರು ಕಡಿಮೆ ಬಡ್ಡಿಯಲ್ಲಿ ಹಾಗೂ ಬೇರೆ ರೀತಿಯ ಲಾಭಗಳನ್ನು ಕಂಪೇರ್ ಮಾಡಿ ನಂತರ ಸಾಲವನ್ನು ಪಡೆದುಕೊಳ್ಳಬೇಕಾಗಿರುತ್ತದೆ. ನಂತರ ಅವುಗಳ ಅಪ್ಲಿಕೇಶನ್ ಅಥವಾ ಆನ್ಲೈನ್ ವೆಬ್ಸೈಟ್ ಮೂಲಕ ನೀವು ಬೇಕಾಗಿರುವಂತಹ ಮಾಹಿತಿಗಳನ್ನು ತುಂಬಿಸಿ ಸಾಲಕ್ಕಾಗಿ ಅರ್ಜಿ ಹಾಕಬಹುದು.

ವೆರಿಫಿಕೇಶನ್ ಪ್ರಕ್ರಿಯೆ- Verification Process

ಲೋನ್ ಅಪ್ಲಿಕೇಶನ್ ನಲ್ಲಿ ನೀವು ಒದಗಿಸುವಂತಹ ಪ್ರತಿಯೊಂದು ಡಾಕ್ಯುಮೆಂಟ್ ಗಳನ್ನು ಹಾಗೂ ಮಾಹಿತಿಗಳನ್ನು ಲೋನ್ ನೀಡುವಂತಹ ಆಪ್ಲಿಕೇಶನ್ ನ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವೆರಿಫಿಕೇಷನ್ ಮಾಡುತ್ತಾರೆ. ನೀವು ಫಿಸಿಕಲ್ ರೂಪದಲ್ಲಿ ನೀಡಿರುವಂತಹ ಪ್ರತಿಯೊಂದು ದಾಖಲೆಗಳನ್ನು ಕೂಡ ಅಲ್ಲಿ ಪರೀಕ್ಷಿಸಲಾಗುತ್ತದೆ.

ಲೋನ್ ಅಪ್ರುವಲ್- Loan Approval Process

ನೀವು ನೀಡಿರುವಂತಹ ದಾಖಲೆಗಳನ್ನು ಪರಿಶೀಲಿಸಿದ ನಂತರ ಒಂದು ಗಂಟೆಯ ಒಳಗಾಗಿ ಲೋನ್ ನೀಡುವಂತಹ ಕಂಪನಿಯವರು ಹಣವನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಾರೆ.

ಲೋನ್ ಮರುಪಾವತಿ- EMI Details

ಇನ್ನು ಈ ಸಂದರ್ಭದಲ್ಲಿ ನಿಮಗೆ ಪ್ರತಿ ಕಂತಿನಲ್ಲಿ ಎಷ್ಟು ಹಣವನ್ನು ಕಟ್ಟಬೇಕು ಹಾಗೂ ಎಷ್ಟು ಅವಧಿಗೆ ಹಣವನ್ನು ಕಟ್ಟಬೇಕು ಎನ್ನುವಂತಹ ಆಯ್ಕೆಯನ್ನು ಕೂಡ ನೀಡಲಾಗುತ್ತದೆ. ಸರಿಯಾದ ಅವಧಿಯಲ್ಲಿ ಸರಿಯಾದ ಹಣವನ್ನು ಕಟ್ಟುವ ಮೂಲಕ ವೇಗವಾಗಿ ಹಣವನ್ನು ಕಟ್ಟಿದರೆ ಇನ್ನಷ್ಟು ಸಾಲ ಸೌಲಭ್ಯವನ್ನು ನೀಡುವಂತಹ ಅವಕಾಶವನ್ನು ಕೂಡ ನೀವು ಪಡೆದುಕೊಳ್ಳುತ್ತೀರಿ.

10000 loan on aadhar card5000 loan on aadhar card without documents50000 loan on aadhar cardaadhar card loan 50000 online applyInstant personal loan using aadhar cardPersonal loan using aadhar card sbiPersonal loan using aadhar card without documentsPersonal loan using aadhar card without salary