ನಿಮ್ಮ ಮಕ್ಕಳು ಅಥವಾ ನೀವು ಪರೀಕ್ಷೆ ಹತ್ತಿರ ಬಂದಾಗ ಹೇಗೆ ಓದಬೇಕು ಗೊತ್ತೇ?? ಹೀಗೆ ಓದಿ ನೋಡಿ, 90 ಅಂಕ ಫಿಕ್ಸ್. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದೀಗ ಮಾರ್ಚ್ ತಿಂಗಳು. ಎಲ್ಲಾ ಮಕ್ಕಳಿಗೆ ಎಲ್ಲಾ ಸ್ಕೂಲ್ ಗಳಲ್ಲಿ ಪರೀಕ್ಷೆ ಆರಂಭವಾಗುತ್ತಿದೆ. ಈ ಸಮಯದಲ್ಲಿ ಮಕ್ಕಳಿಗೆ ಮಾತ್ರವಲ್ಲ, ತಂದೆ ತಾಯಿಯರಿಗೂ ಟೆನ್ಶನ್ ಶುರುವಾಗತ್ತೆ. ಮಕ್ಕಳು ಹೇಗೆ ಪರೀಕ್ಷೆ ಬರೆಯುತ್ತಾರೆ ಅನ್ನೋದು ಅವರ ಚಿಂತೆಯಾದ್ರೆ ಓದಿದ್ದೇಲ್ಲಾ ಮರೆತು ಹೋಗತ್ತೆ ಅನ್ನೋದು ಮಕ್ಕಳ ಚಿಂತೆ. ಇದಕ್ಕಾಗಿ ಮುಖ್ಯವಾಗಿ ನೀವು ಮಾಡಬೇಕಾಗಿದ್ದು ಇಷ್ಟೇ.

ನಿಮ್ಮ ಮಕ್ಕಳು ಅಥವಾ ನೀವು ಪರೀಕ್ಷೆ ಹತ್ತಿರ ಬಂದಾಗ ಹೇಗೆ ಓದಬೇಕು ಗೊತ್ತೇ?? ಹೀಗೆ ಓದಿ ನೋಡಿ, 90 ಅಂಕ ಫಿಕ್ಸ್. ಹೇಗೆ ಗೊತ್ತೇ?? 4

ನಿಮ್ಮ ಓದುವ ಕ್ರಮ ಸರಿಯಾಗಿ ಇರಬೇಕು. ನಾವು ಹೇಳುವ ಈ ಕೆಲವು ಟಿಪ್ಸ್ ಗಳು ಖಂಡಿತವಾಗಿಯೂ ನಿಮಗೆ ಓದುವುದಕ್ಕೆ ಸಹಾಯ ಮಾಡುತ್ತೆ. ಮೊದಲನೆಯದಾಗಿ ನೀವು ನಿಮ್ಮ ಪಠ್ಯದ ಪಾಠವನ್ನ ಪರೀಕ್ಷೆಯ ಮೊದಲು ಓದಿ ಮುಗಿಸಿ. ಆದರೆ ಅದರ ಜೊತೆಗೆ ಪ್ರಾಯೋಗಿಕವಾಗಿ ಒಂದು ಕೆಲಸ ಮಾಡಿ. ಕನಿಷ್ಠ ಹತ್ತು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನ ತೆಗೆದುಕೊಂಡು ಬಗೆಹರಿಸಿ. ಹೀಗೆ ಮಾಡಿದ್ರೆ ಖಂಡಿತವಾಗಿಯೂ ನಿಮ್ಮ ಪರೀಕ್ಷೆ ಸುಲಭ ಅನ್ನಿಸುತ್ತೆ. ಯಾಕಂದ್ರೆ ಅದರಲ್ಲಿ ರಿಪೀಟ್ ಪ್ರಶ್ನೆಗಳು ಬಂದೇ ಬರುತ್ತೆ.

ಮುಂದಿನದು ನೀವು ಯಾವುದೇ ಕೆಲಸ ಮಾಡುವಾಗ ಸರಿಯಾದ ಪ್ಲ್ಯಾನ್ ಮಾಡ್ಕೋಬೇಕು. ಅದೇ ಸ್ಟಡಿ ಪ್ಲ್ಯಾನ್. ನಿಮ್ಮ ಕ್ಯಾಲೆಂಡರ್ ನಲ್ಲಿ ಪರೀಕ್ಷೆಗೆ ಎಷ್ಟು ದಿನ ಬಾಕಿ ಇದೆ. ಎಷ್ಟು ಓದಿ ಮುಗಿಸಬೇಕು ಅಂತ ಪ್ಲ್ಯಾನ್ ಮಾಡ್ಕೋಳ್ಳಿ. ಕಠಿಣವಾದ ವಿಷಯಕ್ಕೆ ಹೆಚ್ಚು ದಿನ ಹಾಗೂ ಸುಲಭ ವಿಷಯಕ್ಕೆ ಕಡಿಮೆ ಸಮಯ ಕೊಟ್ಟು ಓದಿಕೊಳ್ಳಿ. ಆಗ ಎಲ್ಲಾ ವಿಷಯಗಳನ್ನು ಓದಿ ಮುಗಿಸಿ, ಕನಿಷ್ಟ 3 ಸಲನಾದ್ರೂ ರಿವಾಯ್ಸ್ ಮಾಡಿಕೊಳ್ಳಬೇಕು.

ನಿಮ್ಮ ಮಕ್ಕಳು ಅಥವಾ ನೀವು ಪರೀಕ್ಷೆ ಹತ್ತಿರ ಬಂದಾಗ ಹೇಗೆ ಓದಬೇಕು ಗೊತ್ತೇ?? ಹೀಗೆ ಓದಿ ನೋಡಿ, 90 ಅಂಕ ಫಿಕ್ಸ್. ಹೇಗೆ ಗೊತ್ತೇ?? 5

ಮುಂದಿನ ಟಿಪ್ಸ್ ರಿವಿಜನ್. ನೀವು ಓದಿದ್ದನ್ನ 24 ಗಂಟೆಗಳ ಒಳಗಾಗಿ ರಿವಾಯ್ಸ್ ಮಾಡಬೇಕು. ಯಾರು ಓದಿದ್ದನ್ನ 24 ಗಂಟೆಗಳ ಒಳಗಾಗಿ ಅಂದರೆ ಓದಿದ ದಿನವೇ ಮತ್ತೆ ಮೆಲುಕು ಹಾಕೋದಿಲ್ವೋ ಅಂಥವರು ಶೇ 80 ರಷ್ಟು ವಿಷಯವನ್ನ ಮರೆತು ಬಿಡುತ್ತಾರೆ ಎಂದು ವಿಜ್ಞಾನ ಹೇಳತ್ತೆ. ಹಾಗಾಗಿ ನೀವು ಓದಿದ್ದನ್ನ ಮತ್ತೊಮ್ಮೆ ತಿರುವಿಹಾಕುವುದು ಅತೀ ಅವಶ್ಯಕ. ದಿನದಲ್ಲಿ ಓದಿದ್ದನ್ನ ಮಲಗುವ ಮುನ್ನ ಒಮ್ಮೆ ರಿವಾಯ್ಸ್ ಮಾಡಿಯೇ ಮಲಗಿ. ಆಗ ಬೆಳಗ್ಗೆ ಎದ್ದು ಮತ್ತೊಮ್ಮೆ ನೋಡಿದ್ರೆ ಎಲ್ಲಾ ವಿಷಯಗಳೂ ನಿಮ್ಮ ಮೈಂಡ್ ನಲ್ಲಿ ಕೂತಿರುತ್ತೆ.

ಪರೀಕ್ಷೆಯ ಹಿಂದಿನ ದಿನದ ಅಭ್ಯಾಸ. ಇದು ಅತೀ ಮುಖ್ಯವಾದ ವಿಷಯ. ಪರೀಕ್ಷೆಯ ಹಿಂದಿನ ದಿನ ಟೆನ್ಶನ್ ಮಾಡಿಕೊಂಡು ಇಡೀ ಪುಸ್ತಕ ಓದುವುದಲ್ಲ, ನೀವು ಓದಿದ ಮಹತ್ವದ ಪಾಯಿಂಟ್ ಗಳನ್ನು ಮಾತ್ರ ರಿವಾಯ್ಸ್ ಮಾಡಿಕೊಳ್ಳುವುದು. ಹಾಗಾಗಿ ಪ್ರತಿ ಬಾರಿ ಓದುವಾಗ ಮಹತ್ವದ ಅಂಶಗಳನ್ನು ಗುರುತು ಹಾಕಿ ಇಟ್ಟುಕೊಳ್ಳಬೇಕು.

ನಿಮ್ಮ ಮಕ್ಕಳು ಅಥವಾ ನೀವು ಪರೀಕ್ಷೆ ಹತ್ತಿರ ಬಂದಾಗ ಹೇಗೆ ಓದಬೇಕು ಗೊತ್ತೇ?? ಹೀಗೆ ಓದಿ ನೋಡಿ, 90 ಅಂಕ ಫಿಕ್ಸ್. ಹೇಗೆ ಗೊತ್ತೇ?? 6

ಕೆಲವು ಮಹತ್ವದ ವಿಷಯವನ್ನ ನೋಟ್ಸ್ ಕೂಡ ಮಾಡಿಟ್ಟುಕೊಂಡು ಪರೀಕ್ಷೆಯ ಹಿಂದಿನ ದಿನ ಓದಬೇಕು. ಶಾಂತ ಮನಸ್ಸಿನಿಂದ ಸ್ಮಾರ್ಟ್ ಆಗಿ ಓದಿದ್ರೆ ನೀವು ಮರುದಿನ ಪರೀಕ್ಷೆಯನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಈ ರೀತಿ ಮಾಡಿದ್ರೆ ಖಂಡಿತವಾಗಿಯೂ ನೀವು ಸುಲಭವಾಗಿ ಪರೀಕ್ಷೆಯನ್ನು ಎದುರಿಸುತ್ತೀರಿ. ಪರೀಕ್ಷೆ ಬರೆಯುವ ಎಲ್ಲರಿಗೂ ಆಲ್ ದಿ ಬೆಸ್ಟ್.