Jio: ದೀಪಾವಳಿ ಹಬ್ಬದ ಸಮಯದಲ್ಲಿ ಸ್ವೀಗ್ಗಿ ಜೊತೆ ಸೇರಿ ಹೊಸ ಪ್ಲಾನ್ ಬಿಡುಗಡೆ ಮಾಡಿದ ಜಿಯೋ.

Jio Recharge Plans: ನಮಸ್ಕಾರ ಸ್ನೇಹಿತರೆ ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಂದು ಪ್ರತಿಷ್ಠಿತ ಕಂಪನಿಗಳು ಕೂಡ ತಮ್ಮ ಗ್ರಾಹಕರಿಗೆ ದೀಪಾವಳಿ ಹಬ್ಬದ ಉಡುಗೊರೆಗಳು ಹಾಗೂ ರಿಯಾಯಿತಿಯನ್ನು ಕೂಡ ನೀಡುತ್ತಿವೆ. ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡುತ್ತಿರುವುದು jio ಸಂಸ್ಥೆಯ ರಿಚಾರ್ಜ್ ಆಫರ್ ಬಗ್ಗೆ. ಅದರಲ್ಲಿ ಈ ಬಾರಿ ವಿಶೇಷವಾಗಿ ಅಮೆಜಾನ್, ನೆಟ್ ಪ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಸೋನಿ ಲಿವ್, ಝೀ 5 ಸೇರಿದಂತೆ ಈ ಬಾರಿ ದೀಪಾವಳಿಯಲ್ಲಿ ಸ್ವಿಗ್ಗಿ ಫುಡ್ ಆರ್ಡರ್ ಅಪ್ಲಿಕೇಶನ್ ಜೊತೆಗೆ ಕೂಡ ಜಿಯೋ ಸಂಸ್ಥೆ ಪಾರ್ಟಿನೆರ್ಶಿಪ್ ಮಾಡಿಕೊಂಡು ಗ್ರಾಹಕರಿಗೆ ಅದರಿಂದ ಲಾಭವನ್ನು ನೀಡುತ್ತಿದೆ.

Below is the more details about Jio plan with Swiggy One lite Membership.

866 ರೂಪಾಯಿಗಳ jio ರಿಚಾರ್ಜ್ ಪ್ಲಾನ್: 866 ರೂಪಾಯಿಗಳ ಹೊಸ jio ರಿಚಾರ್ಜ್ ಪ್ಲಾನ್ ಬಗ್ಗೆ ಮಾತನಾಡುವುದಾದರೆ ಈ ರಿಚಾರ್ಜ್ ಜೊತೆಗೆ ನಿಮಗೆ 84 ದಿನಗಳ ಅಂದರೆ ಸರಿಸುಮಾರು ಮೂರು ತಿಂಗಳುಗಳ ವ್ಯಾಲಿಡಿಟಿ ಸಿಗುತ್ತದೆ ಎಂದು ಹೇಳಬಹುದಾಗಿದೆ. ಪ್ರತಿದಿನ 2GB ಇಂಟರ್ನೆಟ್ ಡೇಟಾವನ್ನು ವ್ಯಾಲಿಡಿಟಿ ಮುಗಿಯುವವರೆಗೂ ನೀಡಲಾಗುತ್ತದೆ ಅಂದರೆ ವ್ಯಾಲಿಡಿಟಿ ಮುಗಿಯುವವರೆಗೂ ಕೂಡ ಒಟ್ಟಾರೆಯಾಗಿ 168 ಜಿಬಿ ಇಂಟರ್ನೆಟ್ ಡೇಟಾವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜೊತೆಗೆ ನಿಮಗೆ ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ಕೂಡ ನೀಡಲಾಗಿದೆ.

ಇದನ್ನು ಕೂಡ ಓದಿ: Google Pixel 8: ಕೊನೆಗೂ ಬಿಡುಗಡೆಯಾಯಿತು Google Pixel 8 Pro ಸ್ಮಾರ್ಟ್ ಫೋನ್ ನ ಹೊಸ ವೇರಿಯಂಟ್. ಇಲ್ಲಿದೆ ನೋಡಿ ಸ್ಪಷ್ಟ ಮಾಹಿತಿ.

Jio 5G ಯೋಜನೆಯನ್ನು ಬಳಸುತ್ತಿರುವವರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತೊಂದು ಗುಡ್ ನ್ಯೂಸ್ ಕೂಡ ಇದೆ. ಜಿಯೋ ವೆಲ್ಕಂ ಯೋಜನೆ ಅಡಿಯಲ್ಲಿ ಇಂತಹ ಗ್ರಾಹಕರು ಅನ್ಲಿಮಿಟೆಡ್ 5G ಯೋಜನೆಯನ್ನು ಕೂಡ ಆನಂದಿಸಬಹುದಾಗಿದ್ದು ಇದರ ಜೊತೆಗೆ swiggy on light ಸಬ್ಸ್ಕ್ರಿಪ್ಷನ್ ಅನ್ನು ಪಡೆದುಕೊಂಡಿರುವವರಿಗೆ ಮೂರು ತಿಂಗಳ ಸಮಯಕ್ಕೆ ಉಚಿತವಾಗಿ ನಿಮಗೆ ಈ ವಿಶೇಷ ಸೇವೆ ಸಿಗಲಿದೆ. ಜಿಯೋ ಈ ಬಾರಿ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಸಖತ್ ಗಿಫ್ಟ್ ನೀಡ್ತಾ ಇದೆ ಎಂದು ಹೇಳಬಹುದು.

more details about Jio plan with Swiggy One lite Membership

ಸ್ವಿಗ್ಗಿ ಒನ್ ಲೈಟ್ ಸಬ್ಸ್ಕ್ರಿಪ್ಷನ್ ನಲ್ಲಿ ಸಿಗುವ ಲಾಭಗಳು: ಒಂದು ವೇಳೆ ನೀವು Swiggy ಅಪ್ಲಿಕೇಶನ್ ನಲ್ಲಿ 149 ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಆರ್ಡರ್ ಅನ್ನು ಪ್ಲೇಸ್ ಮಾಡಿದರೆ ಉಚಿತ ಹೋಮ್ ಡೆಲಿವರಿ ಸಿಗುತ್ತದೆ. ಒಂದು ವೇಳೆ 199 ಗಳಿಗಿಂತ ಹೆಚ್ಚಿನ ಆರ್ಡರ್ ಮಾಡಿದ್ರೆ Instamart ಫ್ರೀ ಡೆಲಿವರಿ ಸಿಗುತ್ತದೆ. ಸಿಗುವಂತ ಎರಡು ಆಫರ್ ಗಳಲ್ಲಿ ಕೂಡ ಯಾವುದೇ ರೀತಿಯ ಸರ್ಜ್ ಚಾರ್ಜ್ ಅನ್ನು ವಿಧಿಸಲಾಗುವುದಿಲ್ಲ. ಸಾಮಾನ್ಯ ಆರ್ಡರ್ಗಳನ್ನು ಹೊರತುಪಡಿಸಿ 20000ಕ್ಕೂ ಹೆಚ್ಚಿನ ಹೋಟೇಲಲ್ಲಿ ನೀವು ಒಂದು ವೇಳೆ ಯಾವುದೇ ಹೋಟೆಲ್ಗಳಲ್ಲಿ ಆರ್ಡರ್ ಮಾಡಿದರು ಕೂಡ 30% ಆಫರ್ ಅನ್ನು ನೀಡುವಂತಹ ಒಪ್ಪಂದವನ್ನು ಕೂಡ ಎರಡು ಸಂಸ್ಥೆಗಳು ಮಾಡಿಕೊಂಡಿವೆ. 60 ರೂಪಾಯಿಗಳ ಮೇಲಿನ ಡೆಲಿವರಿಗಳ ಮೇಲೆ 10 ಪ್ರತಿಶತ ಆಫರ್ ಇದೆ.

ಜಿಯೋ ಸಂಸ್ಥೆ ಕೂಡ ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಸಾಕಷ್ಟು ವಿಭಿನ್ನ ಕ್ಯಾಟಗರಿಯ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ಜಾರಿಗೆ ತರುವ ಕೆಲಸವನ್ನು ಮಾಡುತ್ತಿದೆ. 3237 ವಾರ್ಷಿಕ ಯೋಜನೆಯನ್ನು ಕೂಡ ಇತ್ತೀಚಿಗಷ್ಟೇ ಪರಿಚಯಿಸಿದೆ. ಇಲ್ಲಿ ಕೂಡ ಪ್ರತಿದಿನ 2 ಜಿಬಿ ಇಂಟರ್ನೆಟ್ ಸಿಗುತ್ತದೆ. ಇದರಲ್ಲಿ ಟಾಪ್ ಓ ಟಿ ಟಿ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವಂತಹ ಅಮೆಜಾನ್ ಪ್ರೈಮ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದು.

Jiojio phone recharge planjio recharge 49jio recharge data planjio recharge plan 2023jio recharge plan 3-monthjio recharge plansjio recharge postpaidprepaid recharge