Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.

Reno 10: ಓಪೋ ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯತೆ ಮೊಬೈಲ್ ಫೋನ್ ಆಗಿದೆ. ಈ ಕಂಪನಿಯಿಂದ ಹೊಸ ಮೊಬೈಲ್ ಫೋನ್ ಬಿಡುಗಡೆ ಮಾಡುವ ಸಮಯ ಬಂದಾಗ ಅಭಿಮಾನಿಗಳು ಕಾತುರರಾಗಿ ಕಾಯುತ್ತಿರುತ್ತಾರೆ. ಇದೀಗ ಓಪೋ ಸಂಸ್ಥೆ ತಮ್ಮ Reno ಸೀರೀಸ್ ನ 9ನೇ ಆವೃತ್ತಿಯ ಬದಲಾಗಿ ಓಪೋ Reno 10ನೇ ಮಾಡಲ್ ಈಗ ಭಾರತದಲ್ಲಿ ಲಾಂಚ್ ಮಾಡಲಾಗುತ್ತದೆ. 2022 Reno 8 ಸೀರೀಸ್ ಬಿಡುಗಡೆ ಆಗಿತ್ತು.

oppo reno 10 details explained in kannada

ಈ ಫೋನ್ ಓಪೋ ವೆಬ್ಸೈಟ್ ನಲ್ಲಿ ಮತ್ತು ಫ್ಲಿಫ್ ಕಾರ್ಟ್ ನಲ್ಲಿ ಮಾರಾಟವಾಗಲಿದೆ, ಓಪೋ ವೆಬ್ಸೈಟ್ ನಲ್ಲಿ ಅಧಿಕೃತವಾಗಿ ಸಿಗಲಿದ್ದು ಈ Reno 10 ಫೋನ್ ಗಾಗಿ ಫ್ಲಿಪ್ ಕಾರ್ಟ್ ಹೊಸ ಪೇಜ್ ಶುರು ಮಾಡುತ್ತಿದೆ. ಇದರಲ್ಲಿ Reno 10 ಫೋನ್ ಬಗ್ಗೆ ಕೆಲವು ವಿಶೇಷತೆಗಳನ್ನು ರಿಲೀಸ್ ಮಾಡಿದೆ, ಈ ಫೋನ್ 3 ವೇರಿಯಂಟ್ ಗಳಲ್ಲಿ ಬರಲಿದ್ದು, ಅವುಗಳಲ್ಲಿ ಪಂಚ್ ಹೋಲ್ ಕಟೌಟ್, ಜೊತೆಗೆ 3D ಕರ್ವ್ಡ್ ಡಿಸ್ಪ್ಲೇ ಇರಲಿದೆ. ಈ ಫೋನ್ ಬಹಳ ಸ್ಲಿಮ್ ಆಗಿರಲಿದ್ದು, ಹಿಂದೆಯಿಂದ ಟ್ಯಾಬ್ಲೆಟ್ ಶೇಪ್ ಕ್ಯಾಮೆರಾ ಮಾಡ್ಯೂಲ್ ಇರುತ್ತದೆ. ಇದನ್ನು ಓದಿ..10 Seater Car: ಬಂದೆ ಬಿಡ್ತು 10 ಸೀಟರ್ ಕಾರು- ಅದು ಕಡಿಮೆ ಬೆಲೆಯಲ್ಲಿ. ಸಂಪೂರ್ಣ ವಿಶೇಷತೆ, ಬೆಲೆ ಡೀಟೇಲ್ಸ್.

ಈ ಫೋನ್ ನಲ್ಲಿ ಕ್ಲಿಕ್ ಮಾಡುವ ಫೋಟೋಗಳು DSLR ಕ್ಯಾಮೆರಾ ರೀತಿಯಲ್ಲಿ ಕ್ಲಾರಿಟಿ ಇರುತ್ತದೆ. Reno 10 ಪ್ರೊ+ 5G ಫೋನ್ ಅತಿಹೆಚ್ಚು ಪ್ರೀಮಿಯಂ ಫೋನ್ ಆಗಿರಲಿದೆ, ಈ ಫೋನ್ ನಲ್ಲಿ 50MP ಸೋನಿ IMX890 ಮೇನ್ ಕ್ಯಾಮೆರಾ ಆಗಿರಲಿದೆ., ಇದಕ್ಕೆ OIS ಸಪೋರ್ಟ್ ಇರುತ್ತದೆ. ಜೊತೆಗೆ 64Mp ಪೆರಿಸ್ಕೊಪಿಕ್ ಟೆಲಿಫೋಟೋ ಕ್ಯಾಮೆರಾ OIS ಬೆಂಬಲದ ಜೊತೆಗೆ ಬರಲಿದೆ.. ಮಾರಿಸಿಲಿಕಾನ್ X ಈ ಫೋನ್ ನಲ್ಲಿ ಇಮೇಜ್ ಪ್ರೊಸೆಸಿಂಗ್ ಇರುತ್ತದೆ, Reno 10 Pro 5G ಸಹ Pro+ 5G ರೀತಿಯಲ್ಲಿ ಮೇನ್ ಕ್ಯಾಮೆರಾ ಇರುತ್ತದೆ. 32MP ಸೋನಿ, IMX 709 ಟೆಲಿಫೋಟೋ ಕ್ಯಾಮೆರಾ ಇರಲಿದೆ..

Reno 10 5G ಯಲ್ಲಿ 32MP ಟೆಲಿಫೋಟೋ ಪೋರ್ಟ್ರೇಟ್ ಕ್ಯಾಮೆರಾ 120Hz ರಿಫ್ರೆಶ್ ರೇಟ್ ಇರಲಿದೆ. Reno10 5G ಮತ್ತು Reno 10 Pro 5G ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಗ್ಲಾಸಿ ಪರ್ಪಲ್ ಮತ್ತು ಸಿಲ್ವರ್ ಗ್ರೇ ಬಣ್ಣಗಳಲ್ಲಿ ಸಿಗುತ್ತದೆ. ಈ ಫೋನ್ 12GB+256GB ಸ್ಟೋರೇಜ್ ನಲ್ಲಿ ಲಭ್ಯವಿರುತ್ತದೆ. Reno 10 5G ಫೋನ್ ಐಸ್ ಬ್ಲೂ ಹಾಗೂ ಸಿಲ್ವರ್ ಗ್ರೇ ಬಣ್ಣದಲ್ಲಿ ಸಿಗುತ್ತದೆ. ಈ ಫೋನ್ 8GB+256 GB ಸ್ಟೋರೇಜ್ ನಲ್ಲಿ ಸಿಗುತ್ತದೆ. Oppo Reno 10 Pro+ ನಲ್ಲಿ Snapdragon 8 Gen 1+ ಪ್ರೊಸೆಸರ್ ಇರಲಿದ್ದು, ರೆನೋ 10 ಪ್ರೊ ಹುಡ್ ನಲ್ಲಿ ಡೈಮೆನ್ಸಿಟಿ 8200 ಇರಬಹುದು ಎನ್ನಲಾಗಿದೆ. ಇದನ್ನು ಓದಿ..iPhone: ಸಾಮಾನ್ಯ ಐಫೋನ್ (iPHone) ಮೊದಲೇ ಕಾಸ್ಟ್ಲಿ, ಆದರೆ ಈ ಐಫೋನ್ ಫೆರಾರಿ ಗಿಂತ ದುಬಾರಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಓಪೋ ಕಂಪನಿ ಜುಲೈ 15ವರೆಗು ಒಂದು ಕಾಂಪಿಟೇಶನ್ ನಡೆಸಲು ನಿರ್ಧಾರ ಮಾಡಿದೆ, ಇದರಲ್ಲಿ ಭಾಗವಹಿಸಿ ಗೆಲ್ಲುವವರಿಗೆ Reno 10 Pro+ ಮತ್ತು Enco TWS ಇಯರ್ ಬಡ್ಸ್ ಸಿಗಲಿದೆ. ಇವುಗಳ ಬೆಲೆ ಬಗ್ಗೆ ಹೇಳುವುದಾದರೆ Oppo Reno 10 ಸೀರೀಸ್ ಫೋನ್ ಬೆಲೆ ₹38,999 ಇಂದ ಶುರುವಾಗಲಿದೆ.. Oppo Reno 10 5G ಸೀರೀಸ್ ₹38,999 ಆಗಿರಲಿದೆ. Reno10 Pro ₹49,999 ರೂಪಾಯಿ ಆಗಿರುತ್ತದೆ ಹಾಗೆಯೇ, Reno 10 Pro + ₹59,999 ರೂಪಾಯಿ ಆಗಿರಲಿದೆ. Oppo Enco Air 3 ಇಯರ್ ಬಡ್ಸ್ ಬೆಲೆ ₹7,999 ಇಂದ ಶುರುವಾಗುತ್ತದೆ. ಇದನ್ನು ಓದಿ..Mobile Safety Tricks: ಮಳೆ ಬರುತ್ತಿದೆ, ಮಳೆಗಾಲ ಬೇರೆ- ನಿಮ್ಮ ಫೋನ್ ಅನ್ನು 100 ರೂಪಾಯಿ ಖರ್ಚು ಮಾಡಿ ವಾಟರ್ ಪ್ರೂಫ್ ಮಾಡಿ. ಸೇಫ್ ಆಗಿ ಇರುತ್ತದೆ.

Best News in Kannadakannada liveKannada NewsKannada Trending Newslive newsLive News Kannadalive trending newsNews in Kannadaoppo reno 10top news kannada