Phone Remote: ಮೊಬೈಲ್ ಅನ್ನು ಟಿವಿ ರಿಮೋಟ್ ಆಗಿ ಪರಿವರ್ತನೆ ಮಾಡುವುದು ಹೇಗೆ ಗೊತ್ತೇ? ಇನ್ನು ರಿಮೋಟ್ ಬೇಕಾಗಿಲ್ಲ.

Phone Remote: ಸಾಮಾನ್ಯವಾಗಿ ನಾವು ಅಲ್ಲಿ ಇಲ್ಲಿ ಕೆಲವೊಮ್ಮೆ ಟಿವಿ ನೋಡುತ್ತಿರುವಾಗ ನಮ್ಮ ರಿಮೋಟ್ ಅನ್ನು ಮರೆತು ಬಿಡುತ್ತೇವೆ ಹಾಗೂ ಮತ್ತೆ ಕೆಲವೊಮ್ಮೆ ಅದು ಸಿಗದೇ ಇರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಇದು ನಮ್ಮ ಜೀವನದಲ್ಲಿ ಆಗಾಗ ನಡೆಯುತ್ತಿರುವಂತಹ ಚಿಕ್ಕಪುಟ್ಟ ಸಮಸ್ಯೆಗಳೇ ಆದರೂ ಕೂಡ ಕೆಲವೊಮ್ಮೆ ನಮಗೆ ಸಾಕಷ್ಟು ಇರಿಟೇಟ್ ಮಾಡುತ್ತದೆ. ಆದರೆ ಇನ್ನು ಮುಂದೆ ನೀವು ಈ ಕುರಿತಂತೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ನಿಮ್ಮ ಮೊಬೈಲ್ ಫೋನ್ ಮೂಲಕ ಗೂಗಲ್ ಟಿವಿ(Google TV) ಅಪ್ಲಿಕೇಶನ್ ಜೊತೆಗೆ ಸ್ಮಾರ್ಟ್ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದಾಗಿದೆ. ಹಾಗಿದ್ದರೆ ಸ್ಮಾರ್ಟ್ ಫೋನ್ ರಿಮೋಟ್(Smart Phone Remote) ಅನ್ನು ಸೆಟ್ ಅಪ್ ಮಾಡುವುದು ಹೇಗೆ ಎನ್ನುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

convert your mobile into tv remote

ನಿಮ್ಮ ಬಳಿ ಆಂಡ್ರಾಯ್ಡ್ ಫೋನ್ ಅಥವಾ iPhone ಇರಲಿ ಮೊದಲಿಗೆ ನೀವು ನಿಮ್ಮ ಅಪ್ಲಿಕೇಶನ್ ಸ್ಟೋರ್ ಅನ್ನು ಓಪನ್ ಮಾಡಿ ಗೂಗಲ್ ಟಿವಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಆಂಡ್ರಾಯ್ಡ್ ಫೋನ್ ನವರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದನ್ನು ಡೌನ್ಲೋಡ್ ಮಾಡಬಹುದು ಹಾಗೂ iPhone ಬಳಕಿದಾರರು ಇದನ್ನು ಆಪಲ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಇದನ್ನು ಓದಿ..Financial Mistakes: ಎಷ್ಟೇ ದುಡಿದರು ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಭಾರತೀಯರು ಮಾಡುತ್ತಿರುವ ತಪ್ಪುಗಳೇನು ಗೊತ್ತೇ? ಇವುಗಳನ್ನು ತಿದ್ದುಕೊಳ್ಳಿ.

ಇದಾದ ನಂತರ ನೀವು ಕನೆಕ್ಟ್ ಮಾಡಬೇಕೆಂದಿರುವಂತಹ ಟಿವಿ ಡಿವೈಸ್ ಆನ್ ಆಗಿದೆ ಎನ್ನುವುದನ್ನು ಪ್ರಮುಖವಾಗಿ ದೃಢೀಕರಿಸಿಕೊಳ್ಳಿ. ಇದಾದ ನಂತರ ನಿಮ್ಮ ಟಿವಿ ಹಾಗೂ ಫೋನ್ ಒಂದೇ ವೈಫೈ(Wifi) ಗೆ ಅಥವಾ ಬ್ಲೂಟೂತ್ ಗೆ ಕನೆಕ್ಟ್ ಆಗಿದೆ ಎಂಬುದನ್ನು ಕೂಡ ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಎಷ್ಟು ಖಚಿತಪಡಿಸಿಕೊಂಡ ನಂತರವೇ ನೀವು ಮುಂದುವರೆಯಬೇಕಾಗುತ್ತದೆ.

ಇದಾದ ನಂತರ ನಿಮ್ಮ ಫೋನ್ನಲ್ಲಿ ಚಲಾವಣೆ ಆಗುತಿರುವಂತಹ ಗೂಗಲ್ ಟಿವಿ(Google TV), ನಿಮ್ಮ ಟಿವಿಯಲ್ಲಿ ಕೂಡ ಕನೆಕ್ಟ್ ಆಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದು ಕನೆಕ್ಟ್ ಆಗಿರಬೇಕು. ಇದಾದಮೇಲೆ ಬಲಬದಿ ಇರುವಂತಹ Connect TV ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಟಿವಿಗೆ ನೀವು ಇದನ್ನು ಕನೆಕ್ಟ್ ಮಾಡಬಹುದಾಗಿದೆ. ಇದಾದ ನಂತರ ಟಿವಿಯ ಮೇಲೆ ಬರುವಂತಹ Code ಅನ್ನು ಎಂಟರ್ ಮಾಡಬೇಕು. ಇದಾದ ಮೇಲೆ Pair Button ಅನ್ನು ಪ್ರೆಸ್ ಮಾಡಬೇಕು. ಈಗ ನಿಮ್ಮ ಫೋನ್ ರಿಮೋಟ್ ಹಾಗೂ ಟಿವಿ ಎರಡು ಕೂಡ ಪರಸ್ಪರ ಕನೆಕ್ಟ್ ಆಗಿರುತ್ತದೆ. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

ಇದಿಷ್ಟು ಪ್ರಕ್ರಿಯೆ ನಡೆದ ನಂತರ ಕನೆಕ್ಟ್ ಮಾಡಿ ಎಂದು ಇದ್ದ ಆಪ್ಷನ್ TV Remote ಎಂಬುದಾಗಿ ಕಾಣಿಸುತ್ತಿದ್ದರೆ ನಿಮ್ಮ ಮೊಬೈಲ್ ಫೋನ್ ರಿಮೋಟ್ ಈಗ ನಿಮ್ಮ ಟಿವಿಗೆ ಕನೆಕ್ಟ್ ಆಗಿದೆ ಎಂಬುದು ದೃಢೀಕೃತವಾಗುತ್ತದೆ. ಈ ಮೂಲಕ ನಿಮ್ಮ ಟಿವಿಯ ವಾಲ್ಯೂಮ್ ಚಾನೆಲ್ ಹೆಚ್ಚು ಕಡಿಮೆ ಮಾಡುವಂತಹ ಆಯ್ಕೆಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದ್ದು ಒಂದು ವೇಳೆ ನಿಮ್ಮ ಮನೆಯಲ್ಲಿ ರಿಮೋಟ್ ಕಳೆದು ಹೋದ ಸಂದರ್ಭದಲ್ಲಿ ನೀವು ಆಯ್ಕೆಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ಸುಲಭವಾಗಿ ಟಿವಿಯ ಮನೋರಂಜನ ಕಾರ್ಯಕ್ರಮಗಳನ್ನು ಆನಂದಿಸಬಹುದಾಗಿದೆ. ಇದನ್ನು ಓದಿ..Maruti Suzuki: ಮಾರುತಿ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್- ನೋಡಿ ಇಂದೇ ಖರೀದಿ ಮಾಡಿ, ಕಾರ್ ಅನ್ನು ಮನೆಗೆ ತನ್ನಿ.

Best News in Kannadakannada liveKannada NewsKannada Trending Newslive newsLive News Kannadalive trending newsNews in Kannadaphone remotetechnologytop news kannada