Volvo EM90: ಒಮ್ಮೆ ಚಾರ್ಜ್ ಮಾಡಿ 738 km ಮೈಲೇಜ್ ಕೊಡುತ್ತೆ, ಬರುತ್ತಿದೆ ಮಸ್ತ್ ಕಾರ್

Volvo EM90: ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಸ್ವೀಡನ್ ದೇಶದ ಮೂಲದ ಕಾರ್ ಕಂಪನಿ ಆಗಿರುವಂತಹ ವೋಲ್ವೋ ಒಂದು ಹೊಸ ಟಾರ್ಗೆಟ್ ಅನ್ನು ಸೆಟ್ ಮಾಡಿದ್ದು 2025ರ ಒಳಗೆ 50 ಪ್ರತಿಶತ ಕಾರುಗಳನ್ನು ಎಲೆಕ್ಟ್ರಿಕ್ ಸೆಗ್ಮೆಂಟ್ ನಲ್ಲಿ ಮಾರಾಟ ಮಾಡುವಂತಹ ಗುರಿಯನ್ನು ಹೊಂದಿದೆ. ಇನ್ನು ಇದೇ ನಿಟ್ಟಿನಲ್ಲಿ Volvo EM90 ಎಲೆಕ್ಟ್ರಿಕ್ ಕಾರ್ ಅನ್ನು ಕೂಡ ಕಂಪನಿ ಇತ್ತೀಚಿಗಷ್ಟೇ ಲೇಟೆಸ್ಟ್ ಆಗಿ ಲಾಂಚ್ ಮಾಡಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಅದಾಗಲೇ ಮಾರುಕಟ್ಟೆಯಲ್ಲಿ ವೋಲ್ವೋ ಸಂಸ್ಥೆ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ XC40 Recharge, C40 Recharge, EX30, EX90 ಕಾರುಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡೋದಕ್ಕೆ ಸಿದ್ಧವಾಗಿ ನಿಂತಿದೆ. ಇದರ ನಡುವೆ ವೋಲ್ವೋ ಸಂಸ್ಥೆ Volvo EM90 ಎಲೆಕ್ಟ್ರಿಕ್ ಕಾರ್ ಅನ್ನು ಅತ್ಯಧುನಿಕ ತಂತ್ರಜ್ಞಾನಗಳ ಜೊತೆಗೆ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಮುಂದಿನ ತಿಂಗಳಿನಿಂದ ಅಧಿಕೃತವಾಗಿ ಬಿಡುಗಡೆ ಆಗಲಿದೆ ಎನ್ನುವಂತಹ ಸುದ್ದಿ ಇದೆ.

Volvo EM90 ಎಲೆಕ್ಟ್ರಿಕ್ ಕಾರಿನ ಫೀಚರ್ಸ್ ಗಳು- Volvo EM90 Car features and Specifications

Volvo EM90 ಕಾರಿನಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 116kwh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದು ಪ್ರತೀ ಚಾರ್ಜ್ ನಲ್ಲಿ 738 km ಗಳ ರೇಂಜ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಕಾರಿನ ಸೂಪರ್ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 30 ನಿಮಿಷಗಳಲ್ಲಿ 80% ಚಾರ್ಜ್ ಮಾಡಬಹುದಾಗಿದೆ. 272hp ಪವರ್ ಅನ್ನು ಉತ್ಪಾದಿಸುವಂತಹ ಸಾಮರ್ಥ್ಯವನ್ನು ಕೂಡ ಈ ಕಾರು ಹೊಂದಿದೆ.

Volvo EM90 Car features and Specifications

Volvo EM90 ಎಲೆಕ್ಟ್ರಿಕ್ ಕಾರ್ ನಲ್ಲಿ ಆರು ಸೀಟರ್ಗಳ ಸೌಲಭ್ಯದ ಜೊತೆಗೆ ಇದು MPV ವಿಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕಾರಿನ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಸೈಲೆನ್ಸ್ ಟೈಯರ್ ಗಳನ್ನು ಕೂಡ ಅಳವಡಿಸಲಾಗಿದೆ. Road noise cancellation ಟೆಕ್ನಾಲಜಿಯ ಜೊತೆಗೆ ಡ್ರೈವರ್ ಕ್ಯಾಬಿನ್ ಹಾಗೂ ಕ್ಯಾಪ್ಟನ್ ಕ್ಯಾಬಿನ್ ಅನ್ನು ಪ್ರತ್ಯೇಕಗೊಳಿಸುವಂತಹ ಆರ್ಮ್ ಸ್ಟೈಲ್ ಲಾಂಚ್ ಸೀಟ್‌ಗಳನ್ನು ಕೂಡ ನೀವು Volvo EM90 ಎಲೆಕ್ಟ್ರಿಕ್ ಕಾರ್ ನಲ್ಲಿ ಕಾಣಬಹುದಾಗಿದೆ. Here You can find the more details about EM90

Volvo EM90 ಎಲೆಕ್ಟ್ರಿಕ್ ಕಾರ್ ನಲ್ಲಿ ವೆಂಟಿಲೇಟೆಡ್ ಸೀಟ್ ಸೇರಿದಂತೆ ಎಲ್ಲಾ ಸೀಟ್ನಲ್ಲಿ ಕೂಡ haptic control panel ಅನ್ನು ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. 15.6 ಇಂಚಿನ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಹಾಗೂ 15.4 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವ ಸೆಂಟರ್ ಕನ್ಸೋಲ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದು.

ಇದನ್ನು ಕೂಡ ಓದಿ: Personal Loan: ಮೊಬೈಲ್ ನಿಂದ ಅರ್ಜಿ ಹಾಕಿ, 10 ಲಕ್ಷದ ಲೋನ್ ಪಡೆಯಿರಿ. ಇಷ್ಟು ಇದ್ದರೇ ಸಾಕು ಲೋನ್ ಅವರೇ ಕೊಡುತ್ತಾರೆ.

Volvo EM90 ಎಲೆಕ್ಟ್ರಿಕ್ ಕಾರ್ ಅನ್ನು ಸದ್ಯದ ಮಟ್ಟಿಗೆ ಚೀನಾ ದೇಶದ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಚೀನಾ ದೇಶದ ಒಂದು ಕಂಪನಿಯ ಸಹಭಾಗಿತ್ವದಲ್ಲಿ ಚೀನಾ ದೇಶದ ಮಾರುಕಟ್ಟೆಯಲ್ಲಿ ಈ ಲಾಂಚ್ ನಡೆಯುತ್ತಿದೆ. ಇಲ್ಲಿಂದ ಮುಂದಿನ ದಿನಗಳಲ್ಲಿ ಅಂದ್ರೆ 2025 ನೇ ಇಸ್ವಿಯಲ್ಲಿ ಭಾರತ ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ Volvo EM90 ಎಲೆಕ್ಟ್ರಿಕ್ ಕಾರು ಪ್ರೀಮಿಯಂ ಕಾರಿನ ರೂಪದಲ್ಲಿ ಕಾಣಿಸಿಕೊಳ್ಳಲಿದೆ.

Em90 volvo priceVolvo EM90volvo em90 detailsvolvo em90 interiorvolvo em90 launch date in indiavolvo em90 price in indiavolvo em90 rangevolvo em90 release datevolvo em90 specs