Next iPad Pro: ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.
Next iPad Pro- ನಮಸ್ಕಾರ ಸ್ನೇಹಿತರೇ ತಿಳಿದು ಬಂದಿರುವ ಪ್ರಕಾರ ಆಪಲ್ ಸಂಸ್ಥೆ ತನ್ನ ನೆಕ್ಸ್ಟ್ Gen iPad Pro ಅನ್ನು ಇನ್ನು ದೊಡ್ಡ ಡಿಸ್ಪ್ಲೇ ಜೊತೆಗೆ, ಇನ್ನೂ ಬಲಪಡಿಸಿರುವ ಚಿಪ್ಸೆಟ್ ಹಾಗೂ ಇನ್ನೂ ಒಳ್ಳೆಯ ಪ್ಯಾನಲ್ ವೀಕ್ಷಣೆಯನ್ನು ನೀಡುವ ನಿಟ್ಟಿನಲ್ಲಿ ತಯಾರಿಸಲಿದೆ ಎನ್ನುವುದಾಗಿ ತಿಳಿದುಬಂದಿದೆ. ಮುಂದಿನ ವರ್ಷದ ಆರಂಭದಲ್ಲಿ iPad Pro (Next iPad Pro) ಅನ್ನು ಮ್ಯಾಜಿಕ್ ಕೀಬೋರ್ಡ್(iPad Pro Magic Keyboard) ಜೊತೆಗೆ ಲಾಂಚ್ ಮಾಡುವಂತಹ ತಯಾರಿ ನಡೆಯುತ್ತಿದೆ ಎಂಬುದಾಗಿ ತಿಳಿದು ಬಂದಿದೆ.
ಕೀಬೋರ್ಡ್ ಜೊತೆಗೆ ದೊಡ್ಡ ಟ್ರ್ಯಾಕ್ ಪ್ಯಾಡ್ ಕೂಡ ಸಿಗುತ್ತದೆ ಎಂಬುದಾಗಿ ತಿಳಿದು ಬಂದಿದೆ. iPad Pro ಜೊತೆಗೆ ಮ್ಯಾಜಿಕ್ ಕೀಬೋರ್ಡ್ ಅನ್ನು ಅಳವಡಿಸಿದರೆ ಮ್ಯಾಕ್ ಬುಕ್ ರೀತಿಯಲ್ಲಿ ಕಾಣಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.
iPad Pro, M3 SoC ಮೂಲಕ ತನ್ನ ಶಕ್ತಿಯನ್ನು ಸೆಳೆದುಕೊಳ್ಳುತ್ತದೆ ಎಂಬುದಾಗಿ ತಿಳಿದು ಬರುತ್ತದೆ. OLED ಡಿಸ್ಪ್ಲೇ ಅನ್ನು ipad Pro (Next iPad Pro) ಮೇಲೆ ಆಪಲ್ ಸಂಸ್ಥೆ ತಂದರು ಕೂಡ ತರಬಹುದು ಎನ್ನುವುದಾಗಿ ಮಾತುಕತೆ ನಡೆಯುತ್ತಿದೆ. ಟಾಪ್ ವೇರಿಯಂಟಿನ ಸೈಜ್ ಅನ್ನು 12.9 ಇಂಚಿನಿಂದ 13 ಇಂಚಿಗೆ ಹೆಚ್ಚಿಸಬಹುದಾಗಿದೆ ಎಂಬುದಾಗಿ ಕೂಡ ಕೇಳಿ ಬಂದಿದೆ.
ಇದನ್ನು ಕೂಡ ಓದಿ- ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. – Postal Insurance Schemes
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ. Karnataka Ganga Kalyana Scheme 2023
ಮ್ಯಾಜಿಕ್ ಕೀಬೋರ್ಡ್(Magic Keyboard) ಬಗ್ಗೆ ಕೂಡ ವಿಶೇಷವಾಗಿ ಮಾತನಾಡುತ್ತಾ ಅತ್ಯಂತ ಕಡಿಮೆ ತೂಕದ ಅಲುಮಿನಿಯಂ ಅನ್ನು ಅಳವಡಿಸಲಾಗಿದ್ರು ಗಟ್ಟಿ ಮುಟ್ಟಾದ ಶೇಪ್ ಅನ್ನು ನೀಡುತ್ತದೆ ಎಂಬುದನ್ನು ಭರವಸೆಯಿಂದ ಹೇಳಬಹುದಾಗಿದೆ. ಪ್ರೀಮಿಯಂ ಕ್ವಾಲಿಟಿ ನೀಡುವುದಕ್ಕಾಗಿ ಪಾಲಿಥೈನಿಯನ್ ಮೆಟೀರಿಯಲ್ ಅನ್ನು ಕೂಡ ಇದರಲ್ಲಿ ಬಳಸಲಾಗಿರುತ್ತದೆ. ಇದಕ್ಕಾಗಿಯೇ ಇದರ ಬೆಲೆಯಲ್ಲಿ ಹೆಚ್ಚಳ ಕಂಡು ಬರಲಿದೆ.
4ನೇ ಹಾಗೂ 5ನೇ ಜನರೇಶನ್ ನ iPad Air ಗೆ 29,900 ಆಗಿರುತ್ತದೆ. iPad 9th ಜನರೇಶನ್ ಬೆಲೆ 33,900 ರೂಪಾಯಿ ಆಗಿರುತ್ತದೆ. ಹೊಸ iPad Pro ತಿಳಿದು ಬಂದಿರುವ ಪ್ರಕಾರ USB Type C Port ಅನ್ನು ತನ್ನಲ್ಲಿ ಹೊಂದಿದೆ.
iPad Pro (Next iPad Pro) ತಿಳಿದು ಬಂದಿರುವ ಪ್ರಕಾರ 1.22 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಂಡು ಬರಲಿದೆ ಎನ್ನುವುದಾಗಿ ಕೇಳಿ ಬಂದಿದ್ದು ನಿಜಕ್ಕೂ ಕೂಡ ಮ್ಯಾಜಿಕ್ ಕೀಬೋರ್ಡ್ ಜೊತೆಗೆ ಇದು ಯಾವುದೇ ಮ್ಯಾಕ್ ಬುಕ್ ಗೂ ಕಡಿಮೆ ಇಲ್ಲದಂತೆ ಸ್ಟೈಲಿಶ್ ಹಾಗೂ ರಾಯಲ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದ್ದು ಆಪಲ್ ಕಂಪನಿಯ ಈ ಬಾರಿಯ ಯೋಜನೆ ನಿಜಕ್ಕೂ ಕೂಡ ಆಪಲ್ ಗ್ರಾಹಕರಲ್ಲಿ(Apple Customers) ಸಾಕಷ್ಟು ಕ್ರಾಂತಿಕಾರಿ ಬದಲಾವಣೆಯನ್ನು ಮಾಡಲಿದೆ ಎಂದು ಹೇಳಬಹುದಾಗಿದೆ.
Comments are closed.