Guru Gochar 2024: 12 ವರ್ಷಗಳ ಬಳಿಕ ಬಂದಿದೆ ಮಹಾನ್ ರಾಜಯೋಗ. ಈ ರಾಶಿಗಳಿಗೆ ಮುಟ್ಟಿದೆನ್ನ ಚಿನ್ನ. ಅಡ್ಡ ಬಂದೋರು ಉಡೀಸ್.
ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನವಲದಿಂದಲಿ ಹಾಗೂ ರಾಶಿಗಳ ಬದಲಾವಣೆಯ ಸಂದರ್ಭದಲ್ಲಿ ಆಗುವಂತಹ ಪ್ರತಿಯೊಂದು ಚಲನವಲನಗಳನ್ನು ಕೂಡ ಲೆಕ್ಕಾಚಾರ ಹಾಕಿ ಯಾವ ರಾಶಿಗೆ ಯಾವ ಫಲ ಸಿಗಲಿದೆ ಎನ್ನುವುದನ್ನು ಹೇಳಲಾಗುತ್ತದೆ. ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಗ್ರಹಗಳ ಗುರು ಆಗಿರುವಂತಹ ಬೃಹಸ್ಪತಿ ಅಂದರೆ ಗುರು ಗ್ರಹದ ಪರಿಚಲನೆಯ ಬಗ್ಗೆ.
ಇದೇ ಫೆಬ್ರವರಿ 19 ನೇ ತಾರೀಕಿನಂದು ಬೃಹಸ್ಪತಿ ಗುರುಗ್ರಹ ಯುವಾವಸ್ಥೆಗೆ ಪ್ರವೇಶಿಸಲಿದ್ದು, ಈ ಬದಲಾವಣೆಯ ಕಾರಣದಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಶುಭಕರ ಬದಲಾವಣೆಗಳು ಹಾಗೂ ಫಲಿತಾಂಶಗಳು ಕಂಡು ಬರಲಿದ್ದು ಆ ಅದೃಷ್ಟವಂತ ಮೂರು ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ(Aries)
ಈ ಸಮಯದಲ್ಲಿ ಮೇಷ ರಾಶಿಯವರ ಮಕ್ಕಳಿಗೆ ಸಂಬಂಧಪಟ್ಟ ವಿಚಾರದಲ್ಲಿ ಸಾಕಷ್ಟು ಉತ್ತಮವಾದ ಸುದ್ದಿಯನ್ನು ಕೇಳಲಿದ್ದಾರೆ. ಕಳೆದ ಸಾಕಷ್ಟು ಸಮಯಗಳಿಂದಲೂ ಮಕ್ಕಳಾಗದೆ ಉಳಿದುಕೊಂಡಿರುವವರಿಗೆ ಸಂತಾನ ಪ್ರಾಪ್ತಿಯಾಗಲಿದೆ. ಶೈಕ್ಷಣಿಕ ವಿಚಾರದಲ್ಲಿ ಕೂಡ ಮೇಷ ರಾಶಿಯವರ ಜೀವನದಲ್ಲಿ ಈ ಸಂದರ್ಭದಲ್ಲಿ ಉತ್ತಮವಾದ ಪ್ರಗತಿ ಕಂಡು ಬರಲಿದೆ. ಮಾಡಿದ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟದ ಸಾಥ್ ಕಾರಣದಿಂದಾಗಿ ಲಾಭವನ್ನು ಪಡೆಯಲಿದ್ದೀರಿ.
ಧನು ರಾಶಿ(Sagittarius)
ಧನು ರಾಶಿ ಗುರು ಗ್ರಹದ ರಾಶಿ ಆಗಿರುವ ಕಾರಣದಿಂದಾಗಿ ಈ ರಾಶಿಯವರಿಗೆ ವಿಶೇಷ ಸೌಭಾಗ್ಯ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಬಹುದಾಗಿದೆ. ಸಾಕಷ್ಟು ಆಸ್ತಿಪಾಸ್ತಿ ಸೇರಿದಂತೆ ಬೇಕಾಗಿರುವಂತಹ ಪ್ರತಿಯೊಂದು ಐಶ್ವರಾಮಿ ವಸ್ತುಗಳನ್ನು ಖರೀದಿಸುವಂತಹ ಯೋಗ ನಿಮ್ಮದಾಗಲಿದೆ. ನೀವು ಕಳೆದ ಸಾಕಷ್ಟು ಸಮಯಗಳಿಂದ ಮಾಡಬೇಕಾಗಿರುವಂತಹ ಪ್ರತಿಯೊಂದು ಯೋಜನೆಗಳನ್ನು ಕೂಡ ಪೂರ್ಣಗೊಳಿಸುವಂತಹ ಸಾಮರ್ಥ್ಯ ನಿಮ್ಮದಾಗಲಿದೆ. ರಾಜಕೀಯ ಕ್ಷೇತ್ರದ ಜನರಿಗೆ ಕೂಡ ತಾವಂದುಕೊಂಡ ಕೆಲಸವನ್ನು ಮಾಡುವಂತಹ ಅವಕಾಶ ಸಿಗಲಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನಿರೀಕ್ಷೀತ ಗೆಲುವು ಸಿಗಲಿದೆ.
ಮೀನ ರಾಶಿ(Pisces)
ಅನಿರೀಕ್ಷಿತವಾಗಿ ಧನಾಗಮನ ಅಗಲಿದ್ದು ಹಣವನ್ನು ಗಳಿಸುವುದಕ್ಕೆ ಮೀನ ರಾಶಿಯವರಿಗೆ ಸಾಕಷ್ಟು ಬಾಗಿಲುಗಳು ತೆರೆಯಲಿವೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಹೆತ್ತವರ ಬೆಂಬಲವನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ಪ್ರಗತಿಯನ್ನು ಹೊಂದುವಂತಹ ಲಕ್ಷಣಗಳು ಕಂಡು ಬರಲಿವೆ.
Comments are closed.