Kannada Horoscope: 5 ವರ್ಷ ಆದಮೇಲೆ ಬಂದಿದೆ ತ್ರಿಗಹಿ ಯೋಗ- ಇದರಿಂದ 5 ರಾಶಿಗಳಿಗೆ ಅದೃಷ್ಟ, ಹಣ ಸಂಪತ್ತು ಎಲ್ಲವೂ ಸಿಗುತ್ತದೆ.
Kannada Horoscope Predictions; ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿ ಹಬ್ಬದ ನಂತರ ಐದು ವರ್ಷಗಳ ನಂತರ ವಿಶೇಷವಾಗಿರುವಂತಹ ತ್ರಿಗ್ರಹಿ ಯೋಗ ಪ್ರಾರಂಭವಾಗಿದ್ದು, ಧನ ಕುಬೇರ ಕೃಪೆಯಿಂದಾಗಿ ಈ ಆರು ರಾಶಿಯವರಿಗೆ ಅವರು ಅಂದುಕೊಂಡಿದ್ದೆಲ್ಲ ನಡೆಯಲಿದೆ ಹಾಗೂ ಮುಟ್ಟಿದ್ದೆಲ್ಲ ಚಿನ್ನ ವಾಗಲಿದೆ. ಹಾಗಿದ್ರೆ ಬನ್ನಿ ಆ ಅದೃಷ್ಟವಂತ ಆರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.
Table of Contents
ಕರ್ಕ ರಾಶಿ(Cancer Kannada Horoscope Predictions )
ಈ ಸಂದರ್ಭದಲ್ಲಿ ಕರ್ಕ ರಾಶಿಯವರು ತಮ್ಮ ಮಕ್ಕಳಿಂದ ಗುಡ್ ನ್ಯೂಸ್ ಕೇಳಲಿದ್ದಾರೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಮಕ್ಕಳಿಗಾಗಿ ಹಾತೊರೆಯುತ್ತಿರುವಂತಹ ಪೋಷಕರು ಸಂತಾನ ಭಾಗ್ಯವನ್ನು ಪಡೆದುಕೊಳ್ಳಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ಕರ್ಕರಾಶಿಯವರಿಗೂ ಕೂಡ ಲಾಭ ಸಲೀಸಾಗಿ ಹರಿದು ಬರಲಿದೆ. ಯೋಗ ವಿಶೇಷವಾಗಿ ಕರ್ಕ ರಾಶಿಯವರಿಗೆ ಸಂಪತ್ತನ್ನು ಹೆಚ್ಚಿಸಲಿದೆ. ಜೀವನದಲ್ಲಿ ಕೂಡ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಕರ್ಕ ರಾಶಿಯವರು ಕಾಣಲಿದ್ದಾರೆ.
ಕನ್ಯಾ ರಾಶಿ(Virgo Horoscope Predictions )
ನೀವು ಮಾಡುವಂತಹ ಕೆಲಸದಲ್ಲಿ ನಿಮ್ಮ ಒಡಹುಟ್ಟಿದವರಿಂದ ಸಾಕಷ್ಟು ಸಪೋರ್ಟ್ ಸಿಗಲಿದೆ. ಯಾವುದೇ ಕೆಲಸವನ್ನು ನಿಮಗೆ ನೀಡಿದರೂ ಕೂಡ ನಿಮ್ಮಲ್ಲಿರುವಂತಹ ಧೈರ್ಯದಿಂದ ನೀವು ಆ ಕೆಲಸವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಿದ್ದೀರಿ. ನೀವು ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ನಿಮ್ಮ ವರಿಷ್ಠ ಅಧಿಕಾರಿಗಳ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುತ್ತೀರಿ. ವಿದೇಶದಲ್ಲಿ ಕೆಲಸ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿರುವವರಿಗೂ ಕೂಡ ಶುಭ ಸುದ್ದಿ ಸಿಗಲಿದೆ. ನೀವು ಮಾಡುವಂತಹ ಎಲ್ಲಾ ಕೆಲಸಗಳು ಕೂಡ ಯಶಸ್ವಿಯಾಗಿ ಪೂರ್ಣಗೊಂಡು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತವೆ.
ಇದನ್ನು ಕೂಡ ಓದಿ: Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಸುದ್ದಿ. ಈ ತಪ್ಪು ಮಾಡಬೇಡಿ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ.
ವೃಶ್ಚಿಕ ರಾಶಿ(Scorpion Horoscope Predictions )
ಈ ವಿಶೇಷವಾದ ಯೋಗ ವೃಶ್ಚಿಕ ರಾಶಿಯಲ್ಲೇ ಉದ್ಭವ ಆಗಿರುವ ಕಾರಣದಿಂದಾಗಿ ವಿಶೇಷವಾಗಿ ವೃಶ್ಚಿಕ ರಾಶಿಯವರ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಮಹತ್ವದ ಬದಲಾವಣೆಗಳು ನಡೆಯಲಿವೆ. ಜೀವನದಲ್ಲಿ ಈ ಸಂದರ್ಭದಲ್ಲಿ ಸಾಕಷ್ಟು ಸಂತೋಷಮಯ ಸುದ್ದಿಗಳನ್ನು ಕೇಳಲಿದ್ದೀರಿ. ನೀವು ಜೀವನದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ನಿಮ್ಮ ಜೀವನ ಸಂಗಾತಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳವನ್ನು ಪಡೆದುಕೊಳ್ಳಲಿದ್ದೀರಿ ಹಾಗೂ ವ್ಯಾಪಾರದಲ್ಲಿ ಕೂಡ ಲಾಭವಾಗಲಿದೆ. ಸಾಕಷ್ಟು ಸಮಯಗಳಿಂದ ಮದುವೆಯಾಗದೆ ಮದುವೆಗಾಗಿ ಕಾಯುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಮಕರ ರಾಶಿ(Capricorn Horoscope Predictions )
ಈ ವಿಶೇಷವಾದ ಶುಭಯೋಗದಿಂದಾಗಿ ಮಕರ ರಾಶಿಯವರ ಆದಾಯ ಗಣನೀಯವಾಗಿ ಹೆಚ್ಚಾಗಲಿದೆ. ಹಣಗಳಿಸುವುದಕ್ಕೆ ನಿಮಗೆ ಇನ್ನೂ ಹೆಚ್ಚೆಚ್ಚು ಮಾರ್ಗಗಳು ಕಂಡು ಬರಲಿವೆ. ಅಂತರಾಷ್ಟ್ರೀಯ ವ್ಯವಹಾರಗಳನ್ನು ಉದಾಹರಣೆಗೆ ರಫ್ತು ಹಾಗೂ ಆಮದು ಕೆಲಸವನ್ನು ಮಾಡುವಂತಹ ಜನರಿಗೆ ಈ ಸಮಯದಲ್ಲಿ ಅದೃಷ್ಟ ಖುಲಾಯಿಸಲಿದೆ. ಹೂಡಿಕೆ ಮಾಡುವುದಕ್ಕೆ ಕೂಡ ಇದೊಂದು ಪ್ರಶಸ್ತವಾದ ಸಮಯವಾಗಿದೆ.
ಸಿಂಹ ರಾಶಿ(Leo Horoscope Predictions )
ಜೀವನದಲ್ಲಿ ಸಿಂಹ ರಾಶಿಯವರಿಗೆ ಸುಖ ಸಮೃದ್ಧಿ ಹೆಚ್ಚಾಗಲಿದೆ ಹಾಗೂ ಆಸ್ತಿಪಾಸ್ತಿ ಕೂಡ ಸಿಗುವಂತಹ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ರಿಯಲ್ ಎಸ್ಟೇಟ್ ನಲ್ಲಿ ಇರುವಂತಹ ಜನರಿಗೆ ಉತ್ತಮವಾದ ಧನ ಲಾಭ ಆಗಲಿದೆ. ಉದ್ಯೋಗವನ್ನು ಮಾಡುತ್ತಿರುವವರಿಗೆ ಪ್ರಮೋಷನ್ಗೆ ಇದು ಒಂದೊಳ್ಳೆ ಸಮಯವಾಗಿದೆ. ಜೀವನದಲ್ಲಿ ಸಾಕಷ್ಟು ಸುವರ್ಣ ಅವಕಾಶಗಳು ನಿಮಗಾಗಿ ಕಾದಿವೆ.
ತುಲಾ ರಾಶಿ(Libra Horoscope Predictions )
ಕಳೆದ ಸಾಕಷ್ಟು ಸಮಯಗಳಿಂದಲೂ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಿರುವ ತುಲಾ ರಾಶಿಯವರಿಗೆ ಈ ಸಂದರ್ಭದಲ್ಲಿ ಧನ ಲಾಭ ಉಂಟಾಗಲಿದೆ. ಜನರನ್ನು ಮಾತಿನಿಂದ ಆಕರ್ಷಿಸುವಂತಹ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತುಲಾ ರಾಶಿಯವರು ಸಾಕಷ್ಟು ಯಶಸ್ಸನ್ನು ಸಾಧಿಸಲಿದ್ದಾರೆ. ಕಳೆದ ಸಾಕಷ್ಟು ಸಮಯಗಳಿಂದ ಬರಬೇಕಾಗಿರುವಂತಹ ಹಣ ಕೊನೆಗೂ ನಿಮ್ಮ ಕೈ ಸೇರಲಿದೆ. ತುಲಾ ರಾಶಿಯವರ ಜೀವನದ ಅತ್ಯಂತ ಉತ್ತಮ ಕ್ಷಣಗಳು ಈ ಸಂದರ್ಭದಲ್ಲಿಯೇ ಮೂಡಿಬರಲಿದೆ. ಇವುಗಳೇ ಆ ಅದೃಷ್ಟವಂತ ಆರು ರಾಶಿಯವರು. ಇಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.
Comments are closed.