Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಸುದ್ದಿ. ಈ ತಪ್ಪು ಮಾಡಬೇಡಿ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ.

Ration Card KYC

Ration Card: ನಮಸ್ಕಾರ ಸ್ನೇಹಿತರೇ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಅದರಲ್ಲಿ ವಿಶೇಷವಾಗಿ ಬಿಪಿಎಲ್ ಕಾರ್ಡ್ದಾರರಿಗೆ(BPL Ration Card) ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಕ್ಕಿ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ರೇಷನ್ ಕಾರ್ಡ್ ಮಾಲೀಕರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತಿದೆ. ತಿಳಿದು ಬಂದಿರುವ ಕೆಲವೊಂದು ಮಾಹಿತಿಗಳ ಪ್ರಕಾರ ಈ ರೀತಿ ನೀಡಲಾಗುತ್ತಿರುವ ರೇಷನ್ ಅನ್ನು ಕೆಲವರು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಇಂಥವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಿದೆ.

ರೇಷನ್ ಕಾರ್ಡ್ ಮೂಲಕ ನ್ಯಾಯಬೆಲೆ ಅಂಗಡಿಯಿಂದ ಸಿಗುವಂತಹ ಪದಾರ್ಥಗಳನ್ನು ಮಾರಾಟ ಮಾಡಬಾರದು.

ಒಂದು ವೇಳೆ ನೀವು ಅನ್ನ ಭಾಗ್ಯ ಯೋಜನೆ(annabhagya Yojane) ಅಡಿಯಲ್ಲಿ ಸಿಗುತ್ತಿರುವಂತಹ ಪಡಿತರವನ್ನು ಮಾರಾಟ ಮಾಡುತ್ತಿದ್ದರೆ ನಿಮ್ಮ ವಿರುದ್ಧ ಕಾನೂನು ರೂಪದಲ್ಲಿ ಅಗತ್ಯ ವಸ್ತು ಕಾಯ್ದೆ 1955ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತದೆ. ಸರ್ಕಾರದಿಂದ ನೀಡಲಾಗುವಂತಹ ಆಹಾರ ವಸ್ತುಗಳನ್ನು ಹಣಕ್ಕಾಗಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬೇಕಾಗಿರುತ್ತದೆ. ತಮ್ಮ ರೇಷನ್ ಕಾರ್ಡ್ ಮೂಲಕ ಸರ್ಕಾರದಿಂದ ಪಡೆಯುವಂತಹ ಪ್ರತಿಯೊಂದು ಯೋಜನೆಗಳನ್ನು ಕೂಡ ತಾವು ಉಪಯೋಗಿಸಿಕೊಳ್ಳಬೇಕೆ ವಿನಹ ಬೇರೆಯವರಿಗೆ ಹಣಕ್ಕಾಗಿ ಮಾರಾಟ ಮಾಡಬಾರದು ಎಂಬುದಾಗಿ ಸರ್ಕಾರ ತಾಕೀತು ಮಾಡಿದೆ.

ಇದನ್ನು ಕೂವೋದ ಓದಿ: Personal Loan: ಲೋನ್ ಮಾರುಕಟ್ಟೆ ತಲ್ಲಣ- ಲೋನ್ ಗೆ ಎಂಟ್ರಿ ಕೊಟ್ಟ ಟಾಟಾ- 35 ಲಕ್ಷದವರೆಗೂ ಲೋನ್ ನೀಡಲು ನಿರ್ಧಾರ.

Ration Card KYC ಅನ್ನು ಕಡ್ಡಾಯವಾಗಿ ಮಾಡಿ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವಂತಹ ಕೆಲವೊಂದು ಗೋಲ್ಮಾಲ್ ಗಳನ್ನು ಗಮನಿಸಿ Ration Card KYC ಮಾಡಿಸುವುದು ಅತ್ಯಂತ ಕಡ್ಡಾಯ ಎಂಬುದನ್ನು ಕೂಡ ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆ ಪರಿಗಣಿಸಿದೆ. ಇಂತಹ ಕೆಲಸಗಳನ್ನು ತಡೆಗಟ್ಟಲೆಂದೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ಜಾರಿಗೆ ತರುತ್ತಿದೆ.

Ration Card KYC
Ration Card KYC

ರಾಜ್ಯ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗೆ ಜಾರಿಗೆ ತಂದಿರುವಂತಹ ಸಾಕಷ್ಟು ಜನಪ್ರಿಯ ಯೋಜನೆಗಳಲ್ಲಿ ರೇಷನ್ ಕಾರ್ಡ್ ಪಾತ್ರ ಪ್ರಮುಖವಾಗಿದೆ. ಒಂದು ವೇಳೆ ನೀವು ಇನ್ನೂ ಕೂಡ ನಿಮ್ಮ ರೇಷನ್ ಕಾರ್ಡ್ ಗೆ KYC ಮಾಡಿಸಿಲ್ಲ ಎಂದಾದಲ್ಲಿ ಕೂಡಲೇ ಕಡ್ಡಾಯವಾಗಿ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಯಾಕೆಂದರೆ ಸರ್ಕಾರವೂ ಕೂಡ ಈ ಮೂಲಕ ಅಸಲಿ ಹಾಗೂ ನಕಲಿ ರೇಷನ್ ಕಾರ್ಡ್ ಗಳ ವ್ಯತ್ಯಾಸವನ್ನು ಕಂಡುಹಿಡಿಯಬೇಕಾಗಿರುವುದು ಕೂಡ ಅಗತ್ಯವಾಗಿದೆ.

KYC ಪೂರ್ಣಗೊಳಿಸುವುದಕ್ಕೆ ಸಮಯಾವಧಿ

ರಾಜ್ಯ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ಕೆ ವೈ ಸಿ ಪೂರ್ಣಗೊಳಿಸುವುದಕ್ಕೆ ಈ ವರ್ಷದ ಅಂತ್ಯ ಅಂದರೆ ಡಿಸೆಂಬರ್ 30ರವರೆಗೆ ಕೂಡ ಸಮಯ ಅವಕಾಶವನ್ನು ನೀಡಿದೆ. ನಿಗದಿತ ಸಮಯದ ಒಳಗೆ ಜಾರಿಗೆ ತಂದಿರುವಂತಹ ನಿಯಮವನ್ನು ಅನುಸರಿಸುವ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮವಾಗಿದೆ. ಇಲ್ಲವಾದಲ್ಲಿ ರೇಷನ್ ಕಾರ್ಡ್ ರದ್ದಾದರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಈ ಮೂಲಕ ಸಾಕಷ್ಟು ಸರ್ಕಾರಿ ಯೋಜನೆಗಳಿಂದ ನೀವು ವಂಚಿತರಾಗಬೇಕಾದಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿದ್ದು ಇದೇ ಕಾರಣಕ್ಕಾಗಿ ಆದಷ್ಟು ಬೇಗ ನಡೆಯಬೇಕಾಗಿರುವಂತಹ ಪ್ರಕ್ರಿಯೆಗಳನ್ನು ಪೂರೈಸಿ.

Comments are closed.