Loan EMI: ಬ್ಯಾಂಕಿನಿಂದ ಲೋನ್ ಪಡೆದು EMI ಕಟ್ಟೋದಕ್ಕೆ ಕಷ್ಟ ಆಗ್ತಿದೆಯಾ? RBI ನಿಂದ ಬಂತು ನೋಡಿ ಗುಡ್ ನ್ಯೂಸ್.

Below is the latest update about Loan EMI payment.

Loan EMI rules changed: ನಮಸ್ಕಾರ ಸ್ನೇಹಿತರೇ ಕೆಲವರು ಜೀವನದಲ್ಲಿ ಏನಾದರೂ ಕಷ್ಟ ಬಂದಾಗ ಸಾಲ ಮಾಡುತ್ತಾರೆ. ಕೆಲವರಿಗೆ ವ್ಯಾಪಾರ ವಿಸ್ತರಣೆ ಮಾಡಲು ಅಥವಾ ಹೊಸದಾದ ವ್ಯಾಪಾರವನ್ನು ಮಾಡಲು ಸಾಲದ ಅಗತ್ಯತೆ ಇರುತ್ತೆ. ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಪರಿಸ್ಥಿತಿಯಲ್ಲಿ ಹಣ ಅಂದರೆ ಸಾಲದ ಅಗತ್ಯತೆ ಇದ್ದೇ ಇರುತ್ತೆ. ಸಾಲದಲ್ಲಿ ಕೂಡ ನಾವು ಎಜುಕೇಶನ್ ಲೋನ್, ಹೋಂ ಲೋನ್(Home Loan), ಕಾರ್ ಲೋನ್ ರೀತಿಯ ಬೇರೆ ಬೇರೆ ವಿಭಾಗದ ಲೋನ್ ಗಳನ್ನು ಪಡೆದುಕೊಳ್ಳುತ್ತೇವೆ. ಆದರೆ ಈ ಸಂದರ್ಭದಲ್ಲಿ ಅವುಗಳಿಗೆ ಅವುಗಳದೇ ಆದ ಕೆಲವೊಂದು ನಿಯಮಗಳು ಇರುತ್ತವೆ.

Below is the latest update about Loan EMI payment.

ಹೌದು ಬ್ಯಾಂಕುಗಳು ಇವುಗಳಲ್ಲಿ ಪ್ರತಿ ತಿಂಗಳು ಕಟ್ಟಬೇಕಾಗಿರುವಂತಹ EMI ಅನ್ನು ಸಮಯಕ್ಕೆ ಸರಿಯಾಗಿ ಕಟ್ಟದೆ ಹೋದಲ್ಲಿ ಆ ಸಂದರ್ಭದಲ್ಲಿ ಪೆನಾಲ್ಟಿ, ಬಡ್ಡಿಗೆ ಚಕ್ರಬಡ್ಡಿ, ಕಂತಿನ ಮೇಲೆ ಕೂಡ ಚಕ್ರ ಬಡ್ಡಿಯನ್ನು ವಿಧಿಸುವಂತಹ ಸಾಧ್ಯತೆ ಇರುತ್ತದೆ. ಇದು ನಿಜಕ್ಕೂ ಗ್ರಾಹಕರಿಗೆ ಇನ್ನಿಲ್ಲದಂತೆ ಕಾಡುವಂತಹ ಸಮಸ್ಯೆಗಳಾಗಿವೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಈ ರೀತಿ ಕಷ್ಟದ ಸಂದರ್ಭದಲ್ಲಿ ಗ್ರಾಹಕರ ಹಣವನ್ನು ದೋಚುವಂತಹ ಬ್ಯಾಂಕುಗಳ ವಿರುದ್ಧ ಗ್ರಾಹಕರು ಈಗ RBI ಗೆ ದೂರು ನೀಡಿ ಮೊರೆ ಹೋಗಿದ್ದಾರೆ. ಹಾಗಿದ್ರೆ ಬನ್ನಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಅಥವಾ ಕೈಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಇತರ ಸುದ್ದಿಗಳು- Personal Loan: ಮೊಬೈಲ್ ನಿಂದ ಅರ್ಜಿ ಹಾಕಿ, 10 ಲಕ್ಷದ ಲೋನ್ ಪಡೆಯಿರಿ. ಇಷ್ಟು ಇದ್ದರೇ ಸಾಕು ಲೋನ್ ಅವರೇ ಕೊಡುತ್ತಾರೆ.

ಈ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(reserve Bank of India) 2024ರ ಆರಂಭದಿಂದಲೇ ಗ್ರಾಹಕರಿಗೆ ನೆರವಾಗುವ ರೀತಿಯಲ್ಲಿ ಕಾನೂನು ಕ್ರಮಗಳನ್ನು ಜಾರಿಗೆ ತರಲಿದ್ದು ಅವುಗಳನ್ನು ಮೀರಿ ಬ್ಯಾಂಕುಗಳು ಗ್ರಾಹಕರಿಗೆ ಆರ್ಥಿಕವಾಗಿ ಸಮಸ್ಯೆ ನೀಡುವ ಕೆಲಸವನ್ನು ಮಾಡಿದರೆ ಆ ಸಂದರ್ಭದಲ್ಲಿ ಗ್ರಾಹಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ಆ ಬ್ಯಾಂಕಿನ ವಿರುದ್ಧ ದೂರನ್ನು ನೀಡಬಹುದಾಗಿದೆ. ಆ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ.

RBI ನ ಹೊಸ ನಿಯಮಗಳು- New RBI rules

ಇನ್ಮೇಲೆ ಬ್ಯಾಂಕುಗಳು ಕಂತುಗಳನ್ನು (Loan EMI) ಸರಿಯಾದ ರೀತಿಯಲ್ಲಿ ಕಟ್ಟದೆ ಹೋದಲ್ಲಿ ಬಡ್ಡಿಯ ಮೇಲೆ ಬಡ್ಡಿಯನ್ನು ವಸೂಲು ಮಾಡುವಂತಹ ಅಧಿಕಾರವನ್ನು ಹೊಂದಿರುವುದಿಲ್ಲ. ಕೇವಲ ವಿಳಂಬ ಫೀಸ್ ಅನ್ನು ಮಾತ್ರ ಪಡೆದುಕೊಳ್ಳಬಹುದು. ಸಾಲದ ಮೇಲೆ ಬಡ್ಡಿ ಫಿಕ್ಸ್ ಮಾಡುವ ಸಂದರ್ಭದಲ್ಲಿ ಅದಕ್ಕೆ ಕಾನೂನು ಪ್ರಕಾರವಾಗಿ ನಿಗದಿಪಡಿಸಲಾಗಿರುವಂತಹ ಬಡ್ಡಿಯನ್ನು ಮಾತ್ರ ವಿಧಿಸಬೇಕು ಎಂಬುದನ್ನು ಕೂಡ ಆರ್‌ಬಿಐ ಸ್ಪಷ್ಟಿಕರಿಸಿದೆ.

ಇತರ ಸುದ್ದಿಗಳು- Bigg boss 10 Varthur Santhosh: ವರ್ತೂರ್ ಅಣ್ಣ ಬಿಗ್ ಬಾಸ್ ನಿಂದ ಎಷ್ಟೇ ಸಂಭಾವನೆ ಪಡೆದರೂ ಅದು ಸೇರುವುದು ಅಲ್ಲಿಗೆ ಮಾತ್ರ

ಬ್ಯಾಂಕುಗಳು ಸಾಲ ಪಡೆದುಕೊಂಡಿರುವ ಅನುಮತಿ ಇಲ್ಲದ ಯಾವುದೇ ರೀತಿಯ ಇಎಂಐ ಏರಿಸುವುದು ಅಥವಾ ಬಡ್ಡಿಯನ್ನು ಏರಿಸುವಂತಹ ಕೆಲಸವನ್ನು ಮಾಡುವ ಹಾಗಿಲ್ಲ. ಕೇವಲ ಎಷ್ಟು ಮಾತ್ರವಲ್ಲದೆ ಸಾಲದ ಅವಧಿಯನ್ನು ಹೆಚ್ಚಿಸುವ ವಿಚಾರ ಬಂದಾಗಲೂ ಕೂಡ ಸಾಲಗಾರನ ಅನುಮತಿ ಇಲ್ಲದೆ ಅದನ್ನು ಮುಂದುವರಿಸುವ ಹಾಗಿಲ್ಲ. EMI ಪಾವತಿ ಆಗುವುದು ತಡವಾದಲ್ಲಿ ಹೆಚ್ಚಿನ ಬಡ್ಡಿಯನ್ನು ಪಡೆದುಕೊಳ್ಳುವ ನಿಯಮ ಇಲ್ಲ ಎನ್ನುವುದನ್ನು ಕೂಡ ಆರ್‌ಬಿಐ ಹೇಳಿದೆ. ಒಂದು ವೇಳೆ ಗ್ರಾಹಕರು ಭಾಗಶಹ ಸಾಲದ ಮೊತ್ತವನ್ನು ಪಾವತಿಸಿದರೆ ಉಳಿದ ಮೊತ್ತಕ್ಕೆ (Loan EMI) ಮುಂದಿನ ದಿನಗಳಲ್ಲಿ ಲೆಕ್ಕಾಚಾರ ಹಾಕಬೇಕಾಗಿರುತ್ತದೆ. ಇವಿಷ್ಟು ಹೊಸದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಹಿತಾ ದೃಷ್ಟಿಯಲ್ಲಿ ಜಾರಿಗೆ ತಂದಿರುವ ಹೊಸ ನಿಯಮಗಳಾಗಿವೆ.

Comments are closed.