Bigg boss 10 Varthur Santhosh: ವರ್ತೂರ್ ಅಣ್ಣ ಬಿಗ್ ಬಾಸ್ ನಿಂದ ಎಷ್ಟೇ ಸಂಭಾವನೆ ಪಡೆದರೂ ಅದು ಸೇರುವುದು ಅಲ್ಲಿಗೆ ಮಾತ್ರ
Bigg boss 10 Varthur Santhosh: ನಮಸ್ಕಾರ ಸ್ನೇಹಿತರೆ ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ರೂಪದಲ್ಲಿ ಕಾಣಿಸಿಕೊಳ್ಳುವಂತಹ ಬಿಗ್ ಬಾಸ್ ಕನ್ನಡ ಈ ಬಾರಿ 10ನೇ ಅವತರಿಣಿಕೆಗೆ ತನ್ನ ಪಾದಾರ್ಪಣೆ ಮಾಡಿದೆ. ಈಗಾಗಲೇ ಈ ಬಾರಿಯ ಸೀಸನ್ ಪ್ರಾರಂಭವಾಗಿ ಸಾಕಷ್ಟು ಸಮಯಗಳೇ ಕಳೆದಿವೆ. ನಮ್ಮ ಭಾರತ ದೇಶದಲ್ಲಿ ಯಾವುದೇ ಬಿಗ್ ಬಾಸ್ ನಲ್ಲಿ ಕೂಡ 10 ಸೀಸನ್ ಗಳನ್ನು ಸತತವಾಗಿ ನಿರೂಪಣೆ ಮಾಡಿಕೊಂಡು ಬಂದಿರುವಂತಹ ಮತ್ತೊಬ್ಬ ಸ್ಟಾರ್ ನಟ ಇಲ್ಲ ಎಂದು ಹೇಳಬಹುದಾಗಿದೆ. ಈ ವಿಚಾರದಲ್ಲಿ ನಾವು ಕಿಚ್ಚ ಸುದೀಪ್(Kiccha Sudeep) ರವರಿಗೆ ಮೆಚ್ಚುಗೆಯನ್ನು ಸಲ್ಲಿಸಬೇಕು.
Bigg boss 10 Varthur Santhosh decided to spend bigg boss salary.
ಇವತ್ತಿನ ಲೇಖನಿಯಲ್ಲಿ ಕೇಂದ್ರ ಬಿಂದು ಆಗಿರುವಂತಹ ವರ್ತೂರು ಸಂತೋಷ್(Vartur Santosh) ಅವರ ಬಗ್ಗೆ ಮಾತನಾಡೋಣ. ಹಳ್ಳಿಕಾರ್ ಒಡೆಯ ಎನ್ನುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಶನಲ್ ಆಗಿ ಕಾಣಿಸಿಕೊಂಡ ವರ್ತೂರ್ ಸಂತೋಷ್ ಇದೇ ಕಾರಣಕ್ಕಾಗಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಸ್ಟ್ರೇಟ್ ಫಾರ್ವರ್ಡ್ ರೀತಿ ನಿಜಕ್ಕೂ ಎಲ್ಲರ ಮನಸ್ಸು ಗೆಲ್ಲುತ್ತದೆ.
ಬಿಗ್ ಬಾಸ್ ಮನೆಗೆ ಬಂದ ಮೇಲೆ ಕೂಡ ಸಾಕಷ್ಟು ವಿವಾದಗಳಿಗೆ ಕೂಡ ಇವರು ಸಿಲುಕಿ ಕೊಳ್ಳುತ್ತಾರೆ ಎಂಬುದನ್ನು ನೀವು ಈಗಾಗಲೇ ಗಮನಿಸಿದ್ದೀರಿ. ಅದರಲ್ಲೂ ಪ್ರಮುಖವಾಗಿ ಹುಲಿ ಉಗುರು ಕಾರಣದಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದು ಪೊಲೀಸ್ ತನಿಖೆಯನ್ನು ಕೂಡ ಅವರು ಎದುರಿಸಬೇಕಾಗಿ ಬಂದಿತು. ಆನಂತರ ಮತ್ತೆ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಗೆ ಪುನಃ ಕಾಲಿಟ್ಟಿದ್ರು.
ಬಿಗ್ ಬಾಸ್ ಮನೆಗೆ ಮತ್ತೆ ವರ್ತೂರು ಸಂತೋಷ್ ಕಾಲಿಟ್ಟ ಮೇಲೂ ಕೂಡ ಮನೆಯಿಂದ ಹೊರ ಹೋಗುವ ಬಗ್ಗೆ ಯೋಚನೆ ಮಾಡಿದ್ದರು ಹಾಗೂ ಅವರು ಅತ್ತಿರೋದು ಕೂಡ ಬಿಗ್ ಬಾಸ್ ಎಪಿಸೋಡ್ ನಲ್ಲಿ ನೀವು ಕಂಡಿದ್ದೀರಿ ಎಂಬುದಾಗಿ ಭಾವಿಸುತ್ತೇವೆ. ನಂತರ ಅವರ ತಾಯಿ ಬಂದು ಸಮಾಧಾನ ಮಾಡಿದ ನಂತರ ಖಂಡಿತವಾಗಿ ಬಿಗ್ ಬಾಸ್ ಮನೆಯಿಂದ ಗೆದ್ದೇ ಹೊರ ಬರುತ್ತೇನೆ ಎನ್ನುವಂತಹ ಅಚಲವಾದ ನಿರ್ಧಾರವನ್ನು ಕೂಡ ಈಗಾಗಲೇ ಅವರು ಮಾಡಿರುವುದು ಕೂಡ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.
ಇತ್ತೀಚಿಗಿನ ಸುದ್ದಿಗಳು: Railway: ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದೇ? ಯಾರಿಗೂ ತಿಳಿಯದ ರೈಲಿನ ನಿಯಮ ಏನು ಹೇಳುತ್ತೆ. ಈ ರೂಲ್ಸ್ ತಿಳ್ಕೊಂಡ್ರೆ ಹಬ್ಬಾನೇ.
ವರ್ತೂರು ಸಂತೋಷ್ ಅವರ ಸ್ನೇಹಿತ ಆಗಿರುವಂತಹ ಮಹೇಶ್ ರವರು ಬಿಗ್ ಬಾಸ್ ನಿಂದ ಬರುತ್ತಿರುವಂತಹ ಸಂಭಾವನೆಯನ್ನು ವರ್ತೂರು ಸಂತೋಷ್ ರವರು ಅನಾಥಾಶ್ರಮಕ್ಕೆ ನೀಡುವಂತಹ ನಿರ್ಧಾರವನ್ನು ಈಗಾಗಲೇ ಮಾಡಿದ್ದಾರೆ ಎನ್ನುವಂತಹ ಯಾರಿಗೂ ತಿಳಿಯದ ಸಂಗತಿಯನ್ನು ಕೂಡ ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಮಾಧ್ಯಮದಲ್ಲಿ ವರ್ತೂರು ಸಂತೋಷ್ ರವರ ಮಾವ ಕೂಡ ತನ್ನ ಮಗಳಿಗೆ ಅಂದರೆ ವರ್ತೂರು ಸಂತೋಷ್ ರವರು ತಮ್ಮ ಹೆಂಡತಿಗೆ ಕಿರುಕುಳವನ್ನು ನೀಡುತ್ತಿದ್ದರು ಎನ್ನುವಂತಹ ಮಾತುಗಳನ್ನು ಕೂಡ ಆಡಿರುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
Comments are closed.