Drone Pratap: ಡ್ರೋನ್ ಪ್ರತಾಪ್ ಗೆ I LOVE YOU ಎಂದ ಖ್ಯಾತ ನಟಿ- ನಾಚಿ ನೀರಾದ ಡ್ರೋನ್ ಅಣ್ಣ.
Drone Pratap: ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಕನ್ನಡದ ಬಿಗ್ ಬಾಸ್ ಸೀಸನ್ 10(Biggboss Season 10) ಸಾಕಷ್ಟು ರೋಮಾಂಚಕತೆ ಹಾಗೂ ಟರ್ನ್ ಹಾಗೂ ಟ್ವಿಸ್ಟ್ ಜೊತೆಗೆ ಎಂಟರ್ಟೈನ್ಮೆಂಟ್ ಅನ್ನು ಕೂಡ ವೀಕ್ಷಕರಿಗೆ ನೀಡುತ್ತಿದೆ ಎಂದು ಹೇಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಡ್ರೋನ್ ಪ್ರತಾಪ್ ರವರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.
Heroine Sangeetha Makes fun of Drone Pratap in Kannada Bigg boss 10- Audience appreciate the way she treated Drone Pratap.
ಹೌದು ಈಗ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್(Drone Prathap) ರವರ ಲವ್ ಸ್ಟೋರಿಯನ್ನು ಪ್ರಾರಂಭಿಸುವುದಕ್ಕೆ ಉಳಿದ ಸ್ಪರ್ಧಿಗಳು ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಹೇಳಬಹುದು. ಪ್ರಾರಂಭದಲ್ಲಿ ಡ್ರೋನ್ ಪ್ರತಾಪ್ ರವರ ಹುಡುಗಿ ಬಗ್ಗೆ ಮಾತಾಡೋ ಟಾಪಿಕ್ ಅನ್ನು ನೀತು, ನಮೃತ ಹಾಗೂ ಸಂಗೀತ ಪ್ರಾರಂಭಿಸುತ್ತಾರೆ. ಆಗ ಡ್ರೋನ್ ಪ್ರತಾಪ್ ರವರು ನನ್ನ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುವುದು ಬಾಕಿ ಇದೆ ಅದಾದ ನಂತರವೇ ನಮ್ಮ ಅಪ್ಪ ಒಪ್ಪಿಕೊಳ್ಳುವ ಹುಡುಗಿಯನ್ನು ನಾನು ಮದುವೆ ಆಗ್ತೀನಿ ಅನ್ನೋದಾಗಿ ನನ್ನನ್ನ ಬಿಟ್ಟುಬಿಡಿ ಅನ್ನೋ ಸ್ವರದಲ್ಲಿ ಮಾತನಾಡುತ್ತಾರೆ. ಆಗ ಸಂಗೀತ ಶೃಂಗೇರಿ(Sangeeta sringeri) ಮಾತ್ರ ನಾನೇ ಆ ಹುಡುಗಿ ನಿಮ್ಮ ಅಪ್ಪನನ್ನು ನಾನೇ ಒಪ್ಪಿಸ್ತೀನಿ ಐ ಲವ್ ಯು ಎನ್ನುವುದಾಗಿ ಹೇಳುತ್ತಾರೆ.
ಇಂದಿನ ಮತ್ತಷ್ಟು ಸುದ್ದಿಗಳು- Get Instant Loan: ಯಾವುದೇ ಗ್ಯಾರಂಟಿ ಇಲ್ಲದೆ, ದಿಡೀರ್ ಎಂದು ನಿಂತಲ್ಲೇ ಲೋನ್ ಬೇಕೇ? ಈ ಆಪ್ ನಲ್ಲಿ ಅರ್ಜಿ ಹಾಕಿ. 20 ಸೆಕೆಂಡ್ ನಲ್ಲಿ ಹಣ.
ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ನಗುತ್ತಲೇ ಇಲ್ಲ ಅಂತ ಹೇಳ್ತಾರೆ. ಅದಕ್ಕೆ ಸಂಗೀತ ಶೃಂಗೇರಿ ನನ್ನ ನೋಡಿದ್ರೆ ನಿಮಗೆ ಇಷ್ಟ ಇಲ್ವಾ ಅಂತ ಪ್ರಶ್ನೆ ಕೇಳಿದಾಗ, ಇಲ್ಲ ಇದೆ ಆದರೆ ನೀವು ನನ್ನ ಅಕ್ಕನ ತರಹ ಅಂತ ಡ್ರೋನ್ ಪ್ರತಾಪ್ ಹೇಳಿದಾಗ ಸಂಗೀತ ಶೃಂಗೇರಿ ಇಲ್ಲ ನಾನು ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿದ ಮೊದಲ ದಿನದಿಂದಲೂ ಕೂಡ ನಿಮ್ಮ ಮೇಲೆ ಕ್ರಶ್ ಆಗಿದೆ ಅನ್ನೋದಾಗಿ ಹೇಳ್ತಾರೆ. ಆಗ ಡ್ರೋನ್ ಪ್ರತಾಪ್ ರವರು ನಗುತ್ತಲೆ ನನ್ನ ಮೇಲಾ ಅನ್ನೋದಾಗಿ ಅನುಮಾನಾಸ್ಪದವಾಗಿ ಕೇಳುತ್ತಾರೆ. ಆಗ ಸಂಗೀತ ಶೃಂಗೇರಿ ಅವರು ಹೌದು ಅಂತ ಹೇಳ್ತಾರೆ.
ಆಗ ಡ್ರೋನ್ ಪ್ರತಾಪ್ ರವರು ನನ್ನ ಬಳಿ ದುಡ್ಡಿಲ್ಲ ಅಂತ ಗೂಗ್ಲಿ ಹಾಕ್ತಾರೆ. ಅದಕ್ಕೆ ಸಂಗೀತ ಶೃಂಗೇರಿ ಅವರು ದುಡ್ಡಿದೆ ಅಂತ ಯಾರಾದರೂ ಪ್ರೀತಿಸಿ ಮದುವೆಯಾಗ್ತಾರಾ? ನಿಮ್ಮ ಹೃದಯ ಹಾಗೂ ಸ್ಟೈಲ್ ನೋಡಿ ನಿಮಗೆ ಫ್ಲ್ಯಾಟ್ ಆಗಿದ್ದು ಅನ್ನೋದಾಗಿ ಹೇಳ್ತಾರೆ. ಈ ಸಂದರ್ಭದಲ್ಲಿ ಇನ್ನೂ ಪರೀಕ್ಷಿಸುವ ನಿಟ್ಟಿನಲ್ಲಿ ಡ್ರೋನ್ ಪ್ರತಾಪ್ ರವರು ನಾನು ಬೋರಿಂಗ್ ಲೈಫ್ ಅನ್ನು ಲೀಡ್ ಮಾಡುತ್ತೇನೆ. ಯಾವುದೇ ರೀತಿಯ ಸಿನಿಮಾಗೆ ಹೋಗಲ್ಲ ಸುತ್ತಾಡೋಕೆ ಹೋಗಲ್ಲ ಅಂತ ಹೇಳಿದಾಗ ಸಂಗೀತ ಶೃಂಗೇರಿ ನಾನೇ ಕರ್ಕೊಂಡು ಹೋಗ್ತೀನಿ ನಾನು ನಿಮಗೆ ಎಂಟರ್ಟೈನ್ಮೆಂಟ್ ಮಾಡ್ತೀನಿ ಅನ್ನೋದಾಗಿ ಕೂಡ ಉತ್ತರ ನೀಡುತ್ತಾರೆ.
ಆ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ನಮ್ಮ ಮನೆಯಲ್ಲಿ ಅಡುಗೆ ಮಾಡಬೇಕು ಅಪ್ಪ ಅಮ್ಮನಿಗೆ ಅಡುಗೆ ಮಾಡಿ ಹಾಕಬೇಕು ಅನ್ನೋದಾಗಿ ಹೇಳಿದಾಗಲೂ ಕೂಡ ಸಂಗೀತ ಶೃಂಗೇರಿ ಅದನ್ನು ಕೂಡ ಮಾಡೋಣ ಅಂತ ಹೇಳ್ತಾರೆ. ನಂತರ ಕೊನೆಗೂ ಡ್ರೋನ್ ಪ್ರತಾಪ್ ಸಾಕು ದೀದಿ ಅಂತ ಹೇಳಿ ಈ ತಮಾಷೆಯನ್ನು ನಿಲ್ಲಿಸುತ್ತಾರೆ. ಬಿಗ್ ಬಾಸ್ ಕ್ಯಾಮೆರಾದಲ್ಲಿ ಸೆರೆಯಾದಂತಹ ಈ ದೃಶ್ಯಗಳು ಬಿಗ್ ಬಾಸ್ ಪ್ರೇಕ್ಷಕರಿಗೆ ಮನೋರಂಜನೆ ನೀಡಿದ್ದಂತೂ ಸುಳ್ಳಲ್ಲ.
Comments are closed.