Narendra Modi :ಏಳು ವಿಕೆಟ್ ಪಡೆದ ಶಮಿ ರವರಿಗೆ ಪ್ರಧಾನಿ ಮೋದಿ ಕಳುಹಿಸಿದರು ಹೊಸ ಸಂದೇಶ.

ಏಳು ವಿಕೆಟ್ ಪಡೆದ ಶಮಿ ರವರಿಗೆ ಪ್ರಧಾನಿ ಮೋದಿ ಕಳುಹಿಸಿದರು ಹೊಸ ಸಂದೇಶ - Narendra Modi Sends special message for mohammed shami

Narendra Modi: ನಮಸ್ಕಾರ ಸ್ನೇಹಿತರೆ ಈಗಾಗಲೇ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿರುವಂತಹ ಸೆಮಿಫೈನಲ್ ಪಂದ್ಯಾಟದಲ್ಲಿ ಭಾರತೀಯ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ. ಅದರಲ್ಲೂ ವಿಶೇಷವಾಗಿ ಮೊಹಮ್ಮದ್ ಶಮಿ(Mohammed Shami) ರವರು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಟಾಪ್ 5 ಬ್ಯಾಟ್ಸ್ ಮ್ಯಾನ್ ಗಳನ್ನು ಸೇರಿಸಿ ಒಟ್ಟಾರೆ 7 ವಿಕೆಟ್ಗಳನ್ನು ನಿನ್ನೆ ಪಡೆದುಕೊಳ್ಳುವ ಮುಖಾಂತರ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ದೇಶದ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ ಅವರು ಕೂಡ ಅಭಿನಂದಿಸಿದ್ದಾರೆ.

ಶಮಿ ಅವರ ಬಗ್ಗೆ ಮೋದಿಜಿ ಹೇಳಿದ್ದೇನು – Narendra Modi Sends special message for mohammed shami

ನ್ಯೂಜಿಲೆಂಡ್ ವಿರುದ್ಧದ ಪಂದ್ಯಾಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆದ್ದ ನಂತರ ನರೇಂದ್ರ ಮೋದಿ(Narendra Modi) ಅವರು ಕೂಡ ತಂಡದ ಅದ್ಭುತ ಪ್ರದರ್ಶನವನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಗಳಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ಶಮಿ ಅವರ ಬೌಲಿಂಗ್ ಪ್ರದರ್ಶನ ಸಾಕಷ್ಟು ತಲೆಮಾರು ಗಳವರೆಗೂ ಕೂಡ ನೆನಪಿಟ್ಟುಕೊಳ್ಳುವಂತಹ ಪ್ರದರ್ಶನ ಎಂಬುದಾಗಿ ಶಮಿ ಅವರ ಅಭಿಮಾನಿಯ ರೀತಿಯಲ್ಲಿ ನರೇಂದ್ರ ಮೋದಿಯವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.

ಏಳು ವಿಕೆಟ್ ಪಡೆದ ಶಮಿ ರವರಿಗೆ ಪ್ರಧಾನಿ ಮೋದಿ ಕಳುಹಿಸಿದರು ಹೊಸ ಸಂದೇಶ - Narendra Modi Sends special message for mohammed shami
ಏಳು ವಿಕೆಟ್ ಪಡೆದ ಶಮಿ ರವರಿಗೆ ಪ್ರಧಾನಿ ಮೋದಿ ಕಳುಹಿಸಿದರು ಹೊಸ ಸಂದೇಶ – Narendra Modi Sends special message for mohammed shami

ಕೇಂದ್ರ ಗೃಹ ಸಚಿವರಾಗಿರುವಂತಹ ಅಮಿತ್ ಶಾ(Amit Shah) ಕೂಡ ಭಾರತೀಯ ಕ್ರಿಕೆಟ್ ತಂಡದ ಗೆಲುವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ಬಾಸ್ ರೀತಿಯಲ್ಲಿ ಫೈನಲ್ ಹಂತಕ್ಕೆ ಪ್ರವೇಶಿಸಿದೆ ಎಂಬುದನ್ನು ಹೇಳುತ್ತಾ ಗೆಲುವಿಗೆ ಕಾರಣವಾಗಿರುವಂತಹ ಪ್ರತಿಯೊಬ್ಬ ಆಟಗಾರರಿಗೂ ಕೂಡ ಅಭಿನಂದನೆಗಳು ಎಂಬುದನ್ನು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಮುಖಾಂತರ ಅಮಿತ್ ಶಾ ಹೇಳಿದ್ದಾರೆ.

ಇಂದಿನ ಮತ್ತಷ್ಟು ಸುದ್ದಿಗಳು- Celerio: ಬಹು ಬೇಡಿಕೆ ಇರುವ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್- ಅಂಗಡಿಗೆ ಮುಗಿಬಿದ್ದ ಜನ. Celerio ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್

2011ರ ನಂತರ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡ ಈಗ ರೋಹಿತ್ ಶರ್ಮ ಅವರ ಅದ್ಭುತ ನಾಯಕತ್ವದಲ್ಲಿ ಇದೇ ನವೆಂಬರ್ 19 ರಂದು ನಡೆಯಲಿರುವಂತಹ ವಿಶ್ವಕಪ್ ಫೈನಲ್ ಪಂದ್ಯಾವಳಿಗೆ ತೇರ್ಗಡೆಯಾಗಿದೆ. 12 ವರ್ಷಗಳ ಕಾಯುವಿಕೆ ನವೆಂಬರ್ 19 ರಂದು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ. ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವಣ ವಿಜೇತ ತಂಡದ ಜೊತೆಗೆ ಭಾರತೀಯ ಕ್ರಿಕೆಟ್ ತಂಡ ಫೈನಲ್ ಪಂದ್ಯವನ್ನು ಆಡಲಿದೆ.

ಭಾರತೀಯ ಕ್ರಿಕೆಟ್ ತಂಡ ಮೊದಲು ಬ್ಯಾಟಿಂಗ್ ಮಾಡಿ ವಿರಾಟ್ ಕೊಹ್ಲಿ, ಗಿಲ್, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬರೋಬ್ಬರಿ 398 ರನ್ನುಗಳ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ತಂಡಕ್ಕೆ ನೀಡಿತ್ತು. ಆದರೆ ಮೊಹಮ್ಮದ್ ಶಮಿ ಅವರ ಏಳು ವಿಕೆಟ್ಗಳ ದಾಳಿಗೆ ನ್ಯೂಜಿಲೆಂಡ್ ತಂಡ ತರಗೆಲೆಯಂತೆ 327 ರನ್ನಿಗೆ ಆಲ್ ಔಟ್ ಆಗುವ ಮೂಲಕ ಈ ಬಾರಿಯ ಸೆಮಿಫೈನಲ್ ನಿಂದ ಹೊರ ಬಿದ್ದಿದೆ. ಅದ್ಭುತ ಪ್ರದರ್ಶನದ ಕಾರಣಕ್ಕಾಗಿ ಶಮಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಿಕ್ಕಿದೆ.

Comments are closed.