Cricket News: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ನ್ಯೂಝಿಲ್ಯಾಂಡ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತದ ಡೀಟೇಲ್ಸ್
Cricket News: ನಮಸ್ಕಾರ ಸ್ನೇಹಿತರೆ ಕೊನೆಗೂ ಕೂಡ ಭಾರತೀಯ ಕ್ರಿಕೆಟ್ ತಂಡ 12 ವರ್ಷಗಳ ನಂತರ ಅಂದರೆ 2011ರ ಭಾರತದ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಹಂತಕ್ಕೆ ತಲುಪಿದೆ. ಅದರಲ್ಲೂ ವಿಶೇಷವಾಗಿ ಪ್ರತಿ ಬಾರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಈ ಬಾರಿ ಭಾರತೀಯ ಕ್ರಿಕೆಟ್ ತಂಡದ(Indian cricket team) ಪರಾಕ್ರಮಕ್ಕೆ ಶರಣಾಗಿ ಸೆಮಿಫೈನಲ್ ಹಂತದಿಂದ ಹೊರ ಬಿದ್ದಿದೆ.
Cricket news: After losing to India, how much money did the New Zealand squad receive in crores?
ಇವತ್ತಿನ ಲೇಖನಿಯಲ್ಲಿ ನಾವು ಸೆಮಿಫೈನಲ್ ನಿಂದ ಎಲಿಮಿನೇಟ್ ಆಗಿರುವಂತಹ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಎಷ್ಟು ಹಣವನ್ನು ಪಡೆದುಕೊಂಡಿದೆ ಎಂಬುದನ್ನು ಹೇಳಲು ಹೊರಟಿದ್ದೇವೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಐಸಿಸಿ ಟೂರ್ನಮೆಂಟ್ ಪ್ರಾರಂಭ ಆಗುವುದಕ್ಕೂ ಮುಂಚೆನೇ ಒಟ್ಟಾರೆ 10 ಮಿಲಿಯನ್ ಡಾಲರ್ಗಳ ಬಹುಮಾನವನ್ನು ಘೋಷಣೆ ಮಾಡಿತ್ತು. ಈ ಟೂರ್ನಮೆಂಟ್ ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳು ಒಂದು ಪಂದ್ಯ ಗೆದ್ದರೂ ಕೂಡ ಬಹುಮಾನವನ್ನು ಪಡೆದುಕೊಳ್ಳುತ್ತವೆ ಅಂದರೆ ನಗದು ಹಣವನ್ನು ಪಡೆದುಕೊಳ್ಳುತ್ತಾರೆ.
ಇಂದಿನ ಮತ್ತಷ್ಟು ಸುದ್ದಿಗಳು- Cricket World Cup: ಕೊಹ್ಲಿ ಗೆಲ್ಲಿಸುತ್ತಿದ್ದರೂ ಶಮಿ ವಿಕೆಟ್ ಕೀಳುತ್ತಿದ್ದರೂ ನಿಜವಾದ ಹೀರೋ ಅವರಿಬ್ಬರಲ್ಲ, ಬೇರೆ ಆಟಗಾರ ನಿಜವಾದ ಹೀರೋ- ನಾಸಿರ್ ಹುಸೇನ್
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೆಮಿ ಫೈನಲ್ ಹಂತಕ್ಕೆ ತೇರ್ಗಡೆ ಆಗದೆ ಇರುವಂತಹ ಉಳಿದ ಆರು ತಂಡಗಳು ಅಂದರೆ ಇಂಗ್ಲೆಂಡ್, ಆಫ್ಘಾನಿಸ್ತಾನ, ಪಾಕಿಸ್ತಾನ, ನೆದರ್ಲ್ಯಾಂಡ್, ಶ್ರೀಲಂಕಾ ಬಾಂಗ್ಲಾದೇಶ ತಂಡಗಳಿಗೆ ಈಗಾಗಲೇ ಭಾಗವಹಿಸಿರುವುದಕ್ಕಾಗಿ ಒಂದು ಲಕ್ಷ ಅಮೆರಿಕನ್ ಡಾಲರ್ ಗಳು ಅಂದರೆ ಭಾರತೀಯ ರೂಪಾಯಿ ಕನ್ವರ್ಟ್ ಮಾಡಿದರೆ 84 ಲಕ್ಷ ರೂಪಾಯಿಗಳ ಮೊತ್ತವನ್ನು ಈಗಾಗಲೇ ನೀಡಿಯಾಗಿದೆ.
ಕೇವಲ ಇಷ್ಟು ಮಾತ್ರವಲ್ಲದೆ ಪ್ರತಿಯೊಂದು ಲೀಗ್ ಪಂದ್ಯವನ್ನು ಗೆಲ್ಲುವುದಕ್ಕೆ 40,000 ಡಾಲರ್ಗಳನ್ನು ಅಂದರೆ ಭಾರತೀಯ ರೂಪಾಯಿಗಳಲ್ಲಿ 33 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಾರೆ. ಹಾಗಿದ್ದರೆ ಈಗಾಗಲೇ ಸೆಮಿ ಫೈನಲ್ ಹಂತದಿಂದ ಹೊರ ಬಿದ್ದಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಎಷ್ಟು ಹಣವನ್ನು ಪಡೆದುಕೊಂಡಿದೆ ಎಂಬುದನ್ನು ತಿಳಿಯೋಣ.
ಈ ಬಾರಿ ವಿಶ್ವಕಪ್ ನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಡೆದುಕೊಂಡಿರುವ ಸಂಭಾವನೆ
ಈಗಾಗಲೇ ಸೆಮಿ ಫೈನಲ್ ಹಂತಕ್ಕೆ ತೇರ್ಗಡೆಯಾಗಿರುವ ನಾಲ್ಕು ತಂಡಗಳಲ್ಲಿ ಮೊದಲ ಬಾರಿಗೆ ಹೊರ ಹೋಗಿರುವಂತಹ ತಂಡವಾಗಿ ನ್ಯೂಜಿಲೆಂಡ್ ಕಾಣಿಸಿಕೊಳ್ಳುತ್ತದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡ 1.60 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಆ ಲೆಕ್ಕಾಚಾರದಲ್ಲಿ ಭಾರತೀಯ ರೂಪಾಯಿಗಳಲ್ಲಿ ಕನ್ವರ್ಟ್ ಮಾಡಿದರೆ 13 ಕೋಟಿ ರೂಪಾಯಿಗಳನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇನ್ನು ಎರಡನೇ ಸ್ಥಾನವನ್ನು ಪಡೆದುಕೊಳ್ಳುವಂತಹ ತಂಡ ಎರಡು ಮಿಲಿಯನ್ ಹಾಗೂ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುವಂತಹ ತಂಡ ನಾಲ್ಕು ಮಿಲಿಯನ್ ಡಾಲರ್ ಬಹುಮಾನವನ್ನು ಪಡೆದುಕೊಳ್ಳಲಿದೆ.
Comments are closed.