Rohit Sharma: ರೋಹಿತ್ ಶರ್ಮ ವಿರುದ್ಧ ನಾಲಿಗೆ ಹರಿಬಿಟ್ಟ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್. ನೆಟ್ಟಿಗರು ಗರಂ.
Travis head talks about Rohit Sharma: ನಮಸ್ಕಾರ ಸ್ನೇಹಿತರೆ ನಿನ್ನೆ ನಡೆದಿರುವಂತಹ ಫೈನಲ್ ಪಂದ್ಯದಲ್ಲಿ ನೀವೆಲ್ಲರೂ ಈಗಾಗಲೇ ನೋಡಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡವನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸುಲಭ ರೂಪದಲ್ಲಿ ಸೋಲಿಸಿದೆ. ಅದರಲ್ಲಿ ವಿಶೇಷವಾಗಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಆರು ವಿಕೆಟ್ಗಳ ಗೆಲುವನ್ನು ಸಾಧಿಸಲು ಟ್ರಾವಿಸ್ ಹೆಡ್(Travis Head) ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ತಮ್ಮ 137 ರನ್ನುಗಳ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಟ್ರಾವಿಸ್ ಹೆಡ್ ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ(Rohit Sharma) ಅವರ ವಿರುದ್ಧ ನೀಡಿರುವಂತಹ ಒಂದು ಹೇಳಿಕೆ ಅವರ ವಿರುದ್ಧ ನೆಟ್ಟಿಗರು ಹರಿಹಾಯುವಂತೆ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟ್ ತಂಡ(Indian cricket team) 241 ರನ್ನುಗಳ ಗುರಿಯನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿದೆ. ಗುರಿ ಅತ್ಯಂತ ಸಾಮಾನ್ಯ ಆಗಿದ್ದರೂ ಕೂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮೊದಲಿಗೆ 47 ರನ್ ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಬ್ಯಾಟ್ಸ್ಮನ್ ಆಗಿರುವ ಟ್ರಾವಿಸ್ ಹೆಡ್ ತಂಡದ ಪರವಾಗಿ 137 ರನ್ ಗಳ ಅದ್ಭುತ ಆಟವನ್ನು ಪ್ರದರ್ಶಿಸಿ ತಂಡ ಗೆಲ್ಲುವಂತೆ ಮಾಡುತ್ತಾರೆ. ಅವರ ಜೊತೆಗೆ ಮಾರ್ನೆಸ್ ಲಾಬುಶನ್ 58 ರನ್ಗಳನ್ನು ಬಾರಿಸುವ ಮೂಲಕ ಉತ್ತಮ ಜೊತೆಯಾಟವನ್ನು ಕೂಡ ತೋರ್ಪಡಿಸುತ್ತಾರೆ.
ಇದನ್ನು ಕೂಡ ಓದಿ: Electric vehicle Offer : ಕೇವಲ 28000 ಸಾವಿರ ರುಪಾಯಿಗೆ ಎಲೆಕ್ಟ್ರಿಕ್ ಬೈಕ್ ಮಾರಾಟ- ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಾ.
ಇದಕ್ಕೂ ಮುಂಚೆ ನೀವು ಸರಿಯಾಗಿ ಗಮನಿಸಿದರೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ನಾಯಕ ರೋಹಿತ್ ಶರ್ಮ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸುವ ಸಂದರ್ಭದಲ್ಲಿ ಟ್ರಾವಿಸ್ ಹೆಡ್ ಅವರ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಮೊದಲ ಆ’ ಘಾತವನ್ನು ನೀಡುತ್ತಾರೆ. ಮ್ಯಾಚ್ ಮುಗಿದ ನಂತರ ತಮ್ಮ ಅಭಿಪ್ರಾಯಗಳನ್ನು ಪ್ರೆಸೆಂಟೇಷನ್ ಸಂದರ್ಭದಲ್ಲಿ ಟ್ರಾವಿಸ್ ಹೆಡ್ ಹೇಳಿಕೊಂಡಿರುವುದನ್ನು ಕೂಡ ಇಲ್ಲಿ ಕಾಣಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡುತ್ತಾ, ” ಇದೊಂದು ಅಸಾಧಾರಣ ದಿನವಾಗಿತ್ತು. ತಂಡದ ಗೆಲುವಿನಲ್ಲಿ ಕೈಜೋಡಿಸಿರುವುದು ನಿಜಕ್ಕೂ ಕೂಡ ಸಂತೋಷವನ್ನು ನೀಡುತ್ತಿದೆ. ನಾನು ಎದುರಿಸಿರುವಂತಹ ಮೊದಲ 20 ಎಸೆತಗಳಲ್ಲಿ ನಾನು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಬಹುದು ಎನ್ನುವಂತಹ ಆತ್ಮವಿಶ್ವಾಸವನ್ನು ಮೂಡಿಸಿಕೊಂಡೆ” ಎಂಬುದಾಗಿ ಟ್ರಾವಿಸ್ ಹೆಡ್ ಹೇಳಿಕೊಂಡಿದ್ದಾರೆ.
ಇನ್ನು ನಿನ್ನೆ ನಡೆದಿರುವಂತಹ ಫೈನಲ್ ಪಂದ್ಯದಲ್ಲಿ ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ನ ಸ್ಪೀಚ್ ಸಾಕಷ್ಟು ವ್ಯತಿರಿಕ್ತವಾಗಿ ವರ್ತಿಸುವುದನ್ನು ಕೂಡ ನಾವು ಕಾಣಬಹುದಾಗಿದೆ. ಭಾರತೀಯ ಬ್ಯಾಟ್ಸ್ಮನ್ ಗಳು ಬೌಂಡರಿ ಬಾರಿಸುವುದಕ್ಕೂ ಕೂಡ ಚಡಪಡಿಸಬೇಕಾಗಿ ಬಂದಿತ್ತು. 137 ರನ್ನುಗಳನ್ನು ಬಾರಿಸಿರುವಂತಹ ಟ್ರಾವಿಸ್ ಹೆಡ್ ಕೂಡ ಬ್ಯಾಟಿಂಗ್ ಪಿಚ್ ಬಗ್ಗೆ ಮಾತನಾಡುತ್ತಾ ಶಾನ್ ಮಾರ್ಷ್ ರವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಈ ಬೀಚ್ ಬ್ಯಾಟಿಂಗ್ ಮಾಡುವುದಕ್ಕೆ ಸೂಕ್ತ ಅಲ್ಲ ಎಂದೆನಿಸಿತು ಎಂಬುದನ್ನು ಈ ಸಂದರ್ಭದಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ನತದೃಷ್ಟ ವ್ಯಕ್ತಿ
ರೋಹಿತ್ ಶರ್ಮಾ ಅವರ ಬಗ್ಗೆ ಕೂಡ ಮಾತನಾಡುತ್ತಾ ಟ್ರಾವಿಸ್ ಹೆಡ್ ಆತ ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಆಗಿರಬಹುದು ಎಂಬುದಾಗಿ ಹೇಳಿದ್ದಾರೆ. ಆತನ ಕ್ಯಾಚ್ ಅನ್ನು ಹಿಡಿಯದೆ ಇದ್ದಿದ್ರೆ ಬಹುಶಃ ಶತಕವನ್ನು ಬಾರಿಸುತಿದ್ನೇನೋ ಎಂಬುದಾಗಿ ಟ್ರಾವಿಸ್ ಹೆಡ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ರೋಹಿತ್ ಶರ್ಮಾ ಅವರನ್ನು ನತದೃಷ್ಟ ಎಂಬುದಾಗಿ ಕರೆದಿರುವುದು ಅಭಿಮಾನಿಗಳಿಗೆ ಸಾಕಷ್ಟು ಅಸಮಾಧಾನವನ್ನು ಕೂಡ ತಂದಿರುವುದನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದಾಗಿದೆ.
Comments are closed.