Electric vehicle Offer : ಕೇವಲ 28000 ಸಾವಿರ ರುಪಾಯಿಗೆ ಎಲೆಕ್ಟ್ರಿಕ್ ಬೈಕ್ ಮಾರಾಟ- ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಾ.
Electric vehicle Offer: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಹಾಗೂ ನಿರ್ಮಾಣದ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವಂತಹ ಪೆಟ್ರೋಲ್ ಬೆಲೆ ಹಾಗೂ ಪರಿಸರ ಮಾಲಿನ್ಯವನ್ನು ಗಮನಿಸಿರುವಂತಹ ಜನಸಾಮಾನ್ಯರು ಈಗ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ. ಅವುಗಳಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ Avon E Lite ಆಗಿದೆ.
Table of Contents
Avon E Lite ಎಲೆಕ್ಟ್ರಿಕ್ ಸ್ಕೂಟರ್- More about Avon E Lite
ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ Avon E Lite ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲ ಸಾಲಿನಲ್ಲಿ ಕಾಣಬಹುದಾಗಿದೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ಹಾಗೂ ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಚಲಾಯಿಸುವುದಕ್ಕೆ ಅನುಕೂಲವಾಗುವಂತೆ ಇವುಗಳನ್ನು ಡಿಸೈನ್ ಮಾಡಲಾಗಿದೆ. ಇದೇ ಕಾರಣಕ್ಕಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜನಸಾಮಾನ್ಯರು ಕೂಡ ಯಾವುದು ಯೋಚನೆ ಮಾಡದೆ ಪಡೆದುಕೊಳ್ಳಬಹುದಾಗಿದೆ.
Avon E Lite ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಫಾರ್ಮೆನ್ಸ್ ಹಾಗೂ ದಕ್ಷತೆ- Avon E Lite electric scooter mileage and charging details.
Avon E Lite ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 12Ah ಬ್ಯಾಟರಿಯನ್ನು ಅಳವಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದನ್ನು ಆರರಿಂದ ಎಂಟು ಗಂಟೆಗಳ ಚಾರ್ಜ್ ಮಾಡಿದರೆ ಫುಲ್ ಚಾರ್ಜ್ ಆಗುತ್ತದೆ. ಒಮ್ಮೆ ಇದು ಫುಲ್ ಚಾರ್ಜ್ ಆದರೆ 50 ರಿಂದ 60 ಕಿಲೋಮೀಟರ್ ನಿರಾತಂಕವಾಗಿ ಚಲಿಸಲಿದೆ. 230W BLDC ಮೋಟಾರ್ ಅನುಕೂಲ ಇದರಲ್ಲಿ ಅಳವಡಿಸಲಾಗಿದ್ದು ಇದರ ಸಹಾಯದಿಂದಾಗಿ 24 ಕಿಲೋಮೀಟರ್ ಪ್ರತಿ ಗಂಟೆಯ ಟಾಪ್ ಸ್ಪೀಡ್ ನಲ್ಲಿ ಚಲಿಸಬಹುದಾಗಿದೆ.
Avon E Lite ಎಲೆಕ್ಟ್ರಿಕ್ ಸ್ಕೂಟರ್ ನ ಪ್ರಮುಖ ವಿಶೇಷಗಳು- Specifications and features of Avon E Lite
Avon E Lite ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕಾಣಿಸಿಕೊಂಡರು ಕೂಡ ಗ್ರಾಹಕರಿಗೆ ಬೇಕಾಗುವಂತಹ ಪ್ರತಿಯೊಂದು ಫೀಚರ್ಸ್ ಗಳನ್ನು ಕೂಡ ಇದು ತನ್ನಲ್ಲಿ ಹೊಂದಿದೆ. ಅದರಲ್ಲಿ ವಿಶೇಷವಾಗಿ ಪ್ರಮುಖವಾಗಿ ಹೇಳುವುದಾದರೆ ಟ್ಯೂಬ್ ಲೆಸ್ ಟೈಯರ್ ಗಳು ಹಾಗೂ ಡ್ರಮ್ ಬ್ರೇಕ್ ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಇನ್ನು ಪ್ರತಿಯೊಂದು ವರ್ಗದ ಗ್ರಾಹಕರು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಸಹಾಯವಾಗುವಂತೆ ಬೆಲೆಯನ್ನು ಕೂಡ ನಿಗದಿಪಡಿಸಲಾಗಿದೆ.
Avon E Lite ಎಲೆಕ್ಟ್ರಿಕ್ ಸ್ಕೂಟರ್ನ ಬೆಲೆ- Avon E Lite Electric scooter price details
ಕೇವಲ 28,000 ಎಕ್ಸ್ ಶೋರೂಮ್ ಹಾಗೂ ಆನ್ ರೋಡ್ ಬೆಲೆ ಬಗ್ಗೆ ನೋಡೋದಾದ್ರೆ ಕೇವಲ 32,420ಗಳಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ. ಒಂದು ವೇಳೆ ಇಷ್ಟೊಂದು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡ ನೀವು ಪೂರ್ಣ ಪ್ರಮಾಣದಲ್ಲಿ ಒಂದೇ ಬಾರಿಗೆ ಖರೀದಿಸಲು ಸಾಧ್ಯವಾಗದೆ ಹೋದಲ್ಲಿ ಆ ಸಂದರ್ಭದಲ್ಲಿ ಕೂಡ ನಿಮಗೆ ಕಂಪನಿ EMI ಆಯ್ಕೆಯ ಮೂಲಕ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವಂತಹ ಅವಕಾಶವನ್ನು ನೀಡುತ್ತದೆ. ಹೀಗಾಗಿ ಈ ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿಮ್ಮ ಮನೆಯ ಸುತ್ತಮುತ್ತ ಓಡಾಡುವುದಕ್ಕೆ ಸುಲಭ ರೂಪದಲ್ಲಿ ಖರೀದಿ ಮಾಡಬಹುದಾಗಿದೆ.
Comments are closed.