Xiaomi SU7 EV: 650 BHP ಪವರ್ ನೊಂದಿಗೆ ಅನಾವರಣ ಗೊಂಡ Xiaomi ಎಲೆಕ್ಟ್ರಿಕ್ ಕಾರ್. ಪವರ್ ಜೊತೆ ವಿಶೇಷತೆಯ ಡೀಟೇಲ್ಸ್.
Xiaomi SU7 EV: ನಮಸ್ಕಾರ ಸ್ನೇಹಿತರೇ, ಚೀನಾ ದೇಶದ ಪ್ರಖ್ಯಾತ ಸ್ಮಾರ್ಟ್ ಫೋನ್ ಕಂಪನಿ ಆಗಿರುವಂತಹ Xiaomi ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಸೆಡಾನ್ ಸೆಗ್ಮೆಂಟ್ನಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದೆ. ಹೌದು, ನಾವ್ ಮಾತಾಡ್ತಿರೋದು Xiaomi SU7 EV ಕಾರಿನ ಬಗ್ಗೆ. Xiaomi SU7 EV ಕಾರಿನಲ್ಲಿ ಮೂರು ವೇರಿಯಂಟ್ಗಳಿದ್ದು ಅವುಗಳನ್ನು SUV 7, SUV 7PRO, SUV 7 PRO MAX ಗುರುತಿಸಲಾಗಿದೆ. RWD ಹಾಗೂ AWD ಪವರ್ ಟ್ರಾನ್ ಆಪ್ಶನ್ ಗಳು ಕೂಡ ನಿಮಗೆ ಸಿಗುತ್ತವೆ.
Xiaomi SU7 EV – Xiaomi’s first electric vehicle, the SU7 EV, has been unveiled and has more than 650 horsepower.
Xiaomi SU7 EV ಕಾರಿನಲ್ಲಿರುವಂತಹ RWD ಆಪ್ಷನ್ ನಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. 295bhp ಪವರ್ ಅನ್ನು ಇದು ಜನರೇಟ್ ಮಾಡುತ್ತದೆ ಎಂದು ಸಾಬೀತಾಗಿದೆ. AWD ವರ್ಷನ್ ನಲ್ಲಿ 663bhp ಪವರ್ ಅನ್ನು ಜನರೇಟ್ ಮಾಡುವ ಸಾಮರ್ಥ್ಯ ಇದೆ. ಮುಂಭಾಗದಲ್ಲಿ 295 ಹಾಗೂ ಹಿಂಭಾಗದಲ್ಲಿ 368Bhp ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ.
ಇವುಗಳಲ್ಲಿ ಕೆಳಮಟ್ಟದ ಕಾರುಗಳನ್ನು ನೀವು ಇನ್ನಷ್ಟು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದ್ದು, BYD ಸಂಪನ್ಮೂಲಗಳ ಮೂಲಕ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಕಾರುಗಳು ಬ್ಯಾಟರಿ ಕಾರಣದಿಂದಾಗಿ ಸ್ವಲ್ಪಮಟ್ಟಿಗೆ ಹೆವಿ ಆಗಿರುತ್ತವೆ. ಇನ್ನು ವೇರಿಯಂಟ್ ಲೋ ಎಂಡ್ ಗೆ ಹೋಗುತ್ತಿದ್ದಂತೆ ಇದರ ಸ್ಪೀಡ್ ಕೂಡ ಕಡಿಮೆಯಾಗುತ್ತದೆ. ಲೋ ಎಂಡ್ ವೇರಿಯಂಟ್ ನಲ್ಲಿ ಈ ಕಾರಿನ ಟಾಪ್ ಸ್ಪೀಡ್ 210 ರಿಂದ 265 km ಪ್ರತಿ ಗಂಟೆ ಆಗಿರುತ್ತದೆ.
ಇತರ ಪ್ರಮುಖ ಸುದ್ದಿಗಳು – Personal Loan: ಲೋನ್ ಮಾರುಕಟ್ಟೆ ತಲ್ಲಣ- ಲೋನ್ ಗೆ ಎಂಟ್ರಿ ಕೊಟ್ಟ ಟಾಟಾ- 35 ಲಕ್ಷದವರೆಗೂ ಲೋನ್ ನೀಡಲು ನಿರ್ಧಾರ.
Xiaomi SU7 EV ಕಾರಿನ ಮಾಸ್ ಪ್ರೊಡಕ್ಷನ್ ಇದೇ ಡಿಸೆಂಬರ್ ತಿಂಗಳಿಂದ ಪ್ರಾರಂಭ ಆಗಲಿದೆ ಎನ್ನುವಂತಹ ಸಂಪೂರ್ಣ ಮಾಹಿತಿ ಸಿಕ್ಕಿದೆ. ಪ್ರೊಡಕ್ಷನ್ ಪ್ರಾರಂಭವಾದ ಕೂಡಲೆ ಅಂದರೆ 2024ರ ಫೆಬ್ರವರಿಯಲ್ಲಿ ಕಾರುಗಳ ಡೆಲಿವರಿ ಕೂಡ ಪ್ರಾರಂಭವಾಗುತ್ತದೆ. ಈಗಾಗಲೇ ಚೀನಾದ ಬೀಜಿಂಗ್ ನಲ್ಲಿ ಇವುಗಳ ಪ್ರೊಡಕ್ಷನ್ ಪ್ರಾರಂಭವಾಗಿದ್ದು ಟೆಸ್ಟ್ ಕೂಡ ನಡೆಯುತ್ತಿದ್ದು ಸಕ್ಸಸ್ ಆಗಿರುವಂತಹ ಮಾಡೆಲ್ ಗಳನ್ನು ಪ್ರೊಡಕ್ಷನ್ ಗೆ ಮುಂದುವರೆಸಲಾಗುತ್ತಿದೆ ಎಂಬ ಮಾಹಿತಿ ಕೂಡ ಸಿಕ್ಕಿದೆ.
Xiaomi SU7 EV ಎಲೆಕ್ಟ್ರಿಕ್ ಕಾರು OS ಅನ್ನು ತನ್ನ ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಬಳಸಿಕೊಳ್ಳಲಿದೆ. ಸ್ಮಾರ್ಟ್ ಫೋನ್ ನಿರ್ಮಾಣ ಕಂಪನಿ ಕೂಡ ಇತ್ತೀಚಿಗಷ್ಟೇ ತನ್ನ ಸ್ಮಾರ್ಟ್ ಫೋನ್ ಗಳಿಗೆ Hyper OS ಅನ್ನು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಅನೌನ್ಸ್ ಮಾಡಿದ್ದನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಈ ಮೂಲಕ ಕಂಪನಿಯ ಸ್ಮಾರ್ಟ್ ಫೋನ್ ಗಳು ಕಾರಿನ ಜೊತೆಗೆ ಸಂಭಾಷಣೆಯನ್ನು ಕೂಡ ಮಾಡಬಹುದಾದಂತಹ ಅವಕಾಶವನ್ನು ನೀಡಲಾಗುತ್ತದೆ. ಪ್ರೊಡಕ್ಷನ್ ಹಾಗೂ ಲಾಂಚಿಂಗ್ ದಿನಾಂಕ ಹತ್ತಿರ ಬರುತ್ತಿದ್ದಂತೆ ಕಂಪನಿ ಕಾರಿನ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ.
Comments are closed.