Translate: ಫೋಟೋ ಅಲ್ಲಿ ಇರುವ ಅಕ್ಷರಗಳನ್ನು ಬದಲಾವಣೆ ಮಾಡುವುದು ಸುಲಭ- ಹೇಗೆ ಮಾಡುವುದು ಗೊತ್ತೇ?

How to use Google Image Translator and How to translate Images into text Explained below.

Translate: ನಮಸ್ಕಾರ ಸ್ನೇಹಿತರೆ ಗೂಗಲ್ ಟ್ರಾನ್ಸ್ಲೇಟರ್(Google Translator) ಎನ್ನುವುದು ನಿಜಕ್ಕೂ ಕೂಡ ಭಾವಚಿತ್ರಗಳಿಂದ ಅಕ್ಷರಗಳಿಗೆ ಟ್ರಾನ್ಸ್ಲೇಟ್ ಮಾಡೋದಕ್ಕೆ ಒಂದೊಳ್ಳೆ ಉಪಕರಣವಾಗಿ ಕಳೆದ ಸಾಕಷ್ಟು ಸಮಯಗಳಿಂದ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣ ಮಾಡುವಂತಹ ಪ್ರಯಾಣಿಕರಿಗೆ ಅಲ್ಲಿನ ಭಾಷೆ ಬಾರದೆ ಇದ್ದಾಗ ಈ ವಿಧಾನದ ಮೂಲಕ ಅಲ್ಲಿ ಸಂವಹನ ನಡೆಸುವುದು ಒಂದು ಲೆಕ್ಕದಲ್ಲಿ ವರದಾನವಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ Google image translator ವಿದೇಶಿ ನೆಲದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸಹಾಯವನ್ನು ಮಾಡುವಂತಹ ಕೆಲಸವನ್ನು ಮಾಡುತ್ತಿದೆ.

How to use Google Image Translator and How to translate Images into text Explained below.

ಇದು ಒಂದು ರೀತಿಯಲ್ಲಿ ಭಾಷೆಗಳ ಎಲ್ಲೆಯನ್ನು ಮೀರಿ ಭಾಷೆಗಳ ಜ್ಞಾನವನ್ನು ಪ್ರತಿಯೊಬ್ಬರಿಗೂ ಕೂಡ ತಿಳಿಸುವಂತಹ ಕೆಲಸವನ್ನು ಮಾಡುತ್ತಿದೆ. ಬೇರೆ ದೇಶದ ಹೋಟೆಲಗಳಿಗೆ ಹೋದಾಗ ಅಲ್ಲಿನ ಹೋಟೆಲ್ ಮೆನುಗಳನ್ನು ನೀವು ಟೆಕ್ಸ್ಟ್ ಮೂಲಕ ಟ್ರಾನ್ಸ್ಲೇಟ್ ಮಾಡಬಹುದಾಗಿದೆ. ಫೋನಿನ ಕ್ಯಾಮರಾದಲ್ಲಿ ಕ್ಯಾಪ್ಚರ್ ಮಾಡುವ ಮೂಲಕ ನೀವು ಈ ಟ್ರಾನ್ಸ್ಲೇಟ್ ಪ್ರಕ್ರಿಯೆಯನ್ನು ಮಾಡಬಹುದಾಗಿದೆ.

ಇತರ ಪ್ರಮುಖ ಸುದ್ದಿಗಳು – Bad Credit Loan: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕೂಡ ಲೋನ್ ಪಡೆದುಕೊಳ್ಳುವುದು ಹೇಗೆ? ಇದಕ್ಕಿಂತ ಸುಲಭ ಮತ್ತೊಂದಿಲ್ಲ.

ಫೋಟೋಗಳನ್ನು ಟ್ರಾನ್ಸ್ಲೇಟ್ ಮಾಡುವಂತಹ ಸುಲಭ ವಿಧಾನ- Translate Image into Text

ಗೂಗಲ್ ಟ್ರಾನ್ಸ್ಲೇಟರ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ತೆರೆಯಿರಿ. ಟ್ರಾನ್ಸ್ಲೇಟ್ ಮಾಡಬೇಕಾಗಿರುವಂತಹ ಎರಡು ಭಾಷೆಗಳನ್ನು ಆಯ್ಕೆ ಮಾಡಿ. ಕ್ಯಾಮೆರಾ ಅನ್ನು ಓಪನ್ ಮಾಡಿ ಹಾಗೂ ಯಾವ ಫೋಟೋದಿಂದ ನೀವು ಭಾಷೆಯನ್ನು ಟ್ರಾನ್ಸ್ಲೇಟ್ ಮಾಡಬೇಕು ಎಂಬುದನ್ನು ಕ್ಯಾಪ್ಚರ್ ಮಾಡಿ. ಗೂಗಲ್ ಟ್ರಾನ್ಸ್ಲೇಟರ್ ಕೂಡಲೆ ನೀವು ಸೆರೆಹಿಡಿದಿರುವಂತಹ ಫೋಟೋವನ್ನು ನಿಮಗೆ ಬೇಕಾಗಿರುವಂತಹ ಭಾಷೆಯಲ್ಲಿ ಟ್ರಾನ್ಸ್ಲೇಟ್ ಮಾಡುತ್ತದೆ. ಇನ್ನು ನಿಮ್ಮ ಕೈಬೆರಳಿನ ಮೂಲಕ ನೀವು ಯಾವ ಭಾಗ ಟ್ರಾನ್ಸ್ಲಟ್ ಆಗಬೇಕು ಎನ್ನುವುದನ್ನು ಕೂಡ ಪ್ರತ್ಯೇಕವಾಗಿ ಗುರುತು ಮಾಡಬಹುದಾಗಿದೆ.

How to use Google Image Translator and How to translate Images into text Explained below.
How to use Google Image Translator and How to translate Images into text Explained below.

ಉತ್ತಮ ಟ್ರಾನ್ಸ್ಲೇಷಣೆಗಾಗಿ ಟಿಪ್ಸ್- tips for better translation

ನೀವು ಟ್ರಾನ್ಸ್ಲೇಟ್ ಮಾಡಬೇಕು ಎಂದಿರುವಂತಹ ಫೋಟೋ ಸರಿಯಾದ ರೀತಿಯಲ್ಲಿ ಕಾಣುತ್ತಿರಬೇಕು ಹಾಗೂ ಬೆಳಕು ಬೀಳುವ ರೀತಿಯಲ್ಲಿ ಹಾಗೂ ಅವುಗಳ ಅಕ್ಷರ ಕಾಣುತ್ತಿರಬೇಕು. ಹೈ ಕ್ವಾಲಿಟಿ ಕ್ಯಾಮೆರಾ ಬಳಸುವುದು ಒಳ್ಳೆಯದು. ಫೋಟೋವನ್ನು ಕ್ರಾಪ್ ಮಾಡುವ ಮೂಲಕ ನಿಮಗೆ ಬೇಕಾಗುವಂತಹ ಭಾಗವನ್ನು ಕೇಂದ್ರೀಕರಿಸಬಹುದು. ಒಂದು ವೇಳೆ ಫೋಟೋದ ಮೇಲೆ ಕಾಣಿಸಿಕೊಳ್ಳುತ್ತಿರುವಂತಹ ಟೆಕ್ಸ್ಟ್ ಬ್ಲರ್ ಆಗಿದ್ದರೆ ಆ ಸಂದರ್ಭದಲ್ಲಿ ಜೂಮ್ ಮಾಡಿ. Detect Language ಆಯ್ಕೆಯ ಮೂಲಕ ನೀವು ಭಾಷೆಯನ್ನು ಕೂಡ ಮ್ಯಾನುವಲ್ ಆಗಿ ಬದಲಾಯಿಸಬಹುದಾಗಿದೆ. (Refer this steps from Google)

ಇನ್ನು ಗೂಗಲ್ ಈ ಸರ್ಚ್ ವಿಚಾರದಲ್ಲಿ ಅಮೆರಿಕ ಹಾಗೂ ಭಾರತದ ಬಳಕೆದಾರರಿಗೆ ಸರ್ಚ್ ಫೀಚರ್ನಲ್ಲಿ Notes ಎನ್ನುವಂತಹ ಹೊಸ ವಿಶೇಷ ಆಪ್ಷನ್ ಅನ್ನು ಕೂಡ ಪರಿಚಯಿಸಿದೆ. ಯಾವ ರೀತಿಯಲ್ಲಿ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ಎಡಿಟ್ ಮಾಡಬಹುದೋ ಅದೇ ರೀತಿ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಆ ಜನರು ಸರಿಯಾದ ಮಾಹಿತಿಯನ್ನು ಹೊಂದಿದ್ದರೆ ಎಡಿಟ್ ಮಾಡುವ ಮೂಲಕ ಪರಸ್ಪರರಿಗೆ ಸಹಾಯ ಮಾಡುವಂತಹ ಫೀಚರ್ ಅನ್ನು ಈ ಮೂಲಕ ಪರಿಚಯಿಸಲಾಗುತ್ತಿದೆ.

Comments are closed.