Credit Card Tips: ನೀವು ಪಡೆಯುವ ಕ್ರೆಡಿಟ್ ಕಾರ್ಡ್ ಅಪ್ಪಿ ತಪ್ಪಿ ಈ 5 ಜಾಗಗಲ್ಲಿ ಬಳಸಬೇಡಿ. ಈ ಜಾಗಳಲ್ಲಿ ಬಳಸಿದರೆ ಅಷ್ಟೇ ಕಥೆ.
Credit Card Tips: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುವವರು ತಮ್ಮ ಅಗತ್ಯಗಳಿಗೆ ತಕ್ಕಂತೆ ಕ್ರೆಡಿಟ್ ಕಾರ್ಡ್(Credit Card) ಹಾಗೂ ಡೆಬಿಟ್ ಕಾರ್ಡ್ಗಳನ್ನು ಹೊಂದಿರುತ್ತಾರೆ. ಅದರಲ್ಲಿ ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಅನ್ನು ಯಾವುದಾದರೂ ವಸ್ತುಗಳನ್ನು ಖರೀದಿಸಬೇಕು ಎಂದರೆ ಸಾಲರೂಪದಲ್ಲಿ ಬಳಸುತ್ತಾರೆ. ಆದರೆ ಎಕ್ಸ್ಪರ್ಟ್ ಗಳು ಹೇಳುವ ಪ್ರಕಾರ ಈ ಐದು ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಕೂಡ ಕ್ರೆಡಿಟ್ ಕಾರ್ಡ್ಗಳನ್ನು ಬಳಸಬಾರದು ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ರೆ ಬನ್ನಿ ಆ ಐದು ಸ್ಥಳಗಳು ಯಾವುವು ಹಾಗೂ ಯಾವ ಕಾರಣಕ್ಕಾಗಿ ಕ್ರೆಡಿಟ್ ಕಾರ್ಡ್ ಅನ್ನು ಅಲ್ಲಿ ಬಳಸಬಾರದು ಎನ್ನುವುದನ್ನು ತಿಳಿದುಕೊಳ್ಳೋಣ.
Credit Card Tips- ಈ 5 ಸ್ಥಳಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಅಪ್ಪಿತಪ್ಪಿಯೂ ಬಳಸಬೇಡಿ- Do not use your Credit cars in these places
- Petrol pump: ಪೆಟ್ರೋಲ್ ಪಂಪ್ ನಲ್ಲಿ ಯಾವುದೇ ಕಾರಣಕ್ಕೂ ಕೂಡ ಇಂಧನವನ್ನು ತುಂಬಿಸುವಾಗ ಹಣವನ್ನು ನೀಡುವ ಬದಲು ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಚುಕ್ತಾ ಮಾಡುವ ಕೆಲಸವನ್ನು ಮಾಡೋದಕ್ಕೆ ಹೋಗ್ಬೇಡಿ. ಯಾಕೆಂದ್ರೆ ಈ ಸಂದರ್ಭದಲ್ಲಿ ಒಟ್ಟಾರೆ ಹಣದ ಒಂದು ಪ್ರತಿಶತ ಹಣವನ್ನು ನೀವು extra service charge ರೂಪದಲ್ಲಿ ಹಣವನ್ನು ಬ್ಯಾಂಕ್ ಪಡೆಯುತ್ತೆ ಹಾಗೂ ಆ ಹಣದ ಮೇಲೆ ಕೂಡ ಏಳು ಪ್ರತಿಶತ ಜಿಎಸ್‌ಟಿ ಚಾರ್ಜ್ ಅನ್ನು ಪಡೆದುಕೊಳ್ಳಲಾಗುತ್ತದೆ.
- Train ticket booking: ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬರು ಕೂಡ ಹೆಚ್ಚಾಗಿ ರೈಲ್ವೆ ಪ್ರಯಾಣವನ್ನು ತಮ್ಮ ಪ್ರಮುಖವಾದ ಪ್ರಯಾಣದ ಮೂಲವನ್ನಾಗಿ ಆಯ್ಕೆ ಮಾಡುತ್ತಾರೆ. ಇನ್ನು ಸಾಕಷ್ಟು ಜನರು ಟಿಕೆಟ್ ಬುಕ್ ಮಾಡುವಾಗ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು. ಆ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಏನಂದರೆ ಕ್ರೆಡಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಇಲ್ಲಿ ಕೂಡ ಒಂದು ಪ್ರತಿಶತ ಸರ್ವಿಸ್ ಚಾರ್ಜ್ ಅನ್ನು ನೀಡಬೇಕಾಗುತ್ತದೆ.
- ATM cash withdrawal : ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುವಂತಹ ಪ್ರತಿಯೊಬ್ಬರೂ ಕೂಡ ತಮ್ಮ ಎಟಿಎಂ ಕಾರ್ಡ್ ಮೂಲಕ ಹಣವನ್ನು ಪಡೆದುಕೊಳ್ಳುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಎಟಿಎಂ ಕಾರ್ಡ್ ಅನ್ನು ಹೊಂದಿಲ್ಲದೆ ಹೋದಲ್ಲಿ ಅಥವಾ ಎಟಿಎಂ ಖಾತೆಯಲ್ಲಿ ಹಣ ಇಲ್ಲದೆ ಹೋದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಡೆದುಕೊಳ್ಳುವುದು ಕೂಡ ಎಟಿಎಂನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಕೂಡ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತದೆ.
- ವ್ಯಾಲೆಂಟ್ ಗಳಲ್ಲಿ ಹಣವನ್ನು ತುಂಬಿಸುವುದು: ಸಾಕಷ್ಟು ಸಂದರ್ಭದಲ್ಲಿ ನಾವು ಪೇಟಿಎಂ, ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ವಾಲೆಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ತುಂಬಿಸುವ ಸಂದರ್ಭದಲ್ಲಿ ಹೆಚ್ಚಿನ ಟ್ಯಾಕ್ಸ್ ಅನ್ನು ಕಟ್ಟಬೇಕಾಗುತ್ತದೆ. ಇದು ಕೂಡ ನೀವು ಪಡೆದುಕೊಳ್ಳುವಂತಹ ಹಣಕ್ಕೆ ಹೆಚ್ಚಿನ ಹಣವನ್ನು ನೀಡಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ.
- ಕ್ರೆಡಿಟ್ ಕಾರ್ಡ್ ನಿಂದ ಕ್ರೆಡಿಟ್ ಕಾರ್ಡ್ ಗೆ ಹಣ ಟ್ರಾನ್ಸ್ಫರ್: ಸಾಕಷ್ಟು ಸಂದರ್ಭದಲ್ಲಿ ಒಂದು ಕ್ರೆಡಿಟ್ ಕಾರ್ಡ್ ನಲ್ಲಿ ಲಿಮಿಟ್ ಇಲ್ಲ ಎಂದಾದಲ್ಲಿ ಆ ಸಂದರ್ಭದಲ್ಲಿ ಒಂದು ಕ್ರೆಡಿಟ್ ಕಾರ್ಡ್ ನಿಂದ ಇನ್ನೊಂದು ಕ್ರೆಡಿಟ್ ಕಾರ್ಡ್ ಗೆ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಿದಲ್ಲಿ, ಆ ಸಂದರ್ಭದಲ್ಲಿ ನೀವು ದುಪ್ಪಟ್ಟು ಹೆಚ್ಚಿನ ಹಣವನ್ನು ಶುಲ್ಕ ರೂಪದಲ್ಲಿ ಭರಿಸಬೇಕಾಗುತ್ತದೆ. ಹೀಗಾಗಿಯೇ ಇವಿಷ್ಟು ಸ್ಥಳಗಳಲ್ಲಿ ಅಥವಾ ಟ್ರಾನ್ಸಾಕ್ಷನ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಯಾವತ್ತೂ ಕೂಡ ಬಳಸಬೇಡಿ.
Comments are closed.