Get Loan: ಆಧಾರ್,PAN ತೋರಿಸಿದ್ರೆ ಸಾಕು 10 ರಿಂದ 50 ಸಾವಿರ ರೂಪಾಯಿ ಸಾಲ ಕೊಡ್ತಾರೆ- ನೇರವಾಗಿ ಬ್ಯಾಂಕ್ ಖಾತೆಗೆ.

Get Loan guide in Kannada

Get Loan: ನಮಸ್ಕಾರ ಸ್ನೇಹಿತರೇ, ಭಾರತೀಯ ಸರ್ಕಾರ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಒಬ್ಬ ಭಾರತೀಯನಾಗಿ ನಾವು ನಮ್ಮನ್ನು ಸಾಬೀತು ಪಡಿಸಿಕೊಳ್ಳಲು ಆಧಾರ್ ಕಾರ್ಡ್(Aadhar Card) ಎನ್ನುವಂತಹ ಪ್ರಮುಖ ಗುರುತು ಪತ್ರವನ್ನು ನೀಡಿದೆ. ನಮ್ಮ ಗುರುತನ್ನು ಸಾಬೀತುಪಡಿಸಲು ಈ ಕಾರ್ಡ್ ಅನ್ನು ಬಳಸುವುದರಿಂದ ಹಿಡಿದು ಪ್ರತಿಯೊಂದು ಸರ್ಕಾರಿ ಕೆಲಸಗಳಿಗೆ ಹಾಗೂ ಯೋಜನೆಗಳಿಗೆ ಕೂಡ ಆಧಾರ್ ಕಾರ್ಡ್ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಸರ್ಕಾರಿ ದಾಖಲೆಯಾಗಿದೆ.

ಆದರೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಆಧಾರ್ ಕಾರ್ಡ್ ಬಳಸಿಕೊಂಡು ಯಾವ ರೀತಿಯಲ್ಲಿ 10,000 ಗಳಿಂದ 50,000ಗಳವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ನಿಮಗೆ ವಿವರಿಸಲು.

Get Loan guide in Kannada
Get Loan guide in Kannada

ಆಧಾರ್ ಕಾರ್ಡ್ ಮೂಲಕ ಲೋನ್- How to get Loan

ಆಧಾರ್ ಕಾರ್ಡ್ ಅನ್ನು ಬಳಸಿಕೊಳ್ಳುವ ಮೂಲಕ ಸರ್ಕಾರದಿಂದ ಜಾರಿಗೆ ಬಂದಿರುವಂತಹ ಸಾಕಷ್ಟು ಯೋಜನೆಗಳ ಮೂಲಕ ಕೂಡ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಮೂಲಕ ಕೂಡ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ಮೂಲಕ ಪಡೆದುಕೊಳ್ಳುವಂತಹ ಲೋನ್ ಅನ್ನು ನೀವು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಅವುಗಳ ಅರ್ಹತೆಗೆ ತಕ್ಕಂತೆ ಡಾಕ್ಯುಮೆಂಟ್ ಗಳನ್ನು ನೀವು ಒದಗಿಸಬೇಕಾಗುತ್ತದೆ ಹಾಗೂ ನಿಮ್ಮಲ್ಲಿ ಲೋನ್ ಪಡೆದುಕೊಳ್ಳುವಂತಹ ಕ್ರೆಡಿಟ್ ಸ್ಕೋರ್ ಅರ್ಹತೆ ಕೂಡ ಇರಬೇಕಾಗಿರುತ್ತದೆ.

ಇದನ್ನು ಕೂಡ ಓದಿ: Instant Personal Loan: ಜಸ್ಟ್ 3 ಲಕ್ಷ ಲೋನ್ ಸಾಕು ಎಂದರೆ- ತಕ್ಷಣ ಅರ್ಜಿ ಹಾಕಿ- 120 ನಿಮಿಷದಲ್ಲಿ ಬ್ಯಾಂಕ್ ಖಾತೆಗೆ, ಅಡಮಾನ ಕೂಡ ಬೇಡ.

ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Loan

 1. ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಮೊದಲಿಗೆ ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು ಅಂದ್ರೆ ನೀವು ಭಾರತೀಯರಾಗಿರಬೇಕು.
 2. ನೀವು ವ್ಯಾಪಾರಿ ಅಥವಾ ಉದ್ಯೋಗಿ ಆಗಿರಬೇಕು.
 3. ಸಿಬಿಲ್ ಸ್ಕೋರ್ ವಿಚಾರಕ್ಕೆ ಬಂದ್ರೆ 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇರಬೇಕು.
 4. ಈ ಹಿಂದೆ ಯಾವುದೇ ಲೋನ್ ಕಟ್ಟಲು ಸಾಧ್ಯವಾಗಿದೆ ಡೀಫಾಲ್ಟರ್ ಆಗಿರಬಾರದು.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Required documents to get Loan

 1. ಪ್ರಮುಖವಾಗಿ ನಿಮ್ಮ ಬಳಿ ಬ್ಯಾಂಕ್ ಖಾತೆ ಇರಬೇಕು ಹಾಗೂ ಅದರ ಜೊತೆಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಡಾಕ್ಯೂಮೆಂಟ್ ಗಳು ಇರಬೇಕು.
 2. ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಬೇಕು.
 3. ಇಮೇಲ್ ಐಡಿ ಸೇರಿದಂತೆ ಸಾಲಕ್ಕೆ ತಕ್ಕನಾಗಿ ಬೇಕಾಗಿರುವಂತಹ ಕೆಲವೊಂದು ದಸ್ತಾವೇಜುಗಳು ಬೇಕಾಗಿರುತ್ತದೆ.

ಆಧಾರ್ ಕಾರ್ಡ್ ಮೂಲಗಳು ಪಡೆದುಕೊಳ್ಳಲು ನೀವು ಅನುಸರಿಸ ಬೇಕಾಗಿರುವ ಪ್ರಕ್ರಿಯೆಗಳು- How to apply for a Loan

 1. ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಅಡಿಯಲ್ಲಿ ನೀವು ಆಧಾರ್ ಕಾರ್ಡ್ ಬಳಸಿಕೊಳ್ಳುವ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದ್ದು ಮೊದಲಿಗೆ ಇದರ ಅಧಿಕೃತ ವೆಬ್ಸೈಟ್ಗೆ ಹೋಗಿ ಲಾಗಿನ್ ಆಗ್ಬೇಕು.
 2. ಹೋಂ ಪೇಜ್ ನಲ್ಲಿ ನಿಮಗೆ 10 20 ಹಾಗೂ 50,000 ರೂಪಾಯಿಗಳ ಲೋನ್ ಆಯ್ಕೆ ಮಾಡುವಂತಹ ಆಪ್ಷನ್ ಸಿಗುತ್ತದೆ.
 3. ನಿಮ್ಮ ಮೊಬೈಲ್ ನಂಬರ್ ಅನ್ನು ದಾಖಲಿಸಿ, ಅದರಿಂದ ಬರುವಂತಹ ಓಟಿಪಿಯನ್ನು ಸಬ್ಮಿಟ್ ಮಾಡುವ ಮೂಲಕ ನೀವು ಮುಂದಿನ ಪ್ರಕ್ರಿಯೆಯನ್ನು ಮುಂದುವರಿಸಬಹುದು.
 4. ಮುಂದಿನ ಪುಟದಲ್ಲಿ ಲೋನ್ ಅರ್ಜಿ ಸಲ್ಲಿಸುವಂತಹ ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ತುಂಬಿ ಹಾಗೂ ಡಾಕ್ಯುಮೆಂಟ್ ಗಳನ್ನು ಕೂಡ ನೀಡಬೇಕಾಗಿರುತ್ತದೆ.
 5. ಸಬ್ಮಿಟ್ ಮಾಡಿದ ನಂತರ ಅಲ್ಲಿಂದ ನಿಮಗೆ ಒಂದು ರಶೀದಿ ಸಿಗುತ್ತದೆ ಅದನ್ನು ಡೌನ್ಲೋಡ್ ಮಾಡಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಕೆಲವೇ ಸಮಯಗಳಲ್ಲಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿರುತ್ತದೆ.

ಈ ಮೂಲಕ ನೀವು ಆಧಾರ್ ಕಾರ್ಡ್ ಅನ್ನು ಬಳಸಿಕೊಳ್ಳುವ ವಿಧಾನದಿಂದ ಲೋನ್ ಪಡೆದುಕೊಳ್ಳಬಹುದಾಗಿದೆ.

Comments are closed.