Kannada Horoscope: ಇನ್ನು ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ- ಬೆಳ್ಳಿ ಪಾದಗಳ ಮೇಲೆ ನಡೆದು ಶನಿ ದೇವನೇ ಕಾಪಾಡಲಿದ್ದಾನೆ.
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಕಷ್ಟು ವಿಚಾರಗಳು ಆಯಾಯ ರಾಶಿಯವರ ಜೀವನದ ಘಟನೆಗಳನ್ನು ನಿರ್ಧರಿಸುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಇವತ್ತಿನ ಲೇಖನಿಯಲ್ಲಿ ನ್ಯಾಯಾಧಾತ ಎಂದು ಕರೆಸಿಕೊಳ್ಳುವಂತಹ ಶನಿಗ್ರಹದ ಬಗ್ಗೆ ಹೇಳಲು ಹೊರಟಿದ್ದೇವೆ. ಸಾಮಾನ್ಯವಾಗಿ ಜನರು ಶನಿಯ ಬಗ್ಗೆ ತಪ್ಪಾದ ಕಲ್ಪನೆಯನ್ನು ಹೊಂದಿದ್ದಾರೆ. ಶನಿ ಕಷ್ಟವನ್ನು ನೀಡುತ್ತಾನೆ ಎಂಬುದಾಗಿ ಹೇಳುತ್ತಾರೆ ಆದರೆ ಶನಿ ಕರ್ಮಗಳಿಗೆ ಅನುಸಾರವಾಗಿ ಫಲವನ್ನು ನೀಡುತ್ತಾನೆ.
ಒಂದೇ ರಾಶಿಯಲ್ಲಿ ಶನಿ ಎರಡುವರೆ ವರ್ಷಗಳ ಕಾಲ ಇರುತ್ತಾನೆ. ಈ ಸಂದರ್ಭದಲ್ಲಿ ನೋಡುವುದಾದರೆ ಶನಿ 2023 ರಿಂದಲೂ ಕೂಡ ಕುಂಭ ರಾಶಿಯಲ್ಲಿ ಇದ್ದು 2024ರಲ್ಲಿ ಕೂಡ ಕುಂಭ ರಾಶಿಯಲ್ಲಿಯೇ ಇರಲಿದ್ದಾನೆ. ಆದರೆ ಈ ಸಂದರ್ಭದಲ್ಲಿ ತನ್ನ ಬೆಳ್ಳಿಯ ಪಾದಗಳ ಮೇಲೆ ಶನಿ ನಡೆಯಲು ಪ್ರಾರಂಭಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ಬೆಳ್ಳಿ ಪಾದಗಳ ಮೇಲಿನ ನಡಿಗೆಯನ್ನು ಅತ್ಯಂತ ಶುಭಕರ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಕಾರಣದಿಂದಲೇ ಈ ಮೂರು ರಾಶಿಯವರಿಗೆ ಇದು ಶುಭಕರವಾಗಿ ಪರಿಣಮಿಸಲಿದ್ದು ಬನ್ನಿ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
ಕರ್ಕ ರಾಶಿ(Cancer)
ಕರ್ಕ ರಾಶಿಯವರಿಗೆ ಶನಿ ದೇವರ ಬೆಳ್ಳಿ ಪಾದದ ನಡುವೆ ಎನ್ನುವುದು ಸಾಕಷ್ಟು ಅದೃಷ್ಟವನ್ನು ತರಲಿದ್ದು ಕೆಲಸದಲ್ಲಿ ಅವರಿಗೆ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕೂಡ ನಡೆಯಲಿದೆ ಎಂದು ಹೇಳಬಹುದು. ತಾವು ಮಾಡುತ್ತಿರುವಂತಹ ಕೆಲಸದಲ್ಲಿ ಉನ್ನತ ಸ್ಥಾನವನ್ನು ಇರುವಂತಹ ಪ್ರತಿಯೊಂದು ಅವಕಾಶಗಳು ಕೂಡ ಕರ್ಕ ರಾಶಿಯವರನ್ನು ಹುಡುಕಿಕೊಂಡು ಬರುತ್ತದೆ. ವ್ಯಾಪಾರ ಮಾಡುತ್ತಿರುವವರಿಗೂ ಕೂಡ ಲಾಭದ ದರ್ಶನ ಕಂಡು ಬರಲಿದೆ. ಸಮಯಕ್ಕೆ ಸರಿಯಾಗಿ ಅನಿರೀಕ್ಷಿತ ಹಣದ ಹರಿವು ಕೂಡ ನಿಮ್ಮ ಜೀವನದಲ್ಲಿ ಕಂಡು ಬರಲಿದೆ. ಸಾಕಷ್ಟ ಸಮಯಗಳಿಂದ ನೀವು ಕನಸು ಕಾಣುತ್ತಿರುವಂತಹ ಆಸೆ ಕೂಡ ಈಡೇರಲಿದೆ.
ತುಲಾ ರಾಶಿ(Libra)
ಈ ಸಂದರ್ಭದಲ್ಲಿ ತುಲಾ ರಾಶಿಯವರು ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡುವಂತಹ ಅದೃಷ್ಟ ಒದಗಿ ಬರಲಿದೆ. ಸಮಾಜದಲ್ಲಿ ಎಲ್ಲರೂ ಗೌರವ ನೀಡುವಂತಹ ಜೀವನ ಶೈಲಿಯನ್ನು ನೀವು ನಡೆಸಲಿದ್ದೀರಿ. ಎಲ್ಲರಿಂದಲೂ ನಿಮಗೆ ಸಿಗುವಂತಹ ಪ್ರೀತಿ ಗೌರವ ಹೆಚ್ಚಾಗಲಿದ್ದು ಕೆಲಸದಲ್ಲಿ ಕೂಡ ಉತ್ತಮ ಬದಲಾವಣೆಗಳು ಕಂಡುಬರಲಿವೆ. ನಿಮ್ಮ ಸಂಗಾತಿ ಕೂಡ ನಿಮ್ಮ ಮೇಲೆ ಇರುವಂತಹ ಪ್ರೀತಿಯನ್ನು ಹೆಚ್ಚಿಸಲಿದ್ದಾರೆ. ನಿಮ್ಮ ಎಲ್ಲಾ ಕೆಲಸಗಳಿಗೂ ಬೆಂಬಲವಾಗಿ ನಿಲ್ಲಲಿದ್ದಾರೆ.
ಮೀನ ರಾಶಿ(Pisces)
ಕೆಲಸಕ್ಕಾಗಿ ಕಾಯುತ್ತಿರುವ ಮೀನ ರಾಶಿಯವರಿಗೆ ಹೊಸ ಕೆಲಸ ಸಿಗಲಿದೆ ಹಾಗೂ ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಸಿಗಲಿದೆ. ಸಾಕಷ್ಟು ವರ್ಷಗಳಿಂದ ವಿದೇಶಕ್ಕೆ ಹೋಗುವಂತಹ ಕನಸು ಕೂಡ ಈ ಸಂದರ್ಭದಲ್ಲಿ ನನಸಾಗುವ ಸಾಧ್ಯತೆ ಹೆಚ್ಚಾಗಿದೆ. ಶನಿ ದೇವರ ಬೆಳ್ಳಿ ಪಾದದ ನಡಿಗೆ ಮೀನ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಂಭ್ರಮವನ್ನು ತರಲಿದೆ.
Comments are closed.