Rashmika mandanna: ರಶ್ಮಿಕಾ ನಾಚಿಕೊಂಡ್ರು ಎಷ್ಟು ಚೆಂದ- ವಿಜಯ್ ಹೆಸರು ಕೇಳಿದ್ದೆ ರಶ್ಮಿಕಾ ನಾಚಿಕೊಂಡ ರೀತಿ ನೋಡಿ ಮತ್ತೆ ಆಯಿತು ಲವ್.
Rashmika mandanna: ನಮಸ್ಕಾರ ಸ್ನೇಹಿತರೆ ಕರ್ನಾಟಕ ಮೂಲದ ನಾಯಕ ನಟಿ ಆಗಿರುವಂತಹ ರಶ್ಮಿಕ ಮಂದಣ್ಣ(Rashmika Mandanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಬ್ಬ ನಾಯಕನಟಿಯಾಗಿ ಯಾವ ರೀತಿಯಲ್ಲಿ ಬಹುಭಾಷೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧರಾಗಿದ್ದಾರೆ ಎಂದು. ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿ ನಂತರ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡ ರಶ್ಮಿಕ ಮಂದಣ್ಣ ಈಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.
ಸದ್ಯದ ಮಟ್ಟಿಗೆ ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್(Ranbir Kapoor) ಅವರ ಜೊತೆಗೆ ನಾಯಕನಟಿಯಾಗಿ ಕಾಣಿಸಿಕೊಂಡಿರುವಂತಹ ಅನಿಮಲ್ ಸಿನಿಮಾದ ಬಿಡುಗಡೆಗೆ ಕಾತರರಾಗಿದ್ದಾರೆ. ಸಿನಿಮಾದ ಟ್ರೈಲರ್ ಹಾಗೂ ಸಾಂಗ್ ಗಳು ಈಗಾಗಲೇ ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಇನ್ನಷ್ಟು ಹೆಚ್ಚಿನ ಆಸಕ್ತಿಯನ್ನು ಹುಟ್ಟಿಸಿದೆ. ಸಿನಿಮಾದ ಪ್ರಮೋಷನ್ ಕಾರ್ಯ ಭರದಿಂದ ಸಾಗುತ್ತಿದೆ.
ಇನ್ನು ಇದೇ ಕಾರಣಕ್ಕಾಗಿ ತೆಲುಗು ಕಿರುತೆರೆಯ UNSTOPPABLE WITH NBK (Promo Link) ಕಾರ್ಯಕ್ರಮದಲ್ಲಿ ಕೂಡ ಸಿನಿಮಾದ ಪ್ರಮೋಷನ್ ಅನ್ನು ಮಾಡಲಾಗಿದೆ. ಈ ಕಾರ್ಯಕ್ರಮವನ್ನು ತೆಲಗು ಚಿತ್ರರಂಗದ ಲೆಜೆಂಡ್ ನಟ ಆಗಿರುವಂತಹ ಬಾಲಯ್ಯ ನಡೆಸಿಕೊಡುತ್ತಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿರುವಂತಹ ಸಾಕಷ್ಟು ತೆಲುಗು ನಟರು ಕೂಡ ರಶ್ಮಿಕ ಮಂದಣ್ಣ ಅವರನ್ನು ತಮ್ಮ ಕೃಷ್ ಎಂಬುದಾಗಿ ಕರೆದುಕೊಂಡಿದ್ದಾರೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ. ಇನ್ನು ಈ ಕಾರ್ಯಕ್ರಮ ಆಹಾ ಓ ಟಿ ಟಿ ಅಪ್ಲಿಕೇಶನ್ ನಲ್ಲಿ ಪ್ರದರ್ಶನ ಕಾಣುತ್ತದೆ.
ಇದನ್ನು ಕೂಡ ಓದಿ: Electric vehicle Offer : ಕೇವಲ 28000 ಸಾವಿರ ರುಪಾಯಿಗೆ ಎಲೆಕ್ಟ್ರಿಕ್ ಬೈಕ್ ಮಾರಾಟ- ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಾ.
ಇನ್ನು ಈ ಕಾರ್ಯಕ್ರಮಕ್ಕೆ ಬಂದ ಅನಿಮಲ್ ಸಿನಿಮಾದ ನಾಯಕನಟ ಆಗಿರುವ ರಣಬೀರ್ ಕಪೂರ್ ಅವರನ್ನು ಕೂಡ ಬಾಲಯ್ಯ ಕಪೂರ್ ಕುಟುಂಬದ ಹೆಮ್ಮೆ ಎನ್ನುವ ರೀತಿಯಲ್ಲಿ ಹೊಗಳುತ್ತಾರೆ ಎಂಬುದನ್ನು ಕೂಡ ನಾವು ಇಲ್ಲಿ ತಿಳಿದುಕೊಳ್ಳಬಹುದು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ(Vijay Deverakonda) ರಶ್ಮಿಕ ಮಂದಣ್ಣ ಅವರಿಗೆ ಕಾಲ್ ಮಾಡಿರುತ್ತಾರೆ.
ಆ ಸಂದರ್ಭದಲ್ಲಿ ಅವರು ರಶ್ಮಿಕ ಮಂದಣ್ಣ ಅವರನ್ನು ವಾಟ್ಸ ಅಪ್ ಕೃಷ್ ಎಂಬುದಾಗಿ ಕರೆದಾಗ ಅವರು ನಾಚಿರುವ ವಿಡಿಯೋ ತುಣುಕುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿದ್ದಾವೆ. ಇನ್ನು ಅನಿಮಲ್ ಸಿನಿಮಾ ಇದೇ ಡಿಸೆಂಬರ್ ಒಂದಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು ನಿರ್ದೇಶನವನ್ನು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಮಾಡಿದ್ದಾರೆ.
Comments are closed.