Bigg boss Kannada 10: ಐಶಾನಿ, ಭಾಗ್ಯಶ್ರೀ ಅಲ್ಲ ಮೊದಲು ಈತ ಹೊರಹೋಗಬೇಕು ಎಂದ ಪ್ರೇಕ್ಷಕರು.
Bigg boss Kannada 10: ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್(Biggboss ) ಸಾಕಷ್ಟು ಕಾರಣಗಳಿಗಾಗಿ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಲು ಕಾರಣವಾಗುತ್ತಿದೆ. ಬೇರೆ ಬೇರೆ ಕಂಟೆಸ್ಟೆಂಟ್ಗಳು ನಡೆದುಕೊಳ್ಳುವ ರೀತಿ ಹಾಗೂ ಅದರಿಂದ ಕ್ರಿಯೇಟ್ ಆಗುತ್ತಿರುವಂತಹ ಪರಿಸ್ಥಿತಿಗಳನ್ನು ನೋಡಲು ಪ್ರತಿದಿನ ಬಿಗ್ ಬಾಸ್ ಪ್ರೇಕ್ಷಕರು ಟಿವಿಯ ಮುಂದೆ ಜಾತಕ ಪಕ್ಷಿಗಳಂತೆ ಕಾದು ಕುಳಿತು ನೋಡುತ್ತಿದ್ದಾರೆ. ಸದಾ ಕಾಲ ಹೈಡ್ರಾಮಗಳ ಮೂಲಕವೇ ಸುದ್ದಿಯಲ್ಲಿರುವಂತಹ ಈ ಕಾರ್ಯಕ್ರಮ ಈ ಬಾರಿ ಕೂಡ ಆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಬಹುದಾಗಿದೆ.
ಇದನ್ನು ಕೂಡ ಓದಿ; Allu Arvind: ರಾಮಾಚಾರಿ ನೋಡಿ ಭೇಷ್ ಎಂದಿದ್ದ ಅಲ್ಲೂ ಅರ್ಜುನ್ ಅಪ್ಪ, ಯಶ್ ಬಗ್ಗೆ ಉಲ್ಟಾ ಹೇಳಿಕೆ. ಯಶ್ ಫ್ಯಾನ್ಸ್ ಗರಂ
Bigg boss Kannada 10 Latest News and Updates- Audience reactions about snehith
ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ (Bigg boss Kannada 10) ಸದ್ಯಕ್ಕೆ ನಡೆಯುತ್ತಿರುವಂತಹ ಎಪಿಸೋಡ್ ಗಳ ಪ್ರಕಾರ ವಿನಯ್ ಹಾಗೂ ಟೀಮ್ ಭಾಗ್ಯಶ್ರೀ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕುವಂತಹ ಟಾರ್ಗೆಟ್ ಮಾಡಿಕೊಂಡಿದೆ ಎಂಬುದಾಗಿ ತಿಳಿದು ಬರುತ್ತಿದೆ. ವಿನಯ್ ಹಾಗೂ ಅವರ ಟೀಮ್ ಭಾಗ್ಯಶ್ರೀ ಅವರನ್ನೇ ಟಾರ್ಗೆಟ್ ಮಾಡುತ್ತಿದೆ ಎನ್ನುವುದು ಪದೇಪದೇ ಸಾಬೀತಾಗುತ್ತಿದೆ. ವಿನಯ್ ಅವರ ತಂಡದ ಸದಸ್ಯರಾಗಿ ಕಾಣಿಸಿಕೊಂಡಿರುವ ಮೈಕಲ್ ಈ ಬಾರಿ ತಮ್ಮ ನಾಯಕತ್ವದ ಪವರ್ ಅನ್ನು ಬಳಸಿಕೊಂಡು ಭಾಗ್ಯಶ್ರೀ(Bhagyashree ) ಅವರನ್ನೇ ನಾಮಿನೇಟ್ ಮಾಡಿದ್ರು.

ಈಗ ಕಳಪೆ ಬೋರ್ಡ್ ಅನ್ನು ನೀಡುವಾಗಲು ಕೂಡ ವಿನಯ್ ಅವರ ತಂಡದ ಮತ್ತೊಬ್ಬ ಸದಸ್ಯ ಆಗಿರುವಂತಹ ಸ್ನೇಹಿತ್ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಿ ನೀಡಿದ್ದಾರೆ. ಕಳಪೆ ಬೋರ್ಡ್ ನೀಡುವುದಕ್ಕೆ ಕಾರಣವನ್ನು ತಿಳಿಸುತ್ತಾ ಸ್ನೇಹಿತ್ ನನಗೆ ಆ ಆಸ್ಕ್ ಮಾಡೋಕೆ ಬರುತ್ತೆ ಅಂತ ಹೇಳಿದ್ರು ಕೂಡ ಅವರು ಹೋದರು. ಟೈಮ್ ಸೇವ್ ಮಾಡಬಹುದಾಗಿತ್ತು ಹಾಗೂ ಮನೆಯಲ್ಲಿ ಬೇಡದ ವಿಚಾರಗಳಿಗೆ ಹೆಚ್ಚಾಗಿ ಮೂಗು ತೋರಿಸುತ್ತಾರೆ ನನಗೆ ಅದು ಇಷ್ಟ ಆಗ್ತಿಲ್ಲ ಎನ್ನುವ ಕಾರಣಕ್ಕಾಗಿ ಕೂಡ ಸ್ನೇಹಿತ ಕಳಪೆ ಬೋರ್ಡ್ ಅನ್ನು ನೀಡುತ್ತೇನೆ ಎಂಬುದಾಗಿ ಹೇಳ್ತಾರೆ.
ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಭಾಷಣೆ ನಡೆದು ಆ ಸಂದರ್ಭದಲ್ಲಿ ಭಾಗ್ಯಶ್ರೀ ಅವರು ಹಾಡಿರುವಂತಹ ಒಂದು ಮಾತಿಗೆ ಈ ರೀತಿ ಮನಸ್ಸಿಗೆ ಬೇಸರವಾಗಿ ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಡಿ ಅನ್ನೋ ರೀತಿಯಲ್ಲಿ ಸ್ನೇಹಿತ ಸಂಭಾಷಣೆಯ ಸಂದರ್ಭದಲ್ಲಿ ಭಾಗ್ಯಶ್ರೀ ಅವರಿಗೆ ಹೇಳಿರುವುದನ್ನು ಕೂಡ ನಾವು ಗಮನಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ನಮೃತ ಅವರ ಜೊತೆಗೆ ಸ್ನೇಹಿತ್ ಮಾತನಾಡುವ ಸಂದರ್ಭದಲ್ಲಿ ಸಂಧಾನ ಮಾಡಿಕೊಳ್ಳಿ ಎಂಬುದಾಗಿ ಹೇಳಿದಾಗ ಸಂಧಾನ ಮಾಡಿಕೊಳ್ಳುವುದಕ್ಕೆ ಏನು ಕೂಡ ಉಳಿದಿಲ್ಲ ಎಂಬುದಾಗಿ ಸ್ನೇಹಿತ ಹೇಳಿದ್ದು ಕೂಡ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನು ಕೂಡ ಓದಿ; Biggboss Drone Prathap: ಮತ್ತೆ ನಡೆಯುತ್ತಿದೆ ಮೋಸ. ಡ್ರೋನ್ ಪ್ರತಾಪ್ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹೊಸ ಪೋಸ್ಟ್.
ಈ ಸಮಯದಲ್ಲಿ ತುಕಾಲಿ ಸಂತು ಹಾಗೂ ಡ್ರೋನ್ ಪ್ರತಾಪ್(Drone Prathap) ಇಬ್ಬರೂ ಕೂಡ ಭಾಗ್ಯಶ್ರೀ ಅವರಿಗೆ ಉತ್ತಮ ಬೋರ್ಡ್ ಅನ್ನು ನೀಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಸ್ನೇಹಿತ್ ಅವರು ಯಾವುದೇ ಕಾರಣ ನೀಡಿದೆ ಬೇಕು ಅಂತಾನೆ ಭಾಗ್ಯಶ್ರೀ ಅವರನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ ಎನ್ನುವಂತಹ ಅಸಮಾಧಾನದ ಅಭಿಪ್ರಾಯಗಳನ್ನು ಕೂಡ ವೀಕ್ಷಕರು ವಿಡಿಯೋದ ಕಾಮೆಂಟ್ ಬಾಕ್ಸ್ ನಲ್ಲಿ ನೀಡ್ತಾ ಇದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರ ವಿರುದ್ಧವೇ ಮನೆಯಿಂದ ಹೊರ ಹೋಗೋಕೆ ಕಾರಣವಾದರೂ ಕೂಡ ಆಗಬಹುದು.
Comments are closed.