Allu Arvind: ರಾಮಾಚಾರಿ ನೋಡಿ ಭೇಷ್ ಎಂದಿದ್ದ ಅಲ್ಲೂ ಅರ್ಜುನ್ ಅಪ್ಪ, ಯಶ್ ಬಗ್ಗೆ ಉಲ್ಟಾ ಹೇಳಿಕೆ. ಯಶ್ ಫ್ಯಾನ್ಸ್ ಗರಂ
Allu Arvind: ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರೆ ಖಂಡಿತವಾಗಿ ನಾವು ಕನ್ನಡ ಚಿತ್ರರಂಗದಿಂದ ರಾಕಿಂಗ್ ಸ್ಟಾರ್ ಯಶ್(rocking star Yash) ರವರನ್ನು ನೆನಪು ಮಾಡಿಕೊಳ್ಳಲೇ ಬೇಕಾಗುತ್ತದೆ. ಅವರ ಕೆಜಿಎಫ್ ಸಿನಿಮಾ ಗಳಿಗಾಗಿ ಇವತ್ತು ಕನ್ನಡ ಚಿತ್ರರಂಗ ಬೇರೆ ಭಾಷೆಗಳಲ್ಲಿ ಕೂಡ ಸಾಧನೆ ಮಾಡುತ್ತಿದೆ ಹಾಗೂ ಸಾಧನೆ ಮಾಡುವಂತಹ ಕನಸನ್ನು ಕಾಣುತ್ತಿದೆ ಎಂದು ಹೇಳಬಹುದಾಗಿದೆ. ಆದರೆ ಇದೇ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಅಲ್ಲು ಅರ್ಜುನ್(Allu Arjun) ಅವರ ತಂದೆ ಆಗಿರುವಂತಹ ಅಲ್ಲು ಅರವಿಂದ್ ರವರು ನೀಡಿರುವಂತಹ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
ಇದನ್ನು ಕೂಡ ಓದಿ: IPL 2024: ಈ ಬಾರಿ ಹರಾಜಿನಲ್ಲಿ ಇವರುಗಳೇ RCB ತಂಡದ ಟಾಪ್ 5 ಟಾರ್ಗೆಟ್ ಗಳು
ಯಶ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅಲ್ಲು ಅರ್ಜುನ್ ತಂದೆ – Allu arvind comments about Yash
ಪತ್ರಕರ್ತ ಕೇಳಿದಂತಹ ಪ್ರಶ್ನೆಗಳಿಗೆ ಉತ್ತರ ನೀಡುವ ಭರದಲ್ಲಿ ಅಲ್ಲು ಅರವಿಂದ್(Allu Aravind) ರವರು ಬೇಡದ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಕೆಜಿಎಫ್ ಗಿಂತ ಮುಂಚೆ ಅವರು ಯಾವ ದೊಡ್ಡ ಸ್ಟಾರ್ ಆಗಿದ್ರು, ಸಿನಿಮಾವನ್ನು ಅಷ್ಟೊಂದು ಚೆನ್ನಾಗಿ ಮಾಡಿದ ಕಾರಣದಿಂದಾಗಿ ಅವರು ಇವತ್ತು ದೊಡ್ಡ ಸ್ಟಾರ್ ಆಗಿದ್ದಾರೆ ಎಂಬುದಾಗಿ ಯಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ಇನ್ನು ಹಿಂದಿನ ಫ್ಲಾಶ್ ಬ್ಯಾಕ್ ಸ್ಟೋರಿಯನ್ನ ನೋಡೋಕೆ ಹೋದ್ರೆ ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಮಿಸ್ಟರ್ ಹಾಗೂ ಮಿಸ್ಸೆಸ್ ರಾಮಾಚಾರಿ ಬಿಡುಗಡೆಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಆ ಸಂದರ್ಭದಲ್ಲಿ 11 ಸೈಮಾ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದ ಅತ್ಯುತ್ತಮ ಸಿನಿಮಾ ಎನ್ನುವಂತಹ ಪ್ರಶಸ್ತಿಯನ್ನು ವೇದಿಕೆ ಮೇಲೆ ನೀಡಿದ್ದು ಕೂಡ ಇದೇ ಅಲ್ಲು ಅರವಿಂದ್ ಅನ್ನೋದನ್ನ ಕೂಡ ನಾವು ಈಗ ನೆನಪಿಸಿಕೊಳ್ಳಬಹುದಾಗಿದೆ. ಅಷ್ಟು ಬೇಗ ಈ ವಿಚಾರ ಅವರಿಗೆ ಮರೆತು ಹೋಗಿರುವುದೇ ವಿಷಾದ ಎಂದು ಹೇಳಬಹುದಾಗಿದೆ.
ಈ ಪ್ರಶಸ್ತಿಯನ್ನು ಪಡೆದುಕೊಳ್ಳುವಾಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಜೊತೆಗೆ ವೇದಿಕೆ ಮೇಲೆ ರಾಕಿಂಗ್ ಸ್ಟಾರ್ ಯಶ್ ಕೂಡ ಹೋಗಿದ್ದರು. ಆ ಸಂದರ್ಭದಲ್ಲಿ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇಷ್ಟು ಬೇಗ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಅಲ್ಲು ಅರ್ಜುನ್ ರವರಿಗೆ ನೆನಪು ಹೋಗಿದ್ದು ಹಾಸ್ಯಾಸ್ಪದ ಎಂದು ಹೇಳಬಹುದು.
ಇದೊಂದು ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಓಡಾಡುತ್ತಿದ್ದು ಕನ್ನಡಿಗರು ಸೇರಿದಂತೆ ಎಲ್ಲಾ ಯಶ್ ಅಭಿಮಾನಿಗಳು ಕೂಡ ಅಲ್ಲು ಅರವಿಂದ್ ರವರ ವಿರುದ್ಧ ಹರಿಹಾಯ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಿಗ್ಗಾ ಮುಗ್ಗ ಟೀಕೆ ಮಾಡುತ್ತಿದ್ದಾರೆ. ಒಬ್ಬ ನಿರ್ಮಾಪಕನಾಗಿ ತಮ್ಮ ಮಗ ಆಗಿರುವಂತಹ ಅಲ್ಲು ಅರ್ಜುನ್ ಅವರನ್ನು ಮೇಲೆ ತರಲು ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಅನ್ನೋದು ಕೂಡ ನಮಗೆ ತಿಳಿದಿದೆ ಅನ್ನೋ ರೀತಿಯಲ್ಲಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
Comments are closed.