Investment: ಒಂದು ಟೀ ಖರ್ಚು 54 ರೂಪಾಯಿಯಂತೆ ವರ್ಷಕ್ಕೆ ಸಿಗುತ್ತೆ 48000 – ಜನರು ಕ್ಯೂ ನಿಂತು ಮಾಡಿಸುತ್ತಿರುವ ಪ್ಲಾನ್.
Investment: ನಮಸ್ಕಾರ ಸ್ನೇಹಿತರೆ ಈಗ ನಾವು ದುಡಿಯುತ್ತಾ ಇದ್ದೇವೆ ದುಡಿಯುವ ಶಕ್ತಿ ಇದೆ ಎನ್ನುವ ಕಾರಣಕ್ಕಾಗಿ ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಆದರೆ ನಮ್ಮ ನಿವೃತ್ತಿಯ ಜೀವನ ಅಂದರೆ ವೃದ್ಧಾಪ್ಯದ ಜೀವನದಲ್ಲಿ ಹಣದ ಅವಶ್ಯಕತೆ ಸಾಕಷ್ಟು ಇರುತ್ತದೆ. ಇನ್ನು ಉಳಿತಾಯ ಹಾಗೂ ಹೂಡಿಕೆ ವಿಚಾರಿಕೆ ಬಂದ್ರೆ ಲೈಫ್ ಇನ್ಸೂರೆನ್ಸ್(Life Insurance) ಖಂಡಿತವಾಗಿ ನಿಮಗೆ ಒಂದು ಒಳ್ಳೆ ಆಯ್ಕೆಯಾಗುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಲೇಖನಿಯಲ್ಲಿ ಕೂಡ ನಾವು ನಿಮಗೆ ಒಂದೊಳ್ಳೆ ಲೈಫ ಇನ್ಸೂರೆನ್ಸ್ ಯೋಜನೆ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
ಇದನ್ನು ಕೂಡ ಓದಿ: Buy EV scooter: ಕೇವಲ ಜುಜುಬಿ 50000 ರುಪಾಯಿಗೆ ಸಿಗುತ್ತೆ ಈ ಮಸ್ತ್ ಸ್ಕೂಟರ್- ವಿಶೇಷತೆ, ಕೆಪ್ಯಾಸಿಟಿ ತಿಳಿದರೆ ಇಂದೇ ಖರೀದಿ ಮಾಡ್ತೀರಾ.
Best Investment Scheme – ಜೀವನ್ ಉಮಂಗ್ ಪಾಲಿಸಿ – LIC
ಭಾರತದ ಸರ್ಕಾರದ ಸ್ವಾಮಿತ್ಯವನ್ನು ಹೊಂದಿರುವಂತಹ ಎಲ್ಐಸಿ ಕಂಪನಿಯಲ್ಲಿ ನಿಮಗೆ ಸಾಕಷ್ಟು ರೀತಿಯ ಯೋಜನೆಗಳು ಸಿಗುತ್ತವೆ ಆದರೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಜೀವನ್ ಉಮಂಗ್ ಪಾಲಿಸಿ(jeevan Umang policy) ಯೋಜನೆ ಬಗ್ಗೆ. ಈ ಯೋಜನೆಯಲ್ಲಿ ನೀವು ಅತ್ಯಂತ ಕಡಿಮೆ ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಜೀವನ್ ಉಮಂಗ್ ಪಾಲಿಸಿ ಯೋಜನೆ ಅಡಿಯಲ್ಲಿ ನೀವು ನಿಮ್ಮ ಆದಾಯ ವಯಸ್ಸು ಸೇರಿದಂತೆ ಇನ್ನಿತರ ವಿಚಾರಗಳನ್ನು ಲೆಕ್ಕಾಚಾರ ಹಾಕಿ ನಿಮ್ಮ ಭವಿಷ್ಯಕ್ಕೆ ಲಾಭ ಆಗುವ ರೀತಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು ಹೇಗೆ? – How to Invest in this LIC policy
60 ವರ್ಷ ಮೇಲ್ಪಟ್ಟಿರುವಂತಹ ಹಿರಿಯ ನಾಗರಿಕರಿಗೆ ಜೀವನ್ ಉಮಂಗ್ ಪಾಲಿಸಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಅವರಿಗಾಗಿ ಈ ಪಾಲಿಸಿ ಯೋಜನೆಯನ್ನು ಡಿಸೈನ್ ಮಾಡಲಾಗಿದೆ. ತಮ್ಮ ವೃದ್ಧಾಪ್ಯದ ವಯಸ್ಸಿನಲ್ಲಿ ಯಾವುದೇ ಕಾರಣಕ್ಕೂ ಕೂಡ ಆರ್ಥಿಕ ಸಮಸ್ಯೆಯನ್ನು ಕಾಣಬಾರದು ಎನ್ನುವ ಆಸೆ ಇದ್ರೆ ಖಂಡಿತವಾಗಿ ಅಂಥವರಿಗೆ ಇದೊಂದು ಒಳ್ಳೆಯ ಹೂಡಿಕೆಯಾಗಿದೆ. ಅತ್ಯಂತ ಕಡಿಮೆ ಹೂಡಿಕೆಯಲ್ಲಿ ನೀವು ಈ ಯೋಜನೆಯಲ್ಲಿ ಪಿಂಚಣಿಯನ್ನು ಪಡೆದುಕೊಳ್ಳಬಹುದು.
ಈ ಯೋಜನೆಯಲ್ಲಿ ನೀವು ಕನಿಷ್ಠ 2 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬಹುದಾಗಿದೆ. ಪಾಲಿಸಿಯ ಅವಧಿ ಆಯ್ಕೆಯಲ್ಲಿ ನಿಮಗೆ 15 20 25 30 ವರ್ಷಗಳ ಆಯ್ಕೆ ಕೂಡ ಮಾಡಬಹುದಾಗಿದೆ. ವೇಗವಾಗಿ ಮೆಚುರಿಟಿ ಆಗಿರುವಂತಹ ಹಣ ನಿಮ್ಮ ಕೈಗೆ ಸೇರಬೇಕು ಎನ್ನುವುದಾದರೆ ಹೆಚ್ಚು ಪ್ರೀಮಿಯಂ ಹಣವನ್ನು ಕೂಡ ನೀವು ಕಟ್ಟಬೇಕಾಗುತ್ತದೆ. ಪ್ರೀಮಿಯಂ ಮೆಚುರಿಟಿ ಅವಧಿ 30 ರಿಂದ 70 ವರ್ಷಗಳ ನಡುವೆ ಕೂಡ ಇರಿಸಲಾಗಿದೆ. ಮರಣದ ನಂತರ ನಿಮ್ಮ ನಾಮಿನಿ ಅವರಿಗೆ ಹಣವನ್ನು ವರ್ಗಾವಣೆ ಮಾಡುವುದು ಸೇರಿದಂತೆ ಸಾಲ ಸೌಲಭ್ಯಗಳಂತಹ ಯೋಜನೆಗಳನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದು.
54 ರೂಪಾಯಿಗಳ ಹೂಡಿಕೆ ಲಕ್ಷಾಂತರ ಲಾಭ – Return on Investment
ಮೊದಲನೇದಾಗಿ ಜೀವನ್ ಉಮನ್ ಯೋಜನೆ ಅಡಿಯಲ್ಲಿ ನೀವು 25ನೇ ವಯಸ್ಸಿನಿಂದ ಹೂಡಿಕೆ ಮಾಡಲು ಪ್ರಾರಂಭ ಮಾಡಿದರೆ 30 ವರ್ಷಗಳ ಟೈಮ್ ಗೆ 6 ಲಕ್ಷ ರೂಪಾಯಿಗಳ ಹಣವನ್ನು ಕಟ್ಟಬೇಕಾಗುತ್ತದೆ. ಅಂದರೆ ದಿನಕ್ಕೆ 54 ರೂಪಾಯಿಗಳ ಲೆಕ್ಕಾಚಾರದಲ್ಲಿ ತಿಂಗಳಿಗೆ 1638 ರೂಪಾಯಿಗಳನ್ನು ನೀವು ಪ್ರೀಮಿಯಂ ರೂಪದಲ್ಲಿ ಕಟ್ಟಬೇಕಾಗುತ್ತದೆ. ಯೋಜನೆಯ ಹೂಡಿಕೆ ಮಾಡುವ 55 ನೇ ವಯಸ್ಸಿನಲ್ಲಿ ಈ ಪಾಲಿಸಿ ಮುಗಿದು ಮೆಚುರಿಟಿ ವರೆಗೂ ಕೂಡ ಪ್ರತಿ ವರ್ಷ 48,000 ಹಣವನ್ನು ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಬಹುದು. ಪ್ರೀಮಿ ಮುಗಿದ ನಂತರ ನೀವು ಕಟ್ಟಿರುವಂತಹ ಹಣ ಸೇರಿದಂತೆ ಅದಕ್ಕೆ ಸಿಗಬೇಕಾಗಿರುವ ಬೋನಸ್ ಸೇರಿಸಿ 28 ಲಕ್ಷ ರೂಪಾಯಿಗಳ ವರೆಗೂ ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ. ವೃದ್ಧಾಪ್ಯದ ಜೀವನದಲ್ಲಿ ನಿಮಗೆ ಈ ಯೋಜನೆ ಸಾಕಷ್ಟು ಲಾಭವನ್ನು ನೀಡುತ್ತದೆ.
Comments are closed.