IPL 2024: ಈ ಬಾರಿ ಹರಾಜಿನಲ್ಲಿ ಇವರುಗಳೇ RCB ತಂಡದ ಟಾಪ್ 5 ಟಾರ್ಗೆಟ್ ಗಳು

RCB might target these top 5 players in the coming auction for IPL 2024.

IPL 2024: ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಭಾರತ ದೇಶದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದ್ದು ಭಾರತ ಬಹುತೇಕ ಗೆಲ್ಲುವಂತಹ ಫೇವರೆಟ್ ತಂಡವಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನು ವಿಶ್ವಕಪ್ ಆದ ನಂತರ ಭಾರತ ದೇಶದಲ್ಲಿ ಕ್ರಿಕೆಟ್ ಹಬ್ಬ ಆಗಿರುವಂತಹ ಐಪಿಎಲ್ ಪ್ರಾರಂಭವಾಗಲಿದೆ. 2024ರಲ್ಲಿ ನಡೆಯುವಂತಹ ಐಪಿಎಲ್(IPL) ಗಿಂತ ಮುಂಚೆ ಆಕ್ಷನ್ ನಡೆಯಲಿದ್ದು ಅದರಲ್ಲೂ ವಿಶೇಷವಾಗಿ ನಮ್ಮ ಕ್ರಿಕೆಟ್ ತಂಡ ಆಗಿರುವಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಐದು ಟಾಪ್ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವಂಥ ಪ್ರಯತ್ನವನ್ನು ಆಕ್ಷನ್ ನಲ್ಲಿ ಮಾಡಲಿದೆ ಎಂದು ಹೇಳಬಹುದಾಗಿದ್ದು ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ಈ ಬಾರಿ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಲಿರುವ ಟಾಪ್ 5 ಆಟಗಾರರು- RCB might target these top 5 players in the coming auction for IPL 2024.

ಮಿಚೆಲ್ ಸ್ಟಾರ್ಕ್: ಇತ್ತೀಚಿನ ವರ್ಷಗಳಲ್ಲಿ ಕೇವಲ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರವಾಗಿ ಮಾತ್ರ ಆಡುತ್ತಿರುವಂತಹ ಸ್ಟಾರ್ಕ್(Mitchel starc) ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಐಪಿಎಲ್ ಆಡುವುದನ್ನು ಬಿಟ್ಟಿದ್ರು. ಇನ್ನು ಈ ಬಾರಿ ವಿಶ್ವಕಪ್ ಪ್ರಾರಂಭ ಆಗುವುದಕ್ಕಿಂತ ಮುಂಚೆ ಖಂಡಿತವಾಗಿ ಈ ಬಾರಿ ಐಪಿಎಲ್ ನಲ್ಲಿ ಆಡ್ತೀನಿ ಅನ್ನೋದಾಗಿ ಕೂಡ ಹೇಳಿಕೊಂಡಿದ್ದರು. ಕೊನೆಯ ಬಾರಿಗೆ ಅವರು ಆಡಿದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅನ್ನೋದನ್ನು ಕೂಡ ನಾವು ಮರೆಯಬಾರದು. ಹೀಗಾಗಿ ಈ ಬಾರಿ ಕೂಡ ಆರ್‌ಸಿಬಿ ತಂಡದ ಪರವಾಗಿ ಸ್ಟಾರ್ಕ್ ಆಡಿದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

ಸಂದೀಪ್ ಶರ್ಮಾ: ವೇಗದ ಬೌಲರ್ ಆಗಿರುವಂತಹ ಸಂದೀಪ್ ಶರ್ಮ(Sandeep Sharma) ಸಾಕಷ್ಟು ಬಾರಿ ನೀವು ಗಮನಿಸಬಹುದು ಐಪಿಎಲ್ ನಲ್ಲಿ ಪಂಜಾಬ್ ತಂಡದ ಪರವಾಗಿ ಆಡಿರುವುದು ಹೆಚ್ಚು. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವೇಗಿಗಳ ಅಗತ್ಯ ಹೆಚ್ಚಾಗಿರುವ ಕಾರಣದಿಂದಾಗಿ ಸಂದೀಪ್ ಶರ್ಮ ಅವರನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ (IPL 2024) ಖರೀದಿಸುವ ಸಾಧ್ಯತೆ ಹೆಚ್ಚಾಗಿದೆ.

ಪ್ಯಾಟ್ ಕಮಿನ್ಸ್: ಎರಡು ವರ್ಷಗಳ ಹಿಂದೆ ಗಮನಿಸಿದರೆ ಪ್ಯಾಟ್ ಕಮಿನ್ಸ್(Pat Cummins) ಐಪಿಎಲ್ ನಲ್ಲಿ ಅತ್ಯಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಆಲ್-ರೌಂಡರ್ ಆಗಿರುವ ಇವರು ಈ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಸಾಕಷ್ಟು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಖಂಡಿತವಾಗಿ ಆರ್‌ಸಿಬಿ ತಂಡಕ್ಕೆ ಒಬ್ಬ ಉತ್ತಮವಾದ ಆಲ್ರೌಂಡರ್ ಅಗತ್ಯವಿದೆ ಪ್ಯಾಟ್ ಕಮಿನ್ಸ್ ಉತ್ತಮವಾದ ಆಯ್ಕೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಬಹುದಾಗಿದೆ.

ಇದನ್ನು ಕೂಡ ಓದಿ: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

ರಚಿನ್ ರವೀಂದ್ರ: ಭಾರತೀಯ ಮೂಲದ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೂಲದ ನ್ಯೂಜಿಲೆಂಡ್ ಆಟಗಾರ ಆಗಿರುವಂತಹ ಇವರು ಬ್ಯಾಟ್ಸ್ಮನ್ ಆಗಿ ಕೂಡ ಈ ಬಾರಿಯ ವಿಶ್ವಕಪ್ ಟೂರ್ನಮೆಂಟ್ ನಲ್ಲಿ 9 ಪಂದ್ಯಗಳಲ್ಲಿ 565 ರನ್ನುಗಳನ್ನು ಬಾರಿಸುವ ಮೂಲಕ ಈ ಬಾರಿ ವಿಶ್ವ ಕಪ್ ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವಂತಹ ಆಟಗಾರರಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತಮ್ಮ ಬೌಲಿಂಗ್ ಮೂಲಕ ವಿಕೆಟ್ ಅನ್ನು ಪಡೆಯುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಬೆಂಗಳೂರಿನಿಂದ ಮನಸ್ಸಿಗೆ ಅತ್ಯಂತ ಹತ್ತಿರವಾದ ಸ್ಥಳಗಳು ಇಲ್ಲಿ ಇನ್ನಷ್ಟು ಕ್ರಿಕೆಟ್ ಆಡುವಂತಹ ಅವಕಾಶ ಸಿಗಬಹುದು ಎಂಬುದಾಗಿ ಕಾಯುತ್ತಿದ್ದೇನೆ ಎಂದು ಆರ್‌ಸಿಬಿ ತಂಡವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಮೆನ್ಷನ್ ಮಾಡುವ ಮೂಲಕ ನೇರವಾಗಿ ಆರ್ಸಿಬಿ ತಂಡದಲ್ಲಿ ಆಡುವಂತಹ ಬಯಕೆಯನ್ನು ಹೊಂದಿದ್ದೇನೆ ಎಂಬುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡ ಇವರನ್ನು ಕೂಡ ಈ ಬಾರಿ ಹರಾಜಿನಲ್ಲಿ (IPL 2024 auction) ಟಾರ್ಗೆಟ್ ಮಾಡಬಹುದು.

ದಿಲ್ಸನ್ ಮದುಶನಕ: ಇನ್ ಶ್ರೀಲಂಕಾ ಕ್ರಿಕೆಟ್ ತಂಡ ಈ ಬಾರಿ ಕಳಪೆ ಪ್ರದರ್ಶನವನ್ನು ತೋರಪಡಿಸಿದ್ರು ಕೂಡ ಬೌಲಿಂಗ್ ವಿಭಾಗದಲ್ಲಿ ಮಾತ್ರ ದಿಲ್ಸನ್ ಮದುಶನಕ ಈ ಟೂರ್ನಮೆಂಟ್ ನಲ್ಲಿ ಟಾಪ್ ಬೌಲರ್ ಆಗಿ ಕಾಣಿಸಿಕೊಂಡಿದ್ದು ಆಡಿರುವಂತಹ ಒಂಬತ್ತು ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಕಿತ್ತಿದ್ದಾರೆ. ಹೀಗಾಗಿ ಅವರು ಕೂಡ ಆರ್‌ಸಿಬಿ ತಂಡದ ಪ್ರಮುಖ ಟಾರ್ಗೆಟ್ ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ 5 ಆಟಗಾರರು ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ತಂಡ ಟಾರ್ಗೆಟ್ ಮಾಡಲಿರುವ ಆಟಗಾರರು.

Comments are closed.