Jasprit Bumrah: ಭಾರತವನ್ನು ಗೆಲ್ಲಿಸುವ ಜಸ್ಪಿತ್ ಬುಮ್ರಾ ರವರ ಒಟ್ಟು ಆಸ್ತಿಯ ಮೌಲ್ಯ ಹಾಗೂ ಡೀಟೇಲ್ಸ್

Jasprit Bumrah net worth details

Jasprit Bumrah: ನಮಸ್ಕಾರ ಸ್ನೇಹಿತರೆ, ಭಾರತೀಯ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ಸೋತಿದ್ರು ಕೂಡ ನಿಜಕ್ಕೂ ಟೂರ್ನಮೆಂಟ್ ಉದ್ದಕ್ಕೂ ಚಾಂಪಿಯನ್ ತಂಡದ ರೀತಿಯಲ್ಲಿ ಆಟವಾಡಿಕೊಂಡು ಬಂದಿರುವುದು ಭಾರತೀಯರಾದ ನಾವು ಹೆಮ್ಮೆಪಡುವಂತೆ ಮಾಡಿದೆ. ಈ ಬಾರಿಯ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಕೇವಲ ಭಾರತ ಕ್ರಿಕೆಟ್ ತಂಡ ಮಾತ್ರ ಫೈನಲ್ ವರೆಗೂ ಕೂಡ ಯಾವುದೇ ಪಂದ್ಯವನ್ನು ಸೋಲದೆ ಬಂದಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಮಾತ್ರ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮಂಡಿ ಊರಬೇಕಾಗಿ ಬಂದಿತು.

ಇನ್ನು ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗ ಕೂಡ ಸಾಕಷ್ಟು ಬಲಶಾಲಿಯಾಗಿತ್ತು. ಮೊಹಮ್ಮದ್ ಶಮಿ ಅವರಿಗೆ ಬೌಲಿಂಗ್ ವಿಭಾಗದಲ್ಲಿ ಬೆಂಬಲವಾಗಿ ನಿಂತಿದ್ದು ಜಸ್ಪ್ರೀತ್ ಬೂಮ್ರಾ(Jasprith Bumrah). ತಮ್ಮ ಯಾರ್ಕರ್ ದಾಳಿಯಿಂದ ಜಸ್ಪ್ರೀತ್ ಬೂಮ್ರಾ ಈಗಾಗಲೇ ಈ ಬಾರಿಯ ವಿಶ್ವಕಪ್ ನಲ್ಲಿ ಅತ್ಯಂತ ಕಡಿಮೆ ರನ್ಗಳನ್ನು ನೀಡಿರುವಂತಹ ಬೌಲರ್ ಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಕಳೆದ ಏಷ್ಯಾಕಪ್ ನಿಂದಲೂ ಕೂಡ ಈ ಬಾರಿಯ ವಿಶ್ವಕಪ್ನವರೆಗೂ ಜಸ್ಪ್ರೀತ್ ಬೂಮ್ರಾ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿ ತಂಡದ ಗೆಲುವು ಅಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಜಸ್ಪ್ರೀತ್ ಬೂಮ್ರಾ ಅವರ ಕ್ರಿಕೆಟಿಂಗ್ ಜರ್ನಿ ಬಗ್ಗೆ ನಾವು ಮಾತನಾಡಿದ್ದಾಯ್ತು ಬನ್ನಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋಣ.

Jasprit Bumrah net worth details – ಜಸ್ಪ್ರೀತ್ ಬೂಮ್ರಾ ಅವರ ಆಸ್ತಿಯ ವಿವರ

ಜಸ್ಪ್ರೀತ್ ಬೂಮ್ರಾ ಯಾವಾಗಲೂ ಕೂಡ ಯಾರ್ಖರ್ ಬೌಲಿಂಗ್ ಮಾಡೋದಕ್ಕೆ ವರ್ಲ್ಡ್ ಫೇಮಸ್ ಆಗಿದ್ದಾರೆ. 2019 ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗನಾಗಿ ಕೂಡ ಆಯ್ಕೆಯಾಗಿದ್ದರು. ಇಷ್ಟೆಲ್ಲ ಪ್ರತಿಭಾನ್ವಿತ ಆಗಿರುವಂತಹ ಜಸ್ಪ್ರೀತ್ ಬೂಮ್ರಾ ತಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟು ಆಸ್ತಿಯನ್ನು ಹೊಂದಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಜಸ್ಪ್ರೀತ್ ಬೂಮ್ರಾ ಕೇವಲ ಕ್ರಿಕೆಟ್ ಮೂಲಕ ಮಾತ್ರವಲ್ಲದೆ ಅದಕ್ಕಿಂತ ಹೆಚ್ಚಾಗಿ ಬ್ರಾಂಡ್ ಡೀಲ್ಸ್ ಗಳ ಜಾಹೀರಾತುಗಳ ಮೂಲಕ ಪಡೆದುಕೊಳ್ಳುತ್ತಾರೆ. ಭಾರತ್ ಪೇ, ಡ್ರೀಮ್ 11 ರೀತಿಯ ಸಾಕಷ್ಟು ಪ್ರತಿಷ್ಠಿತ ಬ್ರಾಂಡ್ ಪ್ರಾಡಕ್ಟ್ಗಳ ಪ್ರತಿನಿಧಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಅವರು ಕೋಟ್ಯಾಂತರ ರೂಪಾಯಿ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುತ್ತಾರೆ.

Jasprit Bumrah net worth details
Jasprit Bumrah net worth details

ಜಸ್ಪ್ರೀತ್ ಬೂಮ್ರಾ ಅವರ ಆಸ್ತಿಯ ಒಟ್ಟು ಮೌಲ್ಯ 55 ಕೋಟಿ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ. ಬಿಸಿಸಿ ಯ ಕಾಂಟ್ರಾಕ್ಟ್ ನಲ್ಲಿ ಮೊದಲ ದರ್ಜೆಯ ಆಟಗಾರ ಆಗಿರುವ ಕಾರಣಕ್ಕಾಗಿ ಇವರಿಗೆ ಏಳು ಕೋಟಿ ವಾರ್ಷಿಕ ಸಂಭಾವನೆ ಸಿಗುತ್ತದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವುದಕ್ಕಾಗಿ ಐಪಿಎಲ್ ನಲ್ಲಿ ಕೂಡ ಪ್ರತಿ ಸೀಸನ್ಗೆ 12 ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಕ್ರಿಕೆಟ್ ಹಾಗೂ ವೈಯಕ್ತಿಕ ಜೀವನ ಎರಡರಲ್ಲಿ ಕೂಡ ಯಶಸ್ಸನ್ನು ಕಂಡಿರುವಂತಹ ಆಟಗಾರರಲ್ಲಿ ಜಸ್ಪ್ರೀತ್ ಬೂಮ್ರಾ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ಇದನ್ನು ಕೂಡ ಓದಿ: Volvo EM90: ಒಮ್ಮೆ ಚಾರ್ಜ್ ಮಾಡಿ 738 km ಮೈಲೇಜ್ ಕೊಡುತ್ತೆ, ಬರುತ್ತಿದೆ ಮಸ್ತ್ ಕಾರ್

Comments are closed.