Leo Movie OTT: ಬರುತ್ತಿದೆ ವಿಜಯ್ ತಲಪತಿ ಸಿನಿಮಾ- OTT ನಲ್ಲಿ ಬಿಡುಗಡೆ ಮುಹೂರ್ತ ಫಿಕ್ಸ್.
Leo Movie OTT: ಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವಂತಹ ತಮಿಳು ಚಿತ್ರರಂಗದ ಸ್ಟಾರ್ ನಟ ಆಗಿರುವ ತಲಪತಿ ವಿಜಯ್(Thalapathy Vijay) ಅವರ ಲಿಯೋ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕ್ರಿಟಿಕ್ಸ್ ಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದರು ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡೋದಕ್ಕೆ ಯಶಸ್ವಿಯಾಗಿತ್ತು. ಕೇವಲ ವಿಜಯ್ ಅವರ ಜನಪ್ರಿಯತೆ ಮಾತ್ರವಲ್ಲದ ನಿರ್ದೇಶಕ ಲೋಕೇಶ್ ಕನಗರಾಜ್ ರವರ ನಿರ್ದೇಶನದ ಕಾರಣಕ್ಕಾಗಿ ಕೂಡ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು.
Leo Movie OTT details – release date and where you can watch Leo Movie.
ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 19ರಂದು ಲಿಯೋ(Leo ) ಸಿನಿಮಾ ಬಿಡುಗಡೆಯಾಗಿತ್ತು. ವಿಜಯ್ ಅವರಿಗೆ ನಾಯಕಿಯಾಗಿ ತ್ರಿಶಾ ಕಾಣಿಸಿಕೊಂಡಿದ್ದರು. ಸಿನಿಮಾ 550 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದ್ದು ಕೂಡ ದಾಖಲೆಯಾಗಿದೆ. ಸಿನಿಮಾದ ಕಲೆಕ್ಷನ್ ಬಗ್ಗೆ ಕೂಡ ಸಾಕಷ್ಟು ಜನರಲ್ಲಿ ಗೊಂದಲ ಹಾಗೂ ಅನುಮಾನಗಳು ಕೂಡ ಇದ್ವು.
ಅದರಲ್ಲೂ ವಿಶೇಷವಾಗಿ ಅಭಿಮಾನಿಗಳು ಲಿಯೋ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಆದರೆ ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬಂದಿಲ್ಲ ಅನ್ನೋದು ಅಭಿಮಾನಿಗಳಲ್ಲಿ ಕೂಡ ಬೇಸರವನ್ನು ಮೂಡಿಸಿತ್ತು. ಕೆಲವು ವರ್ಗದ ಪ್ರೇಕ್ಷಕರನ್ನು ಲಿಯೊ ಸಿನಿಮಾ ಮನಸ್ಸು ಗೆಲ್ಲೋದಕ್ಕೆ ಯಶಸ್ವಿಯಾಗಿತ್ತು. ವಿಮರ್ಶಕರು ಸಿನಿಮಾದ ಬಗ್ಗೆ ಕೆಲವೊಂದು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿರುವ ಕಾರಣಕ್ಕಾಗಿ ಸಿನಿಮಾದ ಕಲೆಕ್ಷನ್ ಕೂಡ ಸುಳ್ಳು ಎನ್ನುವ ರೀತಿಯಲ್ಲಿ ಕೂಡ ಕೆಲವರು ಮಾತನಾಡಿದ್ರು. ಅದೇನೇ ಇರಲಿ ಪ್ರತಿಯೊಬ್ಬರು ಕೂಡ ಕಾಯುತ್ತಿರುವುದು ಸಿನಿಮಾದ ಓಟಿಟಿ ರಿಲೀಸ್ ಗಾಗಿ (Leo Movie OTT).
ಇದನ್ನು ಕೂಡ ಓದಿ: Instant Personal Loan: ಹೆಚ್ಚು ಬೇಡ ದಿಡೀರ್ ಅಂತ 25000 ಲೋನ್ ಬೇಕು ಅಂದ್ರೆ ಸುಲಭವಾಗಿ ಸಿಗುತ್ತೆ- ಇಲ್ಲಿ ಅರ್ಜಿ ಹಾಕಿ, ನೇರವಾಗಿ ಬ್ಯಾಂಕ್ ಖಾತೆಗೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಬಿಡುಗಡೆಯಾದ ನಾಲ್ಕು ವಾರಕ್ಕೆ ಓಟಿಟಿನಲ್ಲಿ ಅಂದರೆ Netflix (Netflix Website Link) ನಲ್ಲಿ ನವೆಂಬರ್ 16ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಈಗ ತಿಳಿದು ಬಂದಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ನವೆಂಬರ್ 24 ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎನ್ನುವಂತಹ ಮಾಹಿತಿಗಳು ಸಿಕ್ಕಿವೆ. ಥಿಯೇಟರ್ ನಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದ ಸಾಕಷ್ಟು ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಈ ಸಿನಿಮಾವನ್ನು ಚಿಕ್ಕ ಪರದೆ ಮೇಲೆ ನೋಡುವಂತಹ ಅವಕಾಶ ಈಗ ನವೆಂಬರ್ 24ಕ್ಕೆ ಸಿಗುತ್ತಿದೆ.
ಕೆಲವೊಮ್ಮೆ ಸಿನಿಮಾಗಳು ಥಿಯೇಟರ್ ನಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಓ ಟಿ ಟಿ ಪ್ಲಾಟ್ಫಾರ್ಮ್ ನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿರುವಂತಹ ಉದಾಹರಣೆ ಕೂಡ ಇದೆ. ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವಂತಹ ಲಿಯೋ ಸಿನಿಮಾ ಕೂಡ ಇದೇ ರೀತಿಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಬಹುದು ಎಂಬುದಾಗಿ ಕೆಲವರು ತಮ್ಮ ಅಭಿಪ್ರಾಯವನ್ನು ಓಟಿಟಿ ರಿಲೀಸ್ ಬಗ್ಗೆ ವ್ಯಕ್ತಪಡಿಸಿದ್ದಾರೆ.
Comments are closed.