Post Office Scheme: ಲಕ್ಷ ಲಕ್ಷ ರಿಟರ್ನ್ಸ್ ಬೇಕು ಎಂದರೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.
Post Office Scheme Explained in Kannada: ನಮಸ್ಕಾರ ಸ್ನೇಹಿತರೆ ನೀವೆಲ್ಲರೂ ಈಗಾಗಲೇ ತಿಳಿದುಕೊಂಡಿರುವ ಹಾಗೆ ದೇಶದಲ್ಲಿ ಕೇವಲ ಉಳಿತಾಯವನ್ನು ಮಾತ್ರವಲ್ಲದೆ ಹೂಡಿಕೆ ಮಾಡುವಂತಹ ಜನರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಬ್ಯಾಂಕಿಗಿಂತ ಹೆಚ್ಚಾಗಿ ಪೋಸ್ಟ್ ಆಫೀಸ್(post office) ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂಬುದಾಗಿ ಜನರು ಭಾವಿಸುತ್ತಿದ್ದಾರೆ. ಇವತ್ತಿನ ಲೇಖನಿಯಲ್ಲಿ ನಿಮಗೆ ಪೋಸ್ಟ್ ಆಫೀಸ್ನ ಒಂದು ಜನಪ್ರಿಯ ಹೂಡಿಕೆ ಯೋಜನೆ ಬಗ್ಗೆ ಹೇಳಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರೋದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್(post office time deposit scheme) ಯೋಜನೆ ಬಗ್ಗೆ. ನಿಮ್ಮ ಹಣ ಸುರಕ್ಷಿತವಾಗಿರುವುದರ ಜೊತೆಗೆ ಉತ್ತಮವಾದ ರಿಟರ್ನ್ ಅನ್ನು ಕೂಡ ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.
Post Office Scheme – below is more the details about Investment scheme provided in Post office for better returns
ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಹಣದಿಂದ ಉಳಿತಾಯ ಮಾಡುವುದು ಮಾತ್ರವಲ್ಲದೆ ಕೆಲವೊಂದು ಕಡೆಗಳಲ್ಲಿ ಹೂಡಿಕೆ ಮಾಡುವುದನ್ನು ಕೂಡ ಪ್ರಾರಂಭಿಸುತ್ತಾನೆ ಯಾಕೆಂದರೆ ಅದರಿಂದ ಆತ ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದು ಎನ್ನುವ ಆಸೆಯಿಂದ. ಖಂಡಿತವಾಗಿ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆ ಆ ಸೌಲಭ್ಯವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಯೋಜನೆಯಲ್ಲಿ ಸಿಗುವಂತಹ ಬಡ್ಡಿದರ ಕೂಡ ಜಬರ್ದಸ್ತ್ ಆಗಿರುತ್ತದೆ. ಈ ಯೋಜನೆಯಲ್ಲಿ ನೀವು 7.5% ಬಡ್ಡಿದರವನ್ನು ಪಡೆದುಕೊಳ್ಳಬಹುದು.
ಇದನ್ನು ಕೂಡ ಓದಿ: Instant Personal Loan: ಹೆಚ್ಚು ಬೇಡ ದಿಡೀರ್ ಅಂತ 25000 ಲೋನ್ ಬೇಕು ಅಂದ್ರೆ ಸುಲಭವಾಗಿ ಸಿಗುತ್ತೆ- ಇಲ್ಲಿ ಅರ್ಜಿ ಹಾಕಿ, ನೇರವಾಗಿ ಬ್ಯಾಂಕ್ ಖಾತೆಗೆ.
ಸರ್ಕಾರದಿಂದ ಚಿಕ್ಕ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತದೆ ಹಾಗೂ ಈ ಐದು ವರ್ಷಗಳ ಯೋಜನೆ ಆಗಿರುವಂತಹ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಬಡ್ಡಿದರವನ್ನು ಕೂಡ ಏಪ್ರಿಲ್ ತಿಂಗಳಲ್ಲಿ 7 ರಿಂದ 7.5% ಕ್ಕೆ ಹೆಚ್ಚಿಸಲಾಗಿದೆ. ಇಂತಹ ಲಾಭದಾಯಕ ರಿಟರ್ನ್ ಕಾರಣಕ್ಕಾಗಿ ಈ ಯೋಜನೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಈ ಚಿಕ್ಕ ಉಳಿತಾಯ ಯೋಜನೆಯಲ್ಲಿ ನೀವು ಒಂದು ಎರಡು ಮೂರು ಅಥವಾ ಐದು ವರ್ಷಗಳಿಗಾಗಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಒಂದು ವರ್ಷದ ಹೂಡಿಕೆ ಮೇಲೆ ನಿಮಗೆ 6.9 ಪ್ರತಿಶತ ರಿಟರ್ನ್, ಎರಡು ಅಥವಾ ಮೂರು ವರ್ಷಗಳ ಹೂಡಿಕೆಯ ಮೇಲೆ ನಿಮಗೆ ಏಳು ಪ್ರತಿಶತ ರಿಟರ್ನ್, ಐದು ವರ್ಷಗಳ ಹೂಡಿಕೆ ಮೇಲೆ ನಿಮಗೆ 7.5% ರಿಟರ್ನ್ ಸಿಗಲಿದೆ. ಇನ್ನು ಹೂಡಿಕೆ ಹಣ ಡಬಲ್ ಆಗ್ಬೇಕಂದ್ರೆ ಐದು ವರ್ಷಗಳಿಗಿಂತ ಹೆಚ್ಚಿನ ಸಮಯಕ್ಕೆ ಹಣವನ್ನು ಹೂಡಿಕೆ ಮಾಡಬೇಕು.
ಉದಾಹರಣೆಗೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office official Website) ಯೋಜನೆ ಅಡಿಯಲ್ಲಿ ಐದು ವರ್ಷಗಳಿಗೆ 5 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ. ಸಿಗುವಂತಹ 7.5% ಬಡ್ಡಿಯ ಆಧಾರದ ಮೇಲೆ ನೀವು ಬಡ್ಡಿಯ ರೂಪದಲ್ಲಿ ಈ ಹೂಡಿಕೆ ಮೇಲೆ 2,24,974 ರೂಪಾಯಿ ಹಣವನ್ನು ಪಡೆದುಕೊಳ್ಳುತ್ತೀರಿ. ಅಂದರೆ ಮಾಡಿರುವಂತಹ 5 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ಐದು ವರ್ಷಗಳ ಅವಧಿಯ ನಂತರ ಮೆಚುರಿಟಿ ಆದಮೇಲೆ 7,24,974 ರೂಪಾಯಿ ಹಣವನ್ನು ಪಡೆದುಕೊಳ್ಳುತ್ತೀರಿ.
ಎಲ್ಲಕ್ಕಿಂತ ಖುಷಿಯ ವಿಚಾರ ಇನ್ನೊಂದು ಏನಂದರೆ 1961ರ ಟ್ಯಾಕ್ಸ್ ನಿಯಮ 80 ಸಿ ಪ್ರಕಾರ ಗ್ರಾಹಕರಿಗೆ ಟ್ಯಾಕ್ಸ್ ರಿಯಾಯಿತಿ ಕೂಡ ಸಿಗುತ್ತೆ. ಹತ್ತು ವರ್ಷದಿಂದ ಪ್ರಾರಂಭಿಸಿ ಯಾರೊಬ್ಬರೂ ಕೂಡ ಈ ಯೋಜನೆ ಅಡಿಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ಪ್ರಾರಂಭಿಸಬಹುದು. ಸಾವಿರ ರೂಪಾಯಿಗಳ ಕನಿಷ್ಠ ಹಣದಿಂದಲೂ ಕೂಡ ಯೋಜನೆಯನ್ನು ಪ್ರಾರಂಭಿಸಬಹುದಾಗಿತ್ತು ಪ್ರತಿ ವರ್ಷ ಬಡ್ಡಿ ಸಿಗುತ್ತದೆ.
Comments are closed.