Toyota Glanza: ಜನರು ಇದೇ ಇದೇ ಬೇಕು ಎಂದು ಖರೀದಿ ಮಾಡುತ್ತಿರುವ ಟೊಯೋಟಾ ಕಾರು- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Toyota Glanza Car Specifications, features, Mileage, Price and other details.

Toyota Glanza: ನಮಸ್ಕಾರ ಸ್ನೇಹಿತರೇ, ಭಾರತದ ಆಟೋಮೊಬೈಲ್ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವನ್ನು ಪಡೆದುಕೊಂಡಿದೆ. ಸಾಕಷ್ಟು ವಿದೇಶಿ ಕಂಪನಿಗಳು ಕೂಡ ಭಾರತದಲ್ಲಿ ತಮ್ಮ ಕಾರ್ ಗಳನ್ನು ಬಿಡುಗಡೆ ಮಾಡುತ್ತಿದ್ದು ಅದರಲ್ಲೂ ವಿಶೇಷವಾಗಿ ಲೇಟೆಸ್ಟ್ ಆಗಿ ಟೊಯೋಟಾ ಸಂಸ್ಥೆ ಭಾರತದಲ್ಲಿ ಬಿಡುಗಡೆ ಮಾಡಿರುವ toyota glanza ಕಾರಿಗೆ ಭಾರತೀಯ ಗ್ರಾಹಕರು ಫಿದಾ ಆಗಿದ್ದು ಎಲ್ಲರೂ ಕೂಡ ಈ ಕಾರಿನ ಮೇಲೆ ತಮ್ಮ ಮನಸ್ಸನ್ನು ನೆಟ್ಟಿದ್ದಾರೆ. ಬನ್ನಿ ಅಷ್ಟಕ್ಕೂ ಈ ಕಾರಿನಲ್ಲೇನಿದೆ ಅನ್ನೋದನ್ನ ತಿಳಿದುಕೊಳ್ಳೋಣ.

Toyota Glanza Car Specifications, features, Mileage, Price and other details.

toyota glanza ಕಾರು ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ಅಲ್ಲಿರುವಂತಹ ಪ್ರೀಮಿಯಂ ಕಾರ್ ಆಗಿದೆ. 6.81 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಈ ಕಾರನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದು ನಾಲ್ಕು ವೇರಿಯಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದರ ಬುಕ್ ಮಾಡಿದ ನಂತರ ಒಂದು ತಿಂಗಳ ವೈಟಿಂಗ್ ಪಿರಿಯಡ್ ನಂತರ ಕಾರನ್ನು ಪಡೆದುಕೊಳ್ಳಬಹುದಾಗಿದೆ. ಸುಜುಕಿ ಬಲೆನೋ ಕಾರಿನ ಪ್ಲಾಟ್ಫಾರ್ಮ್ ನಲ್ಲಿ ನಿರ್ಮಾಣವಾಗಿರುವ ಈ ಕಾರಿನಲ್ಲಿ ನಾಲ್ಕು ವೇರಿಯಂಟ್ಗಳ ಖರೀದಿಗಾಗಿ ಒಂದು ತಿಂಗಳ ಕಾಲ ಕಾಯಬೇಕಾಗುತ್ತದೆ.

ಇದನ್ನು ಕೂಡ ಓದಿ; Volvo EM90: ಒಮ್ಮೆ ಚಾರ್ಜ್ ಮಾಡಿ 738 km ಮೈಲೇಜ್ ಕೊಡುತ್ತೆ, ಬರುತ್ತಿದೆ ಮಸ್ತ್ ಕಾರ್

toyota glanza ಕಾರು ಬಹುತೇಕ ಸ್ಪೋರ್ಟ್ಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಇಂಜಿನ್ ವಿಚಾರಕ್ಕೆ ಬರೋದಾದ್ರೆ 1.2 ಲೀಟರ್ ಡುಯಲ್ ಜಟ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. ಗೇರ್ ಬಾಕ್ಸ್ ವಿಚಾರಕ್ಕೆ ಬಂದರೆ ಐದು ಸ್ಪೀಡ್ ಮಾನ್ಯುಯಲ್ ಹಾಗೂ ಐದು ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. CNG ಆಯ್ಕೆಯನ್ನು ಕೂಡ ಈ ಕಾರಿನ ಜೊತೆಗೆ ನೀಡಲಾಗಿದೆ. ಹೊಸ ಡಿಸೈನ್ ಶೈಲಿಯ ಜೊತೆಗೆ ಕಾರನ್ನು ಮಾರುಕಟ್ಟೆಗೆ ತರಲಾಗಿದೆ.

Toyota Glanza Car Specifications, features, Mileage, Price and other details.
Toyota Glanza Car Specifications, features, Mileage, Price and other details.

ಕಾರಿನಲ್ಲಿ ಹೊಸ ಗ್ರಿಲ್, ಬಂಪರ್, ಕ್ರೋಮ್ ನ್ನು ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. LED DRL ಗಳನ್ನು ಅಳವಡಿಸಿರುವುದನ್ನು ನೀವು toyota glanza ಕಾರಿನಲ್ಲಿ ಗಮನಿಸಬಹುದಾಗಿದೆ. toyota glanza ಕಾರಿನಲ್ಲಿ 16 ಇಂಚುಗಳ ಅಲಾಯ್ ವೀಲ್ ಅಳವಡಿಸಿರುವುದನ್ನು ಕೂಡ ಕಾಣಬಹುದಾಗಿದೆ. ಈ ಕಾರಿನ ಕ್ಯಾಬಿನ್ ಸೇಮ್ ಬೋಲೇನೋ ಕಾರಿನ ರೀತಿಯಲ್ಲೇ ಇದೆ. ಹೊಸ ಇನ್ಸ್ಟ್ರುಮೆಂಟಲ್ ಕನ್ಸೋಲ್, ಸೆಂಟರ್ ಇನ್ಸ್ಟ್ರುಮೆಂಟಲ್ ಕನ್ಸೋಲ್ನಲ್ಲಿ ಏರ್ ವೆಂಟ್ ಅನ್ನು ಹೊಂದಿದೆ ಹಾಗೂ ಹಿಂಭಾಗದಲ್ಲಿ ಆಟೋಮೆಟಿಕ್ ಎಸಿ ಇದೆ.

ಈ ಕಾರಿನಲ್ಲಿ ಹೆಚ್ಚುವರಿ ರೂಪದಲ್ಲಿ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಯರ್ ಅಳವಡಿಸಲಾಗಿದೆ. ಒಂಬತ್ತು ಇಂಚಿನ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ವಾಯ್ಸ್ ಅಸಿಸ್ಟ್, ರಿಮೋಟ್ ಲಾಕ್ ಆಗುವ ಅನ್ಲಾಕ್, 60 ಡಿಗ್ರಿ ಕ್ಯಾಮೆರಾ ಸೇರಿದಂತೆ ಕನೆಕ್ಟಿವಿಟಿ ಟೆಕ್ನಾಲಜಿಯನ್ನು ಕೂಡ ನೀವು ಕಾಣಬಹುದಾಗಿದೆ.

Explore more about The new Toyota Glanza

toyota glanza ಕಾರಿನಲ್ಲಿ ಸುರಕ್ಷತೆಯ ವಿಚಾರಕ್ಕಾಗಿ ಕೂಡ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರು ಏರ್ ಬ್ಯಾಗ್ ಗಳು, ಈಎಸ್‌ಪಿ ಹಾಗು ಕ್ರೂಸ್ ಕಂಟ್ರೋಲ್ ಅನ್ನು ಕೂಡ ನೀವು ಈ ಕಾರ್ಯದಲ್ಲಿ ಗಮನಿಸಬಹುದಾಗಿದೆ. ಇನ್ನು ಈ ಕಾರು 5 ಬಣ್ಣಗಳಲ್ಲಿ ಕೂಡ ನಿಮಗೆ ಲಭ್ಯವಿರುತ್ತದೆ. ಈ ಬಣ್ಣಗಳಲ್ಲಿ ನಿಮಗೆ ಇಷ್ಟ ಆಗಿರುವಂತಹ ಬಣ್ಣವನ್ನು ಆಯ್ಕೆ ಮಾಡಿ ನೀವು ಕಾರನ್ನು ಖರೀದಿ ಮಾಡಬಹುದಾಗಿದೆ. toyota glanza ಕಾರಿನ ಬಗ್ಗೆ ಇರುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಮೂಲಕ ತಿಳಿಸಿದ್ದು ಕಾರಿನ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ ಎಂಬುದಾಗಿ ನಾವು ಭಾವಿಸುತ್ತೇವೆ.

Comments are closed.