Biggboss Drone Prathap: ಮತ್ತೆ ನಡೆಯುತ್ತಿದೆ ಮೋಸ. ಡ್ರೋನ್ ಪ್ರತಾಪ್ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹೊಸ ಪೋಸ್ಟ್.
Biggboss Drone Prathap: ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಅನ್ನೋದು ಖಂಡಿತವಾಗಿಯೂ ಕೂಡ ಪ್ರತಿಯೊಬ್ಬ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಪ್ರತಿದಿನ ಸಂಜೆ ಗೆಲ್ಲುವುದಕ್ಕೆ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಜನಪ್ರಿಯ ಆಗೋದೇ ಬಿಗ್ ಬಾಸ್ ಮನೆಯಲ್ಲಿ ನಡೆಯುವಂತಹ ಹೈಡ್ರಾಮಗಳು ಹಾಗೂ ಮನೋರಂಜನಾತ್ಮಕ ವಿಚಾರಗಳಿಗಾಗಿ. ಅದರಲ್ಲಿ ವಿಶೇಷವಾಗಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್(Drone Prathap) ಮನೋರಂಜನೆಯ ಕೇಂದ್ರ ಬಿಂದು ಆಗಿದ್ದಾರೆ ಎಂದರೂ ಕೂಡ ತಪ್ಪಾಗಲ್ಲ.
Biggboss Drone Prathap Instagram profile shared an update | Fans are worried about this.
ಈ ಹಿಂದೆ ಡ್ರೋನ್ ಪ್ರತಾಪ್ ಯಾವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಯಾವೆಲ್ಲ ಕಾರಣಗಳಿಗಾಗಿ ಟ್ರೊಲ್ ಆಗಿದ್ದರು ಎಂಬುದನ್ನು ನೀವಿನ್ನು ಮರೆತಿಲ್ಲ ಎಂಬುದಾಗಿ ಭಾವಿಸುತ್ತೇವೆ. ಒಂದು ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ರವರು ಇಂದು ಅದೇ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದು ಫ್ಯಾನ್ ಪೇಜ್ ಗಳನ್ನು ಕೂಡ ಹೊಂದಿದ್ದಾರೆ. ಇಲ್ಲಿ ಸದ್ಯದ ಮಟ್ಟಿಗೆ ಡ್ರೋನ್ ಪ್ರತಾಪ್ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಅಂದರೆ ಇನ್ಸ್ಟಾಗ್ರಾಮ್ ನಲ್ಲಿ ನಡೆಯುತ್ತಿರುವಂತಹ ಮೋಸದ ಬಗ್ಗೆ ಒಂದು ಪೋಸ್ಟ್ ಮಾಡಿದ್ದು ಈಗ ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಡ್ರೋನ್ ಪ್ರತಾಪ್ ವಿರುದ್ಧವೇ ನಡೆಯುತ್ತಿದೆ ಮೋಸ
ತಮ್ಮ ಮುಗ್ಧ ಹಾಗೂ ಸಂಯಮ ನಡೆಯಿಂದಾಗಿ ಎಲ್ಲರ ಮನ ಗೆಲ್ಲುತ್ತಿರುವಂತಹ ಡ್ರೋನ್ ಪ್ರತಾಪ್ ಅವರು ತಮ್ಮ ಬಗ್ಗೆ ಪ್ರೇಕ್ಷಕರಲ್ಲಿ ಇರುವಂತಹ ಎಲ್ಲಾ ರೀತಿಯ ತಪ್ಪು ಕಲ್ಪನೆಗಳನ್ನು ಕೂಡ ಹೋಗಲಾಡಿಸುವ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದ್ದು ಅದರ ನಡುವೆ ಕೂಡ ನಡೆಯುತ್ತಿರುವಂತಹ ಮೋಸದಾಟಗಳು ಕೂಡ ಹೊರಬಂದಿವೆ ಎಂಬುದಾಗಿ ತಿಳಿದುಬಂದಿದೆ.
ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಿಗ್ ಬಾಸ್ ಮನೆಯಲ್ಲಿ ಆ ವ್ಯಕ್ತಿಗಳು ಇದ್ದರೂ ಕೂಡ ಅವರ ಕುಟುಂಬಸ್ಥರು ಅಥವಾ ಸ್ನೇಹಿತರು ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಾರೆ. ಇನ್ನು ಡ್ರೋನ್ ಪ್ರತಾಪ್ ರವರ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಿಂದ ಪೋಸ್ಟ್ ಆಗಿರುವಂತಹ ಮಾಹಿತಿ ಪ್ರಕಾರ ಅವರ ಫ್ಯಾನ್ ಪೇಜ್ ಎನ್ನುವಂತಹ ಹೆಸರನ್ನು ಹೇಳಿಕೊಂಡು ಬೇರೆ ಬೇರೆ ಪ್ರಮೋಷನ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಕೂಡ ಓದಿ: ಮೂರೇ ನಿಮಿಷದಲ್ಲಿ 3 ಲಕ್ಷ ಕೊಡುತ್ತಾರೆ ಈ ಕಂಪನಿ. ವೆರಿಫಿಕೇಷನ್ ಇರಲ್ಲ, ನೇರವಾಗಿ ಬ್ಯಾಂಕ್ ಖಾತೆಗೆ.
ಹೀಗಾಗಿ ಡ್ರೋನ್ ಪ್ರತಾಪ್ ಅವರ ಹೆಸರನ್ನು ಹೇಳಿಕೊಂಡು ಯಾರಾದರೂ ಹಣವನ್ನು ಕೇಳುತ್ತಿದ್ದರೆ ಹುಷಾರಾಗಿರಿ ಎನ್ನುವುದಾಗಿ ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಿಂದ ಅಧಿಕೃತವಾಗಿ ಪೋಸ್ಟ್ ಮಾಡಲಾಗಿದ್ದು ಈಗ ಈ ಮಾಹಿತಿ ಎಲ್ಲಾ ಕಡೆ ವೈರಲ್ ಆಗುತ್ತಿದೆ.
Comments are closed.