CIBIL Score: ಸಿಬಿಲ್ ಇಲ್ಲ ಅಂತ ಲೋನ್ ಕೊಡುತ್ತಿಲ್ಲವೇ- ಸಿಬಿಲ್ ಜಾಸ್ತಿ ಮಾಡಬೇಕು ಎಂದರೆ ಈ ಟಿಪ್ಸ್ ಫಾಲೋ ಮಾಡಿ

What is Cibil Score, how to manage it and how to increase cibil score easily explained in kannada

CIBIL Score: ನಮಸ್ಕಾರ ಸ್ನೇಹಿತರೇ ನಾವು ಪ್ರತಿಯೊಬ್ಬರೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಕನೆಕ್ಟೆಡ್ ಆಗಿ ಇದ್ದೇವೆ. ಇನ್ನು ಈ ಬ್ಯಾಂಕಿಂಗ್ ಲೋಕದಲ್ಲಿ ನೀವು ಗಮನಿಸಿರುವ ಹಾಗೆ ಕ್ರೆಡಿಟ್ ಸ್ಕೋರ್/CIBIL Score ಪ್ರಮುಖವಾಗಿರುತ್ತದೆ. ಯಾವುದೇ ರೀತಿಯ ಸಾಲವನ್ನು ಪಡೆದುಕೊಳ್ಳಲು ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನೀವು ಬೇಕಾದ ವಸ್ತುಗಳನ್ನು ಖರೀದಿಸಲು ಇದು ಅತ್ಯಂತ ಪ್ರಮುಖವಾಗಿ ಬೇಕಾಗಿರುತ್ತದೆ. ಪಡೆದುಕೊಂಡಿರುವ ಸಾಲವನ್ನು ಸರಿಯಾದ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಕಟ್ಟದೆ ಹೋದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅಂದರೆ ಸಿಬಿಲ್ ಸ್ಕೋರ್ ಹಾಳಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ರೆ ಬನ್ನಿ ಇದನ್ನು ಇಂಪ್ರೂವ್ ಮಾಡಿಕೊಳ್ಳುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

What is Cibil Score, how to manage it and how to increase cibil score easily explained in kannada
What is Cibil Score, how to manage it and how to increase cibil score easily explained in kannada

CIBIL Score ಅಥವಾ ಕ್ರೆಡಿಟ್ ಸ್ಕೋರ್ ಬಗ್ಗೆ ವಿವರ- What is Cibil Score and Why it is important

ಇದು 300 ರಿಂದ 900 ಅಂಕಗಳನ್ನು ಹೊಂದಿರುತ್ತದೆ. ಒಂದು ವೇಳೆ ನೀವು ಯಾವುದಾದರೂ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಹೋದಲ್ಲಿ ಆ ಸಂದರ್ಭದಲ್ಲಿ ಬ್ಯಾಂಕಿನವರು ಮೊದಲಿಗೆ ಚೆಕ್ ಮಾಡುವುದು ನಿಮ್ಮ ಕ್ರೆಡಿಟ್ ಸ್ಕೋರ್. ಇದು ಸರಿಯಾದ ರೀತಿಯಲ್ಲಿದ್ದರೆ ಮಾತ್ರ ಅಂದರೆ ಇದು ನಿಮ್ಮ ಸಾಲವನ್ನು ಕಟ್ಟುವ ಸಾಮರ್ಥ್ಯವನ್ನು ಬ್ಯಾಂಕಿನವರಿಗೆ ತಿಳಿಸುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ 750 ಅಂಕಗಳಿಗಿಂತ ಹೆಚ್ಚಿದ್ದರೆ ಅದನ್ನು ಉತ್ತಮ ಕ್ರೆಡಿಟ್ ಸ್ಕೋರ್ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ನಿಮಗೆ ಕೂಡಲೇ ಸಾಲ ಬೇಕಾದ ರೀತಿಯಲ್ಲಿ ದೊರಕುತ್ತದೆ. ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದುವುದರಿಂದ ಬೇಗ ಹಾಗೂ ಬೇಕಾದಷ್ಟು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕಡಿಮೆ ಆಗಿರುವಂತಹ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಆ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕೂಡ ನೀವು ಎದುರಿಸಬೇಕಾಗುತ್ತದೆ.

ಇದನ್ನು ಕೂಡ ಓದಿ: Bad Credit Loan: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕೂಡ ಲೋನ್ ಪಡೆದುಕೊಳ್ಳುವುದು ಹೇಗೆ? ಇದಕ್ಕಿಂತ ಸುಲಭ ಮತ್ತೊಂದಿಲ್ಲ.

ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಮೇಂಟೈನ್ ಮಾಡುವಂತಹ ಸರಿಯಾದ ವಿಧಾನ- How to manage Cibil Score

  1. ಈಗಾಗಲೇ ನೀವು ಪಡೆದುಕೊಂಡಿರುವಂತಹ ಲೋನ್ EMI ಅನ್ನು ಸರಿಯಾದ ಸಮಯದಲ್ಲಿ ಕಟ್ಟುವುದರ ಮೂಲಕ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಇನ್ನಷ್ಟು ಇಂಪ್ರೂವ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆಟೋ ಪೇಮೆಂಟ್ ಅನ್ನು ಕೂಡ ಆನ್ ಮಾಡಬಹುದಾಗಿದೆ. ನಿಮ್ಮ ಸಾಲ ಕಟ್ಟುವಂತಹ ನಡವಳಿಕೆಯನ್ನು ಗಮನಿಸಿ ಸಿಬಿಲ್ ಸ್ಕೋರ್ ಕಂಪೆನಿ ಖಂಡಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.
  2. ಅತ್ಯಂತ ಅರ್ಜೆಂಟ್ ಪರಿಸ್ಥಿತಿಯಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿ ಅವರು ನಿಮಗೆ ಕ್ರೆಡಿಟ್ ಕಾರ್ಡ್ ಮೂಲಕ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಪ್ರಮಾಣದ ಕ್ರೆಡಿಟ್ ಲಿಮಿಟ್ ಅನ್ನು ಕೂಡ ನೀಡಿರುತ್ತಾರೆ. ಆದರೆ ನೀವು ಕೇವಲ 30% ಕಿಂತ ಕಡಿಮೆ ಕ್ರೆಡಿಟ್ ಲಿಮಿಟ್ ಅನ್ನು ಬಳಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಉದಾಹರಣೆಗೆ ನಿಮಗೆ 6 ಲಕ್ಷ ರೂಪಾಯಿಗಳ ಲಿಮಿಟ್ ನೀಡಿದರೆ ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಹಣವನ್ನು ಖರ್ಚು ಮಾಡಿದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಲಿಮಿಟ್ ನ 30% ಖರ್ಚು ಮಾಡಿದ್ರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದಕ್ಕೆ ಕಾರಣವಾಗುತ್ತೆ.
  3. ಯಾವುದೇ ರೀತಿಯ ಸಾಲವನ್ನು ನೀವು ಬ್ಯಾಂಕಿಂಗ್ ಅಥವಾ NBFC ಸಂಸ್ಥೆಗಳಿಂದ ಪಡೆದುಕೊಂಡಿದ್ದರೆ ಅದನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ನಿಮ್ಮ ಸಾಲವನ್ನು ಕಟ್ಟುವಂತಹ ಸಾಮರ್ಥ್ಯವನ್ನು ಬ್ಯಾಂಕಿಂಗ್ ಸಂಸ್ಥೆಗಳಿಗೆ ಸಾಬೀತುಪಡಿಸುತ್ತದೆ.
  4. ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಪದೇ ಪದೇ ಅರ್ಜಿ ಸಲ್ಲಿಸುವುದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಹಾಳಾಗುವುದಕ್ಕೆ ಒಂದು ಕಾರಣವಾಗಿರುತ್ತದೆ. ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬೇಕಾದಾಗ ನೀವು ಈ ರೀತಿಯ ಪ್ರಕ್ರಿಯೆಗಳನ್ನು ಮಾಡಬೇಕಾಗಿರುತ್ತದೆ. ಹೀಗಾಗಿ ಯಾವುದೇ ಅಗತ್ಯ ಇಲ್ಲದಿದ್ದರೂ ಕೂಡ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಪದೇ ಪದೇ ಮನವಿ ಸಲ್ಲಿಸುವುದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
  5. ಒಂದು ವೇಳೆ ನಿಮಗೆ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳನ್ನು ನಿರ್ವಹಣೆ ಮಾಡುವಂತಹ ಸಾಮರ್ಥ್ಯ ಇದ್ರೆ ಮಾತ್ರ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳನ್ನು ಪಡೆದುಕೊಳ್ಳುವುದು ಅಥವಾ ನಿರ್ವಹಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕರಾತ್ಮಕ ಪರಿಣಾಮ ಬೀರುವುದಕ್ಕೆ ಕಾರಣವಾಗಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.

ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಪ್ರಕ್ರಿಯೆ ಹಾಗೂ ನಿಯಮಗಳನ್ನು ನೀವು ಅಚ್ಚುಕಟ್ಟಾಗಿ ಫಾಲೋ ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಹಾಗೂ ಕೆಲವೊಂದು ಬೇಕಾಗುವಂತಹ ಸಂದರ್ಭದಲ್ಲಿ ಸಾಲ ಕೂಡ ನಿಮಗೆ ಬೇಕಾಗುವ ರೀತಿಯಲ್ಲಿ ವೇಗವಾಗಿ ದೊರಕುತ್ತದೆ.

Comments are closed.