Celerio: ಬಹು ಬೇಡಿಕೆ ಇರುವ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್- ಅಂಗಡಿಗೆ ಮುಗಿಬಿದ್ದ ಜನ. Celerio ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್

Maruti Suzuki Celerio ಕಾರಿನ ವಿಶೇಷತೆಗಳು - Maruti Suzuki Celerio Car features and Specifications

Celerio: ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ ಅತ್ಯಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡುವಂತಹ ಮಾರುತಿ ಸುಜುಕಿ ಸಂಸ್ಥೆ(Maruti Suzuki) ತನ್ನ ಕಾರುಗಳ ಮೇಲೆ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಎಕ್ಸ್ಚೇಂಜ್ ಬೋನಸ್ ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ಗಳನ್ನು ಕೂಡ ನೀಡುವುದಕ್ಕೆ ಹೊರಟಿದೆ. ವಿಶೇಷವಾಗಿ ಮಾರುತಿ ಸುಜುಕಿ Celerio ಕಾರಿನ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

Celerio ಕಾರಿನ Vxi, Zxi, Zxi Plus ವೇರಿಯಂಟ್ಗಳ ಮೇಲೆ ಮಾರುತಿ ಸುಜುಕಿ ಸಂಸ್ಥೆ ಈ ದೀಪಾವಳಿ ಹಬ್ಬದ ವಿಶೇಷವಾಗಿ 59 ಸಾವಿರ ರೂಪಾಯಿಗಳ ವರೆಗೂ ಕೂಡ ರಿಯಾಯಿತಿ ನೀಡೋಕೆ ಹೊರಟಿದೆ. ಈ 59 ಸಾವಿರದಲ್ಲಿ 35,000 ಕ್ಯಾಶ್ ಡಿಸ್ಕೌಂಟ್, 20,000 ಎಕ್ಸ್ಚೇಂಜ್ ಬೋನಸ್, 4,000ಗಳನ್ನು ಕಾರ್ಪೊರೇಟ್ ಡಿಸ್ಕೌಂಟ್ ರೂಪದಲ್ಲಿ ನೀಡಲಾಗುತ್ತದೆ. CNG ಹಾಗೂ AMT ವೇರಿಯಂಟ್ ನಲ್ಲಿ ಈ ಆಫರ್ ಅನ್ನು 54,000 ರೂಪಾಯಿಗಳಿಗೆ ಇಳಿಸಲಾಗಿದೆ.

Maruti Suzuki Celerio ಕಾರಿನ ವಿಶೇಷತೆಗಳು – Maruti Suzuki Celerio Car features and Specifications

Celerio ಕಾರಿನಲ್ಲಿ K10C 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಐದು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. CNG ಕಾರಿನ ಆಯ್ಕೆಯನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಇನ್ನು ಈ ಕಾರನ್ನು ಹಾರ್ಟೆಕ್ಟ್ ಪ್ಲ್ಯಾಟ್ ಫಾರ್ಮ್ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ. ಸುರಕ್ಷಿತ ವಿಭಾಗದಲ್ಲಿ ಕೂಡ ಈ ಕಾರಿನಲ್ಲಿ ಕೆಲಸ ಮಾಡಲಾಗಿದೆ. ಮುಂದಿನ ಸೀಟುಗಳಲ್ಲಿ ಡ್ಯುಯಲ್ ಏರ್ ಬ್ಯಾಗ್ ಗಳನ್ನು ಕೂಡ ಅಳವಡಿಸಲಾಗಿದೆ. ಸ್ಪೀಡ್ ಅಲರ್ಟ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ನಂತರ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೂಡ ಕಾಣಬಹುದಾಗಿದೆ.

Maruti Suzuki Celerio ಕಾರಿನ ವಿಶೇಷತೆಗಳು - Maruti Suzuki Celerio Car features and Specifications
Maruti Suzuki Celerio ಕಾರಿನ ವಿಶೇಷತೆಗಳು – Maruti Suzuki Celerio Car features and Specifications
Maruti Suzuki Celerio Car variants

Celerio ಕಾರ್ ಅನ್ನು ಒಟ್ಟಾರೆಯಾಗಿ ಏಳು ವೇರಿಯಂಟ್ ಗಳಲ್ಲಿ ಹಾಗೂ ವಿಭಿನ್ನ ಬಣ್ಣಗಳ ಆಪ್ಶನ್ ನಲ್ಲಿ ಕೂಡ ಖರೀದಿ ಮಾಡಬಹುದಾಗಿದೆ. ರೌಂಡ್ ಹೆಡ್ ಲ್ಯಾಂಪ್, ಕ್ರೋಮ್ ಸ್ಕ್ರಿಪ್ ಗಳು, ಮಾರುತಿ ಸುಜುಕಿ ಸಂಸ್ಥೆಯ ಸಿಗ್ನೇಚರ್ ಲೋಗೋ ಕೂಡ ಕಾಣಬಹುದಾಗಿದೆ. 15 ಇಂಚಿನ ಅಲಾಯ್ ವೀಲ್ ಜೋಡಣೆಯನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮಲ್ಟಿ ಟಾಸ್ಕಿಂಗ್ ಸ್ಟೇರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಸೇರಿದಂತೆ ಸಾಕಷ್ಟು ವಿಶೇಷತೆಗಳನ್ನು ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ.

Price details of Maruti Suzuki Celerio

ಕಾರ್ ನಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಕೂಡ ಬಳಕೆ ಮಾಡಬಹುದಾಗಿದೆ. ಹೆಡ್ ಲೈಟ್ ಅನ್ನು ಕೂಡ Celerio ನಲ್ಲಿ ಅಪ್ಡೇಟ್ ಮಾಡಲಾಗಿದೆ. ಸ್ಟಾರ್ಟ್ ಸ್ಟಾಪ್ ಫಂಕ್ಷನ್ ಬಟನ್ ಅನ್ನು ಈ ಕಾರಿನಲ್ಲಿ ಕಾಣಬಹುದಾಗಿದೆ. Celerio ಕಾರಿನ ಎಕ್ಸ್ ಶೋರೂಮ್ ಬೆಲೆ ಐದರಿಂದ ಏಳು ಲಕ್ಷ ರೂಪಾಯಿಗಳ ನಡುವೆ ಪ್ರಾರಂಭವಾಗುತ್ತದೆ.

ಇದನ್ನು ಕೂಡ ಓದಿ: Lotus EV Car: 20 ನಿಮಿಷ ಚಾರ್ಜ್ ಮಾಡಿದರೇ ಸಾಕು- 600 KM ಓಡುತ್ತೆ ಈ ಕಾರು- ಬೆಲೆ ವಿಶೇಷತೆಯ ಸಂಪೂರ್ಣ ಡೀಟೇಲ್ಸ್

Comments are closed.