Lotus EV Car: 20 ನಿಮಿಷ ಚಾರ್ಜ್ ಮಾಡಿದರೇ ಸಾಕು- 600 KM ಓಡುತ್ತೆ ಈ ಕಾರು- ಬೆಲೆ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Lotus EV Car - Eletre Price 2023, Images, Colours , features and Specifications

Lotus EV Car: ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಡಿಮ್ಯಾಂಡ್ ಎರಡು ಕೂಡ ಭಾರತ ದೇಶದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿದೆ. ಇನ್ನು ಬ್ರಿಟನ್ ಮೂಲದ ಕಂಪನಿ ಆಗಿರುವಂತಹ Lotus ಕೂಡ ಭಾರತ ದೇಶದಲ್ಲಿ ತನ್ನ ಎಂಟ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಅದರಲ್ಲೂ ಲೇಟೆಸ್ಟ್ ಆಗಿ ಲಾಂಚ್ ಮಾಡಿರುವಂತಹ Lotus Eletre ಎಲೆಕ್ಟ್ರಿಕ್ ಕಾರಿನ ಬಗ್ಗೆ ಇವತ್ತಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದು ತಪ್ಪದೇ ಕೊನೆವರೆಗೂ ಮಾಹಿತಿಯನ್ನು ಓದುವ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳಿ.

Lotus Eletre ಇದು ಪ್ರೀಮಿಯಂ ಸೆಗ್ಮೆಂಟ್ನಲ್ಲಿ ಕಾಣಿಸಿಕೊಳ್ಳುವಂತಹ ಕಾರ್ ಆಗಿದ್ದು ಇದರ ಬೆಲೆಯನ್ನು 2.55 ಕೋಟಿ ರೂಪಾಯಿಗಳಿಂದ ಪ್ರಾರಂಭಿಸಲಾಗಿದೆ. ಇದು ಅತ್ಯಂತ ಸ್ಟೈಲಿಶ್ ಹಾಗೂ ಡಿಸೈನ್ ಅನ್ನು ಹೊಂದಿರುವಂತಹ ಕಾರು ಮಾತ್ರವಲ್ಲದೆ ಅತ್ಯಂತ ದುಬಾರಿಕಾರು ಕೂಡ ಹೌದು. Lotus ಕಂಪನಿಯ ಮೊದಲ ಶೋರೂಮ್ ಭಾರತದಲ್ಲಿ ದೆಹಲಿಯಲ್ಲಿ ಪ್ರಾರಂಭವಾಗಲಿದೆ ಎನ್ನುವಂತಹ ಮಾಹಿತಿಗಳು ಕೂಡ ಸಿಕ್ಕಿವೆ. ಇಲ್ಲಿಂದ ಪ್ರಾರಂಭವಾದ ನಂತರ ದೇಶದಲ್ಲಿ ಬೇರೆ ಬೇರೆ ಡೀಲರ್ ಶಿಪ್ಗಳನ್ನು ಪ್ರಾರಂಭಿಸಲಾಗುತ್ತದೆ.

Lotus Eletre – ಎಲೆಕ್ಟ್ರಿಕ್ ಕಾರ್ ಭಾರತದಲ್ಲಿ – Lotus EV electric vehicle in India (Lotus EV car)

Lotus ಸಂಸ್ಥೆ Lotus Eletre ಎಲೆಕ್ಟ್ರಿಕ್ ಕಾರ್ ಅನ್ನು ಮೂರು ವೇರಿಯಂಟ್ ಗಳಲ್ಲಿ ಭಾರತ ದೇಶದಲ್ಲಿ ಲಾಂಚ್ ಮಾಡಲಿದೆ. Eletre, Eletre S ಹಾಗೂ Eletre R ಎನ್ನುವಂತಹ ಮೂರು ವೇರಿಯಂಟ್ ಗಳು ಭಾರತದಲ್ಲಿ ಪ್ರಥಮವಾಗಿ ಲಾಂಚ್ ಆಗಲಿವೆ.

ಯಾವ ರೀತಿಯಲ್ಲಿ ಇರಲಿದೆ ಗೊತ್ತಾ Lotus Eletre ಎಸ್ ಯು ವಿ ಎಲೆಕ್ಟ್ರಿಕ್ ಕಾರ್ – How is Lotus Eletre vehicle?

Lotus Eletre ಎಲೆಕ್ಟ್ರಿಕ್ ಕಾರ್ (Lotus EV car) ಸಂಪೂರ್ಣವಾಗಿ ಲಗ್ಜುರಿ ಸ್ಪೋರ್ಟ್ಸ್ ಕಾರ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಈ ಕಾರಿನಲ್ಲಿ 22 ಇಂಚುಗಳ 10 ಸ್ಪೋಕ್ ಅಲಾಯ್ ವೀಲ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಇದರ ಏರೋಡೈನಾಮಿಕ್ಸ್ ಅನ್ನು ಹೆಚ್ಚಿಸುವ ಕಾರಣಕ್ಕಾಗಿ ಫ್ರಂಟ್ ಗ್ರಿಲ್ ಅನ್ನು ಕೂಡ ವಿಶೇಷವಾಗಿ ಡಿಸೈನ್ ಮಾಡಲಾಗಿದೆ.

Lotus EV Car - Eletre Price 2023, Images, Colours , features and Specifications
Lotus EV Car – Eletre Price 2023, Images, Colours , features and Specifications

Lotus Eletre ಕಾರಿನ ಒಳ ವಿನ್ಯಾಸLotus Eletre Interior

Lotus ಕಂಪನಿ ಯಾವಾಗಲೂ ಕೊಡ ತನ್ನ ಕಾರಿನ ಒಳ ವಿನ್ಯಾಸದ ಡ್ಯಾಶ್ ಬೋರ್ಡ್ ಅನ್ನು ಅಡ್ವಾನ್ಸ್ ಫೀಚರ್ ಗಳ ಜೊತೆಗೆ ಜೋಡಿಸುತ್ತದೆ. 15.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಇದು ಹೈಪರ್ OS ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಸೆಂಟರ್ ಕನ್ಸೋಲ್ ಅನ್ನು ಅಳವಡಿಸಲಾಗಿದ್ದು ಇದರಿಂದ ನೀವು ಸಾಕಷ್ಟು ಫಂಕ್ಷನ್ ಗಳನ್ನು ಬಟನ್ ಮೂಲಕ ಕಾರ್ಯ ನಿರ್ವಹಿಸಬಹುದಾಗಿದೆ. ತ್ರಿಬಲ್ ರಿಬ್ಬನ್ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ಇದರಲ್ಲಿ ಕಾಣಬಹುದಾಗಿದೆ. ಡ್ರೈವರ್ ಮಾನಿಟರಿಂಗ್ ಕ್ಯಾಮೆರಾ, 4 Zone ಕ್ಲೈಮೇಟ್ ಕಂಟ್ರೋಲ್, ಡಾಲ್ಬಿ ಅಟ್ಮಾಸ್ ಜೊತೆಗೆ ಹದಿನೈದು ಸ್ಪೀಕರ್ ಗಳ KEF ಮ್ಯೂಸಿಕ್ ಸಿಸ್ಟಮ್ ಅನ್ನು ಕೂಡ ಅಳವಡಿಸಲಾಗಿದೆ. ADAS ನಂತಹ ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವಂತಹ ಫೀಚರ್ಸ್ ಅನ್ನು ಕೂಡ ಅಳವಡಿಸಲಾಗಿದೆ. (Lotus EV car)

Lotus Eletre ಕಾರಿನ ಎಲೆಕ್ಟ್ರಿಕ್ ಮೋಟಾರ್ ಹಾಗೂ ಬ್ಯಾಟರಿ, ರೇಂಜ್- Specifications, Mileage range and features of Lotus Eletre

Lotus Eletre ಕಾರಿನಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುವಂತಹ 603bhp ಸಾಮರ್ಥ್ಯದ ಡ್ಯುಯಲ್ ಮೋಟರ್ ಸಿಸ್ಟಮ್ ಅನ್ನು ಮೊದಲ ಎರಡು ವೇರಿಯಂಟ್ ಗಳ ಕಾರ್ ನಲ್ಲಿ ಅಳವಡಿಸಲಾಗಿದ್ದು ಟಾಪ್ ವೇರಿಯಂಟ್ ನಲ್ಲಿ 905bhp ಡ್ಯೂಯಲ್ ಮೋಟರ್ ಸೆಟ್ ಅಪ್ ಅನ್ನು ಅಳವಡಿಸಲಾಗಿದೆ. 112kwh ಸಾಮರ್ಥ್ಯವನ್ನು ಹೊಂದಿರುವಂತಹ ಬೆಸ್ಟ್ ಕ್ವಾಲಿಟಿ ಬ್ಯಾಟರಿಯನ್ನು ಕೂಡ ಅಳವಡಿಸಲಾಗಿದೆ. ಮೊದಲೇ ಎರಡು ಬೇಸಿಕ್ ವೇರಿಯಂಟ್ ಗಳಲ್ಲಿ ಇದು 600 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುತ್ತದೆ ಹಾಗೂ Lotus Eletre R ವೇರಿಯಂಟ್ ನಲ್ಲಿ ಇದು 490 ಕಿಲೋಮೀಟರ್ಗಳ ವರೆಗು ಕೂಡ ರೇಂಜ್ ಅನ್ನು ನೀಡುತ್ತದೆ. Lotus Eletre R ಕಾರಿನ ಟಾಪ್ ಸ್ಪೀಡ್ 285 km ಪ್ರತಿ ಗಂಟೆ ಆಗಿದೆ.

Lotus Eletre ಕಾರಿನ ಚಾರ್ಜಿಂಗ್ ಫೆಸಿಲಿಟಿ

Lotus Eletre ಕಾರುಗಳ (Lotus EV car) ಚಾರ್ಜಿಂಗ್ ವಿಚಾರಕ್ಕೆ ಬರೋದಾದ್ರೆ ಸ್ಪೀಡ್ ಚಾರ್ಜರ್ ಮೂಲಕ ಈ ಕಾರುಗಳನ್ನು ಹತ್ತರಿಂದ 80% ಚಾರ್ಜ್ ಅನ್ನು ಕೇವಲ 20 ನಿಮಿಷಗಳಲ್ಲಿ ಮಾಡಿ ಮುಗಿಸಬಹುದಾಗಿದೆ. 22kwh ಸಾಮರ್ಥ್ಯದ ಎಸಿ ಚಾರ್ಜರ್ ಅನ್ನು ಬಳಸಿಕೊಳ್ಳುವ ಮೂಲಕ ನೀವು ಈ ಕೆಲಸವನ್ನು ಸುಲಭ ರೂಪದಲ್ಲಿ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಕಾರು ಭಾರತದ ಮಾರುಕಟ್ಟೆಗೆ ಕಾಲಿಟ್ಟ ಮೇಲೆ ಎಲೆಕ್ಟ್ರಿಕ್ ವಾಹನಗಳ ಇಂಡಸ್ಟ್ರಿಯ ಬೆಳವಣಿಗೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.

ಇದನ್ನು ಕೂಡ ಓದಿ; Jio Recharge Plans: ಒಮ್ಮೆ ಈ ಪ್ಲಾನ್ ರಿಚಾರ್ಜ್ ಮಾಡಿದರೆ ವರ್ಷ ಪೂರ್ತಿ ಬೇಡ. ಅದು ಕಡಿಮೆ ಬೆಲೆಗೆ.

Comments are closed.